Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸದೀಯ ಸಂವಾದ ಮತ್ತು ಸಹಕಾರ ಬಲವರ್ಧನೆಗೊಳಿಸುವಲ್ಲಿ 12ನೇ ಬ್ರಿಕ್ಸ್ (BRICS) ಸಂಸದೀಯ ವೇದಿಕೆಯ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಕುರಿತು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಬರೆದ ಲೇಖನವೊಂದನ್ನು ಹಂಚಿಕೊಂಡಿದ್ದಾರೆ.

ಈ ಲೇಖನದಲ್ಲಿ ಶ್ರೀ ಓಂ ಬಿರ್ಲಾ ಅವರು ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ನಡುವೆ ಸಂಸದೀಯ ಸಂವಾದ ಹಾಗೂ ಸಹಕಾರ ಬಲವರ್ಧನೆಯಲ್ಲಿ 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯ ಪಾತ್ರದ ಕುರಿತು ವಿವರಿಸಿದ್ದಾರೆ. ಭಾರತದ 2026ರ ಬ್ರಿಕ್ಸ್ ಅಧ್ಯಕ್ಷತೆಯ ನಾಲ್ಕು ಪ್ರಮುಖ ಆಧಾರಸ್ತಂಭಗಳ ಮಾರ್ಗದರ್ಶನದಲ್ಲಿ, ಈ ವೇದಿಕೆಯು ಸಾಂಸ್ಥಿಕ ಸ್ಥಿತಿಸ್ಥಾಪಕತ್ವ, ಕೃತಕ ಬುದ್ಧಿಮತ್ತೆ (ಎಐ) ಆಧರಿತ ಆಡಳಿತ, ‘ದಕ್ಷಿಣ-ದಕ್ಷಿಣ’ ಸಹಕಾರ ಮತ್ತು ಸುಸ್ಥಿರತೆಯ ವಿಷಯಗಳ ಕುರಿತು ಚರ್ಚಿಸಲಿದೆ ಎಂದು ಲೇಖನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ತನ್ನ X ಪೋಸ್ಟ್‌ ನಲ್ಲಿ ಹೀಗೆ  ಬರೆದಿದೆ:

“ಗೌರವಾನ್ವಿತ @loksabhaspeaker ಶ್ರೀ @ombirlakota ಅವರು, ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳ ನಡುವೆ ಸಂಸದೀಯ ಸಂವಾದ ಹಾಗೂ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸುವಲ್ಲಿ 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯ ಪಾತ್ರದ ಕುರಿತು ಬರೆದಿದ್ದಾರೆ.

ಭಾರತದ 2026ರ ಬ್ರಿಕ್ಸ್ ಅಧ್ಯಕ್ಷತೆಯ ನಾಲ್ಕು ಪ್ರಮುಖ ಆಧಾರಸ್ತಂಭಗಳ ಮಾರ್ಗದರ್ಶನದಲ್ಲಿ, ಈ ವೇದಿಕೆಯು ಸಾಂಸ್ಥಿಕ ಸ್ಥಿತಿಸ್ಥಾಪಕತ್ವ, ಕೃತಕ ಬುದ್ಧಿಮತ್ತೆ ಆಧರಿತ ಆಡಳಿತ, ‘ದಕ್ಷಿಣ-ದಕ್ಷಿಣ’ ಸಹಕಾರ ಮತ್ತು ಸುಸ್ಥಿರತೆಯ ವಿಷಯಗಳ ಕುರಿತು ಚರ್ಚಿಸಲಿದೆ.”

 

*****