Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಕ್ಕರೆಗೆ ಸಂಬಂಧಿಸಿದ ಕೇಂದ್ರದ ಆದೇಶದ ಸಿಂಧುತ್ವವನ್ನು ಆರು ತಿಂಗಳುಗಳ ಕಾಲ ವಿಸ್ತರಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸಕ್ಕರೆಗೆ ಸಂಬಂಧಿಸಿದಂತೆ 27.10.2016ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ಸಿಂಧುತ್ವವನ್ನು ಮತ್ತೆ ಆರು ತಿಂಗಳುಗಳ ಕಾಲ ಅಂದರೆ 29.04.2017 ರಿಂದ 28.10.2017ರವರೆಗೆ ವಿಸ್ತರಿಸಲು ತನ್ನ ಸಮ್ಮತಿ ಸೂಚಿಸಿದೆ.

ಯಾವಾಗ ಅಗತ್ಯ ಎನಿಸುತ್ತದೋಆಗ ಸಕ್ಕರೆಗೆ ಸಂಬಂಧಿಸಿದಂತೆ ದಾಸ್ತಾನಿನ ಮಿತಿ/ಪರವಾನಗಿ ಅವಶ್ಯಕತೆಗಳ ಕುರಿತು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ನಿಯಂತ್ರಣ ಆದೇಶಗಳನ್ನು ಹೊರಡಿಸಲು ಅವಕಾಶ ನೀಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ. ಈ ವಸ್ತುಗಳು ಶ್ರೀ ಸಾಮಾನ್ಯನಿಗೆ ಕೈಗೆಟಕುವ ದರದಲ್ಲಿ ದೊರಕುವಂತೆ ಮಾಡುವ ಪ್ರಯತ್ನಕ್ಕೆ ಮತ್ತು ಲಾಭಕೋರತನಕ್ಕೆ ಹಾಗೂ ಸರಕು ಬಚ್ಚಿಡುವ ಪ್ರವೃತ್ತಿಗೆ ಕಡಿವಾಣ ಹಾಕಲು ಈ ನಿರ್ಧಾರ ಸಹಕಾರಿ ಎಂದು ನಿರೀಕ್ಷಿಸಲಾಗಿದೆ.

ಹಾಲಿ ನಿರ್ಧಾರವು ಸರ್ಕಾರದಿಂದ ಅಧಿಸೂಚನೆಯಾಗಲಿದ್ದು, ತಮ್ಮ ಕಡೆಯಿಂದ ಮುಂದಿನ ಕ್ರಮ ಕೈಗೊಳ್ಳಲು ಇದನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗುತ್ತದೆ.

ಹಿನ್ನೆಲೆ

27.10.2016ರಂದು ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟವು, ಸಕ್ಕರೆಗೆ ಸಂಬಂಧಿಸಿದಂತೆ ಆರು ತಿಂಗಳುಗಳ ಕಾಲ ಪೂರೈಕೆ, ವಿತರಣೆ, ಮಾರಾಟ, ಉತ್ಪಾದನೆ, ದಾಸ್ತಾನು, ಸಂಗ್ರಹಣೆ, ಖರೀದಿ ಮತ್ತು ಸಾಗಣೆ ಇತ್ಯಾದಿಯ ಮೇಲೆ ಆರು ತಿಂಗಳುಗಳ ಕಾಲ ನಿಯಂತ್ರಣ ಹೇರಲು ರಾಜ್ಯಗಳಿಗೆ ಅವಕಾಶ ನೀಡಲು ನಿರ್ಧರಿಸಿತ್ತು. ಆ ಪ್ರಕಾರವಾಗಿ ಆಡಳಿತಾತ್ಮಕ ಇಲಾಖೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಕ್ಕರೆಯ ಮೇಲೆ 28.4.2017ರವರೆಗೆ ದಾಸ್ತಾನು ಮಿತಿ ಇತ್ಯಾದಿ ನಿರ್ಧರಿಸಲು, ಜಿ.ಎಸ್.ಆರ್.929(ಇ) ಎಂದು ಅಧಿಸೂಚನೆಯಾದ ನಿರ್ದಿಷ್ಟ ಪಡಿಸಿದ ಆಹಾರ ಪದಾರ್ಥಗಳ ಪರವಾನಗಿ ಅಗತ್ಯಗಳ ರದ್ದತಿ, ದಾಸ್ತಾನು ಮಿತಿ ಮತ್ತು ಸಾಗಣೆಯ ನಿರ್ಬಂಧಗಳ ಆದೇಶ 2016 ದಿನಾಂಕ 29.09.2016ಕ್ಕೆ ತಿದ್ದುಪಡಿ ತರುವ ಮೂಲಕ ಎಸ್.ಓ. 3341(ಇ) ದಿನಾಂಕ 27.10.2016ನ್ನು ಹೊರಡಿಸಲಾಯಿತು.

ಸಕ್ಕರೆಯ ದರವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಕೆಯು ನಿಯಮಿತವಾಗಿ ಕಾರ್ಖಾನೆಗಳ ದ್ವಾರದಲ್ಲಿ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಉಲ್ಲೇಖಿಸುತ್ತದೆ. 2016ರ ಸೆಪ್ಟೆಂಬರ್ ನಲ್ಲಿ ಚಿಲ್ಲರೆ ಮಾರಾಟ ದರ ಏಕಾ ಏಕಿ ಏರಿಕೆ ಆಗಿದ್ದನ್ನು ಗಮನಿಸಲಾಯಿತು. ಈ ದರ ಏರಿಕೆಯು ವಾಸ್ತವ ಕೊರತೆಗಿಂತಲೂ ಭಾವನೆಗಳ ಆಧಾರಿತವಾಗಿತ್ತು. ಹೀಗಾಗಿ ಸಕ್ಕರೆಯ ಪೂರೈಕೆ ನಿಯಂತ್ರಿಸಲು ಮತ್ತು ದರ ಏರಿಕೆಯ ಪ್ರವೃತ್ತಿಗೆ ಕಡಿವಾಣ ಹಾಕಲು, ಸೂಕ್ತ ದಾಸ್ತಾನು ಮಿತಿಯನ್ನು ನಿರ್ಧರಿಸಲು ಅಗತ್ಯಕ್ಕೆ ಅನುಗುಣವಾದ ನಿರ್ಧಾರದ ಅಗತ್ಯವಿತ್ತು. ಪ್ರಸಕ್ತ ಋತುವಿನಲ್ಲಿ ಬಳಕೆಗೆ ಅಗತ್ಯವಾದಷ್ಟು ಲಭ್ಯತೆಯ ಜೊತೆಗೆ, ಕಳೆದ ವರ್ಷ ಉತ್ಪಾದನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದಾಸ್ತಾನು ಮಾಡಿ ಮತ್ತು ಆ ಮೂಲಕ ಲಾಭ ಮಾಡಿಕೊಳ್ಳುವ ಇರಾದೆಗೆ ಕಡಿವಾಣ ಹಾಕಲು ದಾಸ್ತಾನು ಮಿತಿಯನ್ನು ಮತ್ತೆ ಮುಂದುವರಿಸುವ ಅಗತ್ಯ ಕಂಡು ಬಂದಿತ್ತು.

ಸಕ್ಕರೆ ವಲಯಕ್ಕೆ ಬೆಂಬಲ ನೀಡಲು, ಸರ್ಕಾರವು ಇತ್ತೀಚೆಗೆ ಕೈಗಾರಿಕೆಗಳಿಗೆ 4305 ಕೋಟಿ ರೂಪಾಯಿಗಳ ಮೃದು ಸಾಲದ ನೆರವನ್ನು ನೀಡಿದ್ದು, ಇದು ಸಕ್ಕರೆ ಕಾರ್ಖಾನೆಗಳ ಪರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದ್ದು, ಇದರಿಂದ 32 ಲಕ್ಷ ರೈತರಿಗೆ ನೆರವಾಗಲಿದೆ. ಅಲ್ಲದೆ ಪ್ರದರ್ಶನ ಆಧಾರಿತ ಉತ್ಪಾದನೆಗೆ, ಅರೆದ ಪ್ರತಿ ಕ್ವಿಂಟಾಲ್ ಕಬ್ಬಿಗೆ 4.50 ರೂ.ನಂತೆ ಸಬ್ಸಿಡಿಯನ್ನೂ ನೀಡಲಾಗುತ್ತಿದ್ದು, ಇದು ಕೂಡ ಸಕ್ಕರೆ ಕಾರ್ಖಾನೆಗಳ ಪರವಾಗಿ ರೈತರ ಖಾತೆಗೇ ಹೋಗುತ್ತಿದೆ.

ದೇಶೀಯ ಧಾರಣೆಯನ್ನು ಕೈಗೆಟಕುವಂತೆ ಮಾಡುವ ಸಲುವಾಗಿ, ಸರ್ಕಾರ ನಿರ್ಬಂಧಿತ ಪ್ರಮಾಣದ 5 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸಕ್ಕರೆಯನ್ನು ತಮ್ಮದೆ ಸ್ವಂತ ಶುದ್ಧೀಕರಣ ಸಾಮರ್ಥ್ಯದೊಂದಿಗೆ ಶೂನ್ಯ ಸುಂಕದ ಮೇಲೆ ಕಾರ್ಖಾನೆಗಳಿಂದ/ಶುದ್ಧೀಕರಣದಾರರಿಂದ ಆಮದಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ನಿರ್ಬಂಧಿತ ಪ್ರಮಾಣವು ಸಕ್ಕರೆ ಕಾರ್ಖಾನೆಗಳಿಗೆ ತಮ್ಮ ಹಣದ ಹರಿವು ಹೆಚ್ಚಿಸಿಕೊಳ್ಳಲು ಮತ್ತು ರೈತರ ಕಬ್ಬಿನ ಬಾಕಿ ತೀರಿಸಲು ಅವಕಾಶ ಕಲ್ಪಿಸುತ್ತದೆ.

***

AKT/VBA/SH