Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ದಾರ್ ಸರೋವರ್ ಅಣೆಕಟ್ಟೆಯನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಿ, ಗುಜರಾತ್ ನಲ್ಲಿ ಎರಡು ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2017ರ ಸೆಪ್ಟೆಂಬರ್ 17ರಂದು ಗುಜರಾತ್ ನ
ಕೆವಾಡಿಯಾದಲ್ಲಿ ಸರ್ದಾರ್ ಸರೋವರವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.
4.73 ದಶಲಕ್ಷ ಎಕರೆ ಅಡಿ (ಎಂ.ಎಫ್.ಎ)  ಬಳಕೆಗೆ ಅರ್ಹವಾದ ಜಲ ಸಂಗ್ರಹಣೆಗಾಗಿ  ಈ
ಅಣೆಕಟ್ಟೆಯ ಎತ್ತರವನ್ನು ಇತ್ತೀಚೆಗೆ 138.68 ಅಡಿಗಳಿಗೆ ಎತ್ತರಿಸಲಾಗಿದೆ. ಇದರಿಂದ
ಗುಜರಾತ್, ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಬಳಕೆದಾರರಿಗೆ
ಲಾಭವಾಗಲಿದೆ.
ಈ ಯೋಜನೆಯು ನರ್ಮದಾ ನದಿಯ ನೀರನ್ನು ಗುಜರಾತ್ ರಾಜ್ಯದ ನೀರಿನ ಕೊರತೆ ಇರುವ
ಪ್ರದೇಶಗಳಿಗೆ ವಿಸ್ತೃತ ಕಾಲುವೆ ಮತ್ತು ಕೊಳವೆ ಜಾಲದ ಮೂಲಕ ಹರಿಸಲು ನೆರವಾಗುತ್ತದೆ.
ಯೋಜನೆಯಿಂದ 10 ಲಕ್ಷ ರೈತರಿಗೆ ನೀರಾವರಿ ಸೌಲಭ್ಯ ದೊರಕಲಿದೆ ಮತ್ತು ವಿವಿಧ ನಗರ
ಮತ್ತು ಪಟ್ಟಣಗಳ 4 ಕೋಟಿಯಷ್ಟು ಜನರಿಗೆ ಕುಡಿಯುವ ನೀರಿನ  ಸೌಲಭ್ಯವೂ ದೊರಕುವ
ನಿರೀಕ್ಷೆ ಇದೆ. ನೀರಿನ ಸರಬರಾಜಿಗೆ ಮಾನವ ಪ್ರಯತ್ನದ ಈವರೆಗಿನ ಅತಿ ದೊಡ್ಡ ಯೋಜನೆ
ಇದೆಂದು ಬಣ್ಣಿಸಲಾಗಿದೆ.  ಯೋಜನೆಯಿಂದ ವಾರ್ಷಿಕ ಶತಕೋಟಿ ಯುನಿಟ್ ಜಲ ವಿದ್ಯುತ್
ಉತ್ಪಾದನೆಯಾಗುತ್ತದೆಂದು ನಿರೀಕ್ಷಿಸಲಾಗಿದೆ.
ಜಲಾಶಯದ ಸ್ಥಳದಿಂದ ಪ್ರಧಾನಮಂತ್ರಿ ಅವರು  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ
ಸಂಬಂಧಿಸಿದ ಸ್ಮಾರಕ ಸಮುಚ್ಚಯ ಮತ್ತು ವಿಶಿಷ್ಟ ಪ್ರತಿಮೆಯಾದ ಏಕತೆಯ ಪ್ರತಿಮೆ
ನಿರ್ಮಾಣವಾಗುತ್ತಿರುವ ಸಾಧುಬೆಟ್ ಗೆ ಪ್ರಯಾಣ ಮಾಡಲಿದ್ದಾರೆ. ಪ್ರಧಾನಮಂತ್ರಿಯವರಿಗೆ
ಯೋಜನೆಯ ಪ್ರಗತಿಯ ಬಗ್ಗೆ ಸ್ಥೂಲ ವಿವರಣೆ ನೀಡಲಾಗುತ್ತದೆ. ಈ ಯೋಜನೆಯು 182 ಮೀಟರ್
ಎತ್ತರದ ಪ್ರತಿಮೆ, ಪ್ರದರ್ಶನ ಆವರಣ, ಸ್ಮಾರಕ ಉದ್ಯಾನ ಹಾಗೂ ಸಂದರ್ಶಕರ ಕೇಂದ್ರವನ್ನು
ಒಳಗೊಂಡಿದೆ.
ಪ್ರಧಾನಮಂತ್ರಿಯವರು ನರ್ಮದಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲೂ ಭಾಗಿಯಾಗಲಿದ್ದಾರೆ
ಮತ್ತು ದಭೋಲಿಯಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ
ವಸ್ತುಪ್ರದರ್ಶನಕ್ಕೆ ಅವರು ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.
ನಂತರ ಪ್ರಧಾನಿಯವರು ಅರ್ಮೇಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಎ.ಪಿ.ಎಂ.ಸಿ.
ಮೈದಾನದಲ್ಲಿ ನೂತನ ಮಾರುಕಟ್ಟೆಯನ್ನು ಉದ್ಘಾಟಿಸಲಿದ್ದಾರೆ. ಅಮರ್ ಡೈರಿಯ ನೂತನ
ಘಟಕವನ್ನೂ ಅವರು ಉದ್ಘಾಟಿಸಲಿದ್ದಾರೆ ಮತ್ತು ಜೇನು ಉತ್ಪಾದನೆ ಕೇಂದ್ರಕ್ಕೆ
ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅರ್ಮೇಲಿಯಲ್ಲಿ ಸರ್ಕಾರ್ ಸಮ್ಮೇಳನ ಉದ್ದೇಶಿಸಿ
ಭಾಷಣ ಮಾಡಲಿದ್ದಾರೆ.
***
AKT/SH