ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಕ್ಷಣಾ ಸಚಿವಾಲಯದ ಸಶಸ್ತ್ರ ಪಡೆಗಳ ಕೇಂದ್ರ ಕಚೇರಿಯ (ಎಎಫ್.ಎಚ್.ಕ್ಯು)ನಾಗರಿಕ ಸೇವೆಯ ಪುನಾರಚನೆ ಅಂಗವಾಗಿ ಪ್ರಧಾನ ನಿರ್ದೇಶಕರ 7 ಹುದ್ದೆ ಮತ್ತು ನಿರ್ದೇಶಕರ 36 ಹುದ್ದೆಗಳನ್ನು ನಿಯಮಿತವಾದ ಆಧಾರದಲ್ಲಿ ಸೃಷ್ಟಿಸಲು ತನ್ನ ಅನುಮೋದನೆ ನೀಡಿದೆ.
ಎಎಫ್.ಎಚ್.ಕ್ಯು ನಾಗರಿಕ ಸೇವೆಯಲ್ಲಿ ರೆಗ್ಯೂಲರ್ ಹುದ್ದೆಗಳ ಸೃಷ್ಟಿಯು ಕೇಡರ್ ನಲ್ಲಿನ ನಿಶ್ಚಲತೆಯನ್ನು ನಿವಾರಣೆ ಮಾಡುತ್ತದೆ. ಇದು ಉತ್ತಮ ಕೇಡರ್ ನಿರ್ವಹಣೆ ಮತ್ತು ಸೇವೆಯಲ್ಲಿನ ಸಾಮರ್ಥ್ಯವನ್ನು ಸುಧಾರಣೆ ಮಾಡುವ ಉದ್ದೇಶವನ್ನು ಒಳಗೊಂಡಿದೆ. ಇದು ಒಂದು ನಾವಿನ್ಯಪೂರ್ಣ ಕ್ರಮವಾಗಿದ್ದು, ಯಾವುದೇ ಹೆಚ್ಚುವರಿ ವೆಚ್ಚ ತಗುಲುವುದಿಲ್ಲ ಆದರೆ, ಕೇಡರ್ ನಿರ್ವಹಣೆಯ ದೃಷ್ಟಿಕೋನದಿಂದ ಪ್ರಯೋಜನಗಳನ್ನು ತರುತ್ತದೆ ಮತ್ತು ಅದರ ಉತ್ತಮ ಉಪಯೋಗವನ್ನು ಶಕ್ತಗೊಳಿಸುತ್ತದೆ.
“ಇನ್ ಸಿತು”ಅಂದರೆ ಮೂಲಸ್ಥಾನದಲ್ಲಿ ರೆಗ್ಯುಲರ್ ಹುದ್ದೆಗಳನ್ನು ಸೃಷ್ಟಿಸುವುದರಿಂದ ಕೇಡರ್ ನಿರ್ವಹಣೆಯಲ್ಲಿನ ಬಡ್ತಿಗಳು ಹೆಚ್ಚಿನ ಪಾರದರ್ಶಕತೆಯಿಂದ ಕೂಡಿರುತ್ತವೆ. ರೆಗ್ಯುಲರ್ ಹುದ್ದೆಗಳಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನಿಯುಕ್ತಿಗೊಳಿಸುವುದರಿಂದ ಎಎಫ್.ಎಚ್.ಕ್ಯು ಸಿಎಸ್ ಅಧಿಕಾರಿಗಳಲ್ಲಿ ಹೆಚ್ಚಿನ ಉತ್ಪಾದಕತೆ ಮತ್ತು ಹೊಣೆಗಾರಿಕೆಗೆ ಕಾರಣವಾಗುತ್ತದೆ.
*****