Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಾವರೀನ್ ಗೋಲ್ಡ್  ಬಾಂಡ್ ಗಳ ಯೋಜನೆಯ ಮಾರ್ಗಸೂಚಿಗಳ ಪರಿಷ್ಕರಣೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ನಿರೀಕ್ಷಿತ ಉದ್ದೇಶದ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಸಾವರೀನ್ ಗೋಲ್ಡ್ ಬಾಂಡ್ (ಎಸ್.ಜಿ.ಬಿ.) ಯೋಜನೆಯ ಮಾರ್ಗಸೂಚಿಗಳ ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ.

 

ಈ ಯೋಜನೆಯಲ್ಲಿ ಎರಡು ಜೊತೆ ಬದಲಾವಣೆಗಳನ್ನು ಮಾಡಲಾಗಿದೆ: 
I. ಈ ಯೋಜನೆಯನ್ನು ಮತ್ತಷ್ಟು ಆಕರ್ಷಕಗೊಳಿಸಲು, ಗುರಿಗೆ ಅನುಗುಣವಾಗಿ ಹಣಕಾಸು ಕ್ರೋಡೀಕರಿಸಲು ಮತ್ತು ಚಿನ್ನದ ಆಮದಿನಿಂದ ಆಗುತ್ತಿರುವ ಆರ್ಥಿಕ ಒತ್ತಡ ಮತ್ತು ಚಾಲ್ತಿ ಖಾತೆಯ ಕೊರತೆ (ಸಿ.ಎ.ಡಿ.) (ಆಮದು ಮತ್ತು ರಫ್ತು ನಡುವಿನ ಅಂತರದ ಪರಿಣಾಮ)  ಕಡಿಮೆ ಮಾಡಲು ಅದರ ಲಕ್ಷಣಗಳಲ್ಲಿ ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ತರಲಾಗಿದೆ, 

  1. ವಿವಿಧ ವರ್ಗದ ಹೂಡಿಕೆದಾರರಿಗೆ ಹೂಡಿಕೆಯ ಪರ್ಯಾಯವನ್ನು ಒದಗಿಸುವ ಎಸ್.ಜಿ.ಬಿ.ಗಳನ್ನು ವಿವಿಧ ಬಡ್ಡಿ ದರ ಮತ್ತು ಅಪಾಯದ ರಕ್ಷಣೆ/ಪೇಆಫ್ ನೊಂದಿಗೆ ವಿನ್ಯಾಸ ಮಾಡಿ ಮತ್ತು ಪರಿಚಯಿಸಲು ಹಣಕಾಸು ಸಚಿವಾಲಯಕ್ಕೆ ನಮ್ಯತೆಯ ಅವಕಾಶ ನೀಡಲಾಗಿತ್ತು.ನಿರ್ದಿಷ್ಟ ನಿಗದಿತ ಲಕ್ಷಣಗಳನ್ನು ಅಂತಿಮಗೊಳಿಸುವ ಮತ್ತು ಅದರ ಅಧಿಸೂಚನೆ ಮಾಡುವ ನಿಟ್ಟಿನಲ್ಲಿ ವಿಳಂಬವಾಗುವುದನ್ನು ತಗ್ಗಿಸಲು ಹಣಕಾಸು ಸಚಿವರ ಅನುಮೋದನೆಯೊಂದಿಗೆ  ಯೋಜನೆಗೆ ತಿದ್ದುಪಡಿ ಮಾಡಲು/ ವೈಶಿಷ್ಟ್ಯಗಳನ್ನು ಸೇರಿಸಲು ಹಣಕಾಸು ಸಚಿವಾಲಯ (ವಿತರಕ)ಕ್ಕೆ ಅಧಿಕಾರವನ್ನು ನೀಡಲಾಗಿತ್ತು. ಇಂಥ ನಮ್ಯತೆಯು ಚಲನಶೀಲ ಮತ್ತು ಏರಿಳಿತದ ಮಾರುಕಟ್ಟೆಯಲ್ಲಿ, ಬೃಹತ್ ಆರ್ಥಿಕತೆ ಮತ್ತು ಇತರ ಸನ್ನಿವೇಶ ಅಂದರೆ ಚಿನ್ನದ ದರದ ವಿಚಾರದಲ್ಲಿ ವ್ಯವಹರಿಸಲು ಮತ್ತು ಹೊಸ ಹೂಡಿಕೆಯ ಉತ್ಪನ್ನಗಳ ಸ್ಪರ್ಧಾತ್ಮಕತೆಯ ಅಂಶಗಳ ಸವಾಲು ಎದುರಿಸಲು ಸಮರ್ಥವಾಗಿರುತ್ತದೆ, 

 

ಯೋಜನೆಯಲ್ಲಿ ಈ ಕೆಳಕಂಡ ನಿರ್ದಿಷ್ಟ ಬದಲಾವಣೆಗಳಿಗೆ ಅನುಮೋದನೆ ದೊರೆತಿದೆ: 

i. ಪ್ರತಿ ಹಣಕಾಸು ವರ್ಷದಲ್ಲಿ ಹೂಡಿಕೆಯ ಮಿತಿಯನ್ನು ಪ್ರತಿ ವ್ಯಕ್ತಿಗೆ 4 ಕೆ.ಜಿ., ಹಿಂದೂ ಅವಿಭಕ್ತ ಕುಟುಂಬ (ಎಚ್.ಯು.ಎಫ್)ಕ್ಕೆ 4 ಕೆ.ಜಿ ಮತ್ತು ಟ್ರಸ್ಟ್ ಮತ್ತು ಸರ್ಕಾರದಿಂದ ಕಾಲ ಕಾಲಕ್ಕೆ ಅಧಿಸೂಚನೆಗೊಂಡ ಅದೇ ಸ್ವರೂಪದ ಇತರ ಕಾಯಗಳಿಗೆ 20 ಕೆ.ಜಿ.ಗೆ ಹೆಚ್ಚಿಸಲಾಗಿದೆ,  

  1. ಈ ಮಿತಿಯನ್ನು ಹಣಕಾಸು ವರ್ಷದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ ಮತ್ತು ಇದರಲ್ಲಿ ಹಣಕಾಸು ಪೇಟೆಯಲ್ಲಿ ಈ ಅವಧಿಯಲ್ಲಿ ಖರೀದಿಸಿದ ಎಸ್.ಜಿ.ಬಿ.ಗಳ ಖರೀದಿ ಸೇರಿರುತ್ತದೆ.

iii. ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಮೇಲಾಧಾರವಾಗಿ ಇಟ್ಟುಕೊಳ್ಳುವ ಚಿನ್ನಕ್ಕೆ ಹೂಡಿಕೆಯ ಮಿತಿ ಸೇರಿರುವುದಿಲ್ಲ.
iv. ಎಸ್.ಜಿ.ಬಿ.ಗಳು  ‘on tap’ನಲ್ಲಿ ಲಭ್ಯವಾಗುತ್ತವೆ. ಎನ್.ಎಸ್.ಇ,, ಬಿ.ಎಸ್.ಇ, ಬ್ಯಾಂಕ್ ಮತ್ತು ಅಂಚೆ ಇಲಾಖೆಗಳ ಸಮಾಲೋಚನೆಯ ಆಧಾರದ ಮೇಲೆ  ‘on tap’ಮಾರಾಟವನ್ನು ಅನುಸರಿಸಲು ಉತ್ಪನ್ನಗಳ ವೈಶಿಷ್ಟ್ಯಗಳನ್ನು ಹಣಕಾಸು ಸಚಿವಾಲಯವು ಆಖೈರುಗೊಳಿಸುತ್ತದೆ.
v. ಎಸ್ಜಿಬಿಗಳ ನಗದು ಹರಿವು ಮತ್ತು ಮಾರಾಟವನ್ನು ಸುಧಾರಿಸಲು, ಸೂಕ್ತ ಮಾರುಕಟ್ಟೆ ರೂಪಿಸುವ ಉಪಕ್ರಮಗಳನ್ನು ಕೈಗೊಳ್ಳಲಾಗುವುದು. ಮಾರುಕಟ್ಟೆ ರೂಪಿಸುವವರು, ವಾಣಿಜ್ಯ ಬ್ಯಾಂಕ್ ಅಥವಾ ಇನ್ನಾವುದೇ ಇತರ ಸಾರ್ವಜನಿಕ ವಲಯದ ಕಾಯ ಅಂದರೆ ಎಂ.ಎ.ಟಿ.ಸಿ. ಅಥವಾ ಭಾರತ ಸರ್ಕಾರ ನಿರ್ಧರಿಸುವ ಇತರ ಯಾವುದೇ ಕಾಯ ಆಗಬಹುದು.
vi. ಸರ್ಕಾರಕ್ಕೆ ಅಗತ್ಯ ಎಂದು ಕಂಡು ಬಂದರೆ, ಏಜೆಂಟರಿಗೆ ಹೆಚ್ಚಿನ ಕಮಿಷನ್ ಪಡೆಯಲು ಅವಕಾಶ ನೀಡಬಹುದು.

 

ಹಿನ್ನೆಲೆ:
ಸಾವರೀನ್ ಗೋಲ್ಡ್ ಬಾಂಡ್ (ಎಸ್.ಜಿ.ಬಿ.) ಯೋಜನೆಯನ್ನು ಸಂಪುಟದ ಅನುಮೋದನೆಯ ಬಳಿಕ ಭಾರತ ಸರ್ಕಾರ 2015ರ ನವೆಂಬರ್ 5ರಂದು ಅಧಿಸೂಚಿಸಿತ್ತು. ಲೋಹದ ಬಂಗಾರ ಖರೀದಿಗೆ ಪರ್ಯಾಯವಾಗಿ ಹಣಕಾಸು ಆಸ್ತಿಯನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿತ್ತು. ಪ್ರತಿ ವರ್ಷ ಖರೀದಿಸಲಾಗುತ್ತಿರುವ ಅಂದಾಜು 300 ಟನ್ ಭೌತಿಕ ಬಂಗಾರದ ಗಟ್ಟಿ ಮತ್ತು ನಾಣ್ಯಗಳಿಗೆ ಪರ್ಯಾಯವಾಗಿ ಕೆಲ ಭಾಗವನ್ನು ‘ಡಿಮ್ಯಾಟ್’ ಗೋಲ್ಡ್ ಬಾಂಡ್ ಹೂಡಿಕೆಗೆ ಬದಲಿಸುವುದು ಇದರ ಗುರಿಯಾಗಿತ್ತು.  ಯೋಜನೆಯಡಿ 2015-16 ರಲ್ಲಿ 15,000 ಕೋಟಿ ರೂಪಾಯಿ ಮತ್ತು 2016-17ರಲ್ಲಿ 10,000 ಕೋಟಿ ರೂಪಾಯಿ ಕ್ರೋಡೀಕರಣದ ಗುರಿ ಹೊಂದಲಾಗಿತ್ತು. ಆದರೆ ಈವರೆಗೆ ಸರ್ಕಾರದ ಖಾತೆಯಲ್ಲಿ ಜಮಾ ಆಗಿರುವುದು 4,769 ಕೋಟಿ ರೂಪಾಯಿ ಮಾತ್ರ.

 

ಯೋಜನೆಯಲ್ಲಿ ಹೂಡಿಕೆದಾರರಿಂದ ನಿರೀಕ್ಷೆಗಿಂತ ಕಡಿಮೆ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಮತ್ತು ಸಿಎಡಿ ಪರಿಣಾಮ ಮತ್ತು ದೇಶದ ಒಟ್ಟಾರೆ ಬೃಹತ್ ಆರ್ಥಿಕತೆಯ ಉತ್ತಮಿಕೆ ಗಮನದಲ್ಲಿಟ್ಟುಕೊಂಡು, ಯೋಜನೆಯನ್ನು ಯಶಸ್ವಿಗೊಳಿಸಲು ಬದಲಾವಣೆ ತರುವ ಅಗತ್ಯವಿದೆ ಎಂದು ಭಾವಿಸಲಾಯಿತು. 

*****

AKT/VBA/SH