ಸಿಪಿಎಸ್ಇಎಸ್ ಗಳು/ಪಿ ಎಸ್ ಯು/ಇತರೆ ಸರ್ಕಾರಿ ಸಂಸ್ಥೆಗಳ ಮತ್ತು ಶತೃಗಳ ಸ್ಥಿರಾಸ್ಥಿಗಳ ಮಾರಾಟ ಮತ್ತು ನಿರ್ವಹಣೆಗೆ ಕಾರ್ಯತಂತ್ರ ಹಾಗೂ ನಿಯಮಾವಳಿಗಳನ್ನು ರೂಪಿಸಲು ಸಂಪುಟ ಅನುಮೋದನೆ
28 Feb, 2019
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ನಾನ್-ಕೋರ್ ವಲಯದ(ಪ್ರಮುಖವಲ್ಲದ) ವಲಯದ ಸಿಪಿಎಸ್ಇ ವಲಯಗಳಲ್ಲಿ ಕಾರ್ಯತಂತ್ರ ಬಂಡವಾಳ ಹಿಂತೆಗೆತ ಮತ್ತು ಆಸ್ತಿ ನಿರ್ವಹಣೆಗೆ ಕಾರ್ಯತಂತ್ರ ಹಾಗೂ ರೂಪಿಸಲು ಸಂಪುಟ ಅನುಮೋದನೆ ನೀಡಿದೆ.
ಗೃಹ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೊಳಪಡುವ ಶತೃಗಳ ಆಸ್ತಿ ಕಾಯ್ದೆ 1968 ಸೆಕ್ಷನ್ 4ರಡಿ ಬರುವ ಉಪನಿಯಮ 8ಎ ಹಾಗೂ ಶತೃಗಳ ಆಸ್ತಿ ಪೋಷಣಾ ಸಂಸ್ಥೆ(ಸಿಇಪಿಐ)ಅಡಿಯಲ್ಲಿ ಶತೃಗಳ ಸ್ಥಿರಾಸ್ತಿ ನಿರ್ವಹಣೆ ಮಾಡಲಾಗುವುದು. ನಷ್ಟದಲ್ಲಿರುವ ಸಿಪಿಎಸ್ಇಎಸ್ ಗಳು, ನಷ್ಟದಲ್ಲಿರುವ ಪಿಎಸ್ ಯು ಮತ್ತು ಇತರೆ ಸರ್ಕಾರಿ ಸಂಸ್ಥೆಗಳು ಹಾಗೂ ಸಿಪಿಎಸ್ಇಗಳ ಲಭ್ಯವಿರುವ ಆಸ್ತಿಯನ್ನು ಮಾರಾಟ ಮಾಡಿ, ಹಣಕಾಸು ಬಳಕೆ ಮಾಡಿಕೊಳ್ಳಲು ಸಾಂಸ್ಥಿಕ ಚೌಕಟ್ಟನ್ನು ರೂಪಿಸಲಾಗುವುದು.
ಇದರಡಿ ಬಹು ಹಂತದ ಸಾಂಸ್ಥಿಕ ಕಾರ್ಯತಂತ್ರ ರಚನೆಯಾಗಲಿದ್ದು, ಪರ್ಯಾಯ ಕಾರ್ಯತಂತ್ರ ರೂಪುಗೊಳ್ಳಲಿದೆ, ಆಸ್ತಿ ನಿರ್ವಹಣೆ ಕುರಿತಂತೆ ಕಾರ್ಯದರ್ಶಿಗಳ ಕೋರ್ ಗುಂಪು ರಚನೆ ಮತ್ತು ಅಂತರ ಸಚಿವಾಲಯ ಗುಂಪು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂಸ್ಥೆಯಾಗಲಿದೆ. ನೀತಿ ಆಯೋಗ, ಸಿಪಿಎಸ್ಇ ಸಂಬಂಧಿತ ಆಡಳಿತ ಸಚಿವಾಲಯ, ತಾಂತ್ರಿಕ ಸಲಹೆಗಾರರ ಶಿಫಾರಸುಗಳನ್ನು ಆಧರಿಸಿ ಸಕ್ಷಮ ಪ್ರಾಧಿಕಾರ ಅನುಮೋದಿಸಿದ ಮಾದರಿ ಸಂಪರ್ಕ ದಾಖಲೆಗಳು ಮತ್ತು ನಿಗದಿತ ಆಸ್ತಿ ಮಾರಾಟ ಮಾಡಿ, ಹಣ ಗಳಿಸಲು ನಿಖರ ಮಾದರಿಯನ್ನು ರೂಪಿಸಲಾಗುವುದು. ಆಸ್ತಿ ಮಾರಾಟ ಮಾಡಿ ಹಣ ಕ್ರೂಢೀಕರಿಸುವ ಪ್ರಕ್ರಿಯೆಯ ಮೇಲುಸ್ತುವಾರಿ ನೋಡಿಕೊಳ್ಳಲು ಕಾರ್ಯತಂತ್ರ ಬಂಡವಾಳ ಹಿಂತೆಗೆತಕ್ಕೆ ಪ್ರತ್ಯೇಕ ಬಾಹ್ಯ ನಿಗಾ ಸಂಸ್ಥೆಯನ್ನು ರಚಿಸಲಾಗುವುದು. ಅನುಮೋದಿತ ನೀತಿಯನ್ನು ಎರಡು ವರ್ಷಗಳ ನಂತರ ಪುನರ್ ಪರಿಶೀಲಿಸಲಾಗುವುದು, ಅಗತ್ಯಬಿದ್ದರೆ ಹಣಕಾಸು ಮಿತಿ ಸೇರಿದಂತೆ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.