Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಸುಲಭ ಜೀವನ’ ಮತ್ತು ‘ಸುಗಮ ವ್ಯವಹಾರ’ ವಾತಾವರಣ ವೃದ್ಧಿ ನಿಟ್ಟಿನಲ್ಲಿ ಸಚಿವರ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ನಡೆದ ಸಚಿವರ ಮಂಡಳಿಯ ಫಲಪ್ರದ ಸಭೆಯ ಕುರಿತು ವಿವರಗಳನ್ನು ಇಂದು ಹಂಚಿಕೊಂಡಿದ್ದಾರೆ.

‘ಸುಲಭ ಜೀವನ’ ಮತ್ತು ‘ಸುಗಮ ವ್ಯವಹಾರ’ ವಾತಾವರಣ ವೃದ್ಧಿಸುವ ನಿಟ್ಟಿನಲ್ಲಿ ಮೌಲ್ಯಯುತ ದೂರದೃಷ್ಟಿಗಳು ಮತ್ತು ಉತ್ತಮ ಅಭ್ಯಾಸಗಳ ಕುರಿತು ಮಂಡಳಿಯು ಚರ್ಚಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಕಸಿತ ಭಾರತದ ಹಂಚಿಕೆಯ ಕನಸನ್ನು ಯಶಸ್ವಿಯಾಗಿ ನನಸಾಗಿಸಲು ಸುಧಾರಣೆಗಳನ್ನು ಹೇಗೆ ಪರಿಣಾಮಕಾರಿಯಾಗಿ ಮುನ್ನಡೆಸಬಹುದು ಎಂಬುದರ ಕುರಿತು ಚರ್ಚೆಗಳು ಕೇಂದ್ರೀಕರಿಸಿದ್ದವು ಎಂದು ಶ್ರೀ ನರೇಂದ್ರ ಮೋದಿ ಮತ್ತಷ್ಟು ವಿಸ್ತೃತವಾಗಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಸಚಿವರ ಮಂಡಳಿಯ ಫಲಪ್ರದ ಸಭೆ ನಿನ್ನೆ ನಡೆಯಿತು. ‘ಸುಲಭ ಜೀವನ’ ಮತ್ತು ‘ಸುಗಮ ವ್ಯವಹಾರ’ ವಾತಾವರಣ ವೃದ್ಧಿಸುವ ಬಗ್ಗೆ ಮತ್ತು ವಿಕಸಿತ ಭಾರತದ ನಮ್ಮ ಹಂಚಿಕೆಯ ಕನಸನ್ನು ನನಸಾಗಿಸಲು ಮತ್ತಷ್ಟು ಸುಧಾರಣೆಗಳನ್ನು ಹೇಗೆ ಕೈಗೊಳ್ಳುವುದು ಎಂಬುದರ ಕುರಿತು ನಾವು ದೂರದೃಷ್ಟಿಗಳು ಮತ್ತು ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ.’’

 

*****