Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೂರಜ್ ಕುಂಡ್ ರೈಲ್ ವಿಕಾಸ್ ಶಿಬಿರವನ್ನುದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಪ್ರಧಾನಿ ಭಾಷಣ

ಸೂರಜ್ ಕುಂಡ್ ರೈಲ್ ವಿಕಾಸ್ ಶಿಬಿರವನ್ನುದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ವಿಡಿಯೋ ಸಂವಾದದ ಮೂಲಕ ಸೂರಜ್ ಕುಂಡ್ ರೈಲ್ ವಿಕಾಸ್ ಶಿಬಿರ ಉದ್ದೇಶಿಸಿ ಭಾಷಣ ಮಾಡಿದರು.

ಇದು ತಂತ್ರಜ್ಞಾನ ಚಾಲಿತ ಶತಮಾನ, ನಾವಿನ್ಯತೆ ಅತ್ಯಗತ್ಯವಾಗಿದೆ, ಮತ್ತು ಹೀಗಾಗಿ ರೈಲ್ವೆಯು ಗತಿ (ವೇಗ) ಮತ್ತು ಪ್ರಗತಿ ಎರಡನ್ನೂ ಸಾಧಿಸಬೇಕು ಎಂದರು.

ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಕೆಲಸ ಮಾಡುತ್ತಿರುವುದು ಉತ್ತಮವಾದ್ದೆ ಆದರೆ, ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಮತ್ತು ನಾವು ರೈಲ್ವೆ ಹೇಗಿರಬೇಕು ಎಂದು ಚಿಂತಿಸಬೇಕು ಎಂದರು.

ಭಾರತೀಯ ರೈಲ್ವೆಯು ಅಭಿವೃದ್ಧಿ ಸಾಧಿಸಬೇಕು ಮತ್ತು ಆರ್ಥಿಕವಾಗಿ ಸದೃಢವಾಗಬೇಕು ಎಂದು ಪ್ರತಿಪಾದಿಸಿದರು. ಇದು ಭಾರತಕ್ಕೆ ಮತ್ತು ರೈಲ್ವೆಗಾಗಿ ಕೆಲಸ ಮಾಡುತ್ತಿರುವವರಿಗೆ ಲಾಭ ತರಲಿದೆ ಎಂದರು.

ತಮ್ಮ ಸರ್ಕಾರದ ರೈಲ್ವೆ ಬಜೆಟ್ ಮೇಲಿನ ಗಮನ ಯಾವತ್ತೂ ರಾಜಕೀಯವಾಗಿರಲಿಲ್ಲ ಎಂದು ಹೇಳಿದ ಪ್ರಧಾನಮಂತ್ರಿಯವರು, ಸರ್ಕಾರ ರೈಲ್ವೆಯಲ್ಲಿ ಮಾದರಿಯ ಬದಲಾವಣೆ ತರಲು ಒಗ್ಗೂಡಿ ಶ್ರಮಿಸುತ್ತಿದೆ ಎಂದರು. ಈಗ ಶತಮಾನ ಬದಲಾಗಿದೆ ಮತ್ತು ನಮ್ಮ ರೈಲ್ವೆಯ ವ್ಯವಸ್ಥೆಯೂ ಬದಲಾಗಬೇಕಿದೆ ಎಂದ ಪ್ರಧಾನಮಂತ್ರಿಯವರು, ಒಂದು ತಂಡವಾಗಿ ನಾವು ಇದನ್ನು ಸಾಧಿಸುತ್ತೇವೆ ಎಂಬ ವಿಶ್ವಾಸ ತಮಗಿದೆ ಎಂದರು.

ತಮ್ಮ ಬಾಲ್ಯವನ್ನು ರೈಲ್ವೆ ಪ್ಲಾಟ್ ಫಾಂ ಮೇಲೆ ಕಳೆದದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ರೈಲ್ವೆಯೊಂದಿಗೆ ತಮ್ಮ ನಂಟು ಬಲವಾಗಿದೆ ಮತ್ತು ಅದೇ ಕಾರಣಕ್ಕಾಗಿಯೇ ಒಟ್ಟಾರೆಯಾಗಿ ತಾವು ರೈಲ್ವಿಯಲ್ಲಿ ಸುಧಾರಣೆ ಬಯಸುವುದಾಗಿ ತಿಳಿಸಿದರು.

AKT/AK