Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಪ್ಟೆಂಬರ್ 29 , 2018 ರಂದು ನವದೆಹಲಿಯಲ್ಲಿ “ಕಾನ್ಫರೆನ್ಸ್ ಆನ್ ಲೀಡರ್ಶಿಪ್ ಆನ್ ಎಜುಕೇಷನ್ ಫೋರ್ ರಿಸರ್ಜೆನ್ಸ್” ನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಕಾನ್ಫರೆನ್ಸ್ ಆನ್ ಲೀಡರ್ಶಿಪ್ ಆನ್ ಎಜುಕೇಷನ್ ಫೋರ್ ರಿಸರ್ಜೆನ್ಸ್” ಅನ್ನು ಸೆಪ್ಟೆಂಬರ್ 29 , 2018 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಉದ್ಘಾಟಿಸಲಿದ್ದಾರೆ.

ಇದರಲ್ಲಿ 350ಕ್ಕೂ ಅಧಿಕ ವಿಶ್ವವಿದ್ಯಾಲಯದ ಉಪಕುಲಪತಿಗಳು/ನಿರ್ದೇಶಕರುಗಳು ಭಾಗವಹಿಸುವರು. ಈ ಕಾರ್ಯಕ್ರಮವನ್ನು ಯು.ಜಿ.ಸಿ., ಎ.ಐ.ಸಿ.ಟಿ.ಇ., ಐಸಿ.ಎಸ್.ಎಸ್.ಆರ್., ಇ.ಜಿ.ಎನ್.ಒ.ಯು., ಜೆ.ಎನ್.ಯು. ಮತ್ತು ಎಸ್.ಜಿ.ಟಿ ವಿಶ್ವವಿದ್ಯಾಲಯಗಳು ಜಂಟಿಯಾಗಿ ಆಯೋಜಿಸುತ್ತಿವೆ.

ಭಾರತೀಯ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳ ಸವಿಸ್ತಾರ ವಿಮರ್ಶೆ ಮತ್ತು ಉತ್ತಮ ಶೈಕ್ಷಣಿಕ ಫಲಿತಾಂಶಗಳ ಸಾಧಿಸುವಿಕೆ ಹಾಗೂ ಶಿಕ್ಷಣ ಕ್ಷೇತ್ರದಲ್ಲ್ಲಿ ಕ್ರಿಯಾಶೀಲ ದೃಷ್ಠಿಕೋನದ ಬದಲಾವಣೆ ತರಲು ಯೋಜನೆಗಳನ್ನು ರೂಪಿಸುವುದು ಈ ಸಮಾವೇಶದ ವಿಷಯವಸ್ತುವಾಗಿದೆ.

ಸಮಾವೇಶವನ್ನು ಗೌರವಾನ್ವಿತ ಪ್ರಧಾನಮಂತ್ರಿ ಅವರು ಬೆಳಿಗ್ಗೆ 10.30 ಗಂಟೆಗೆ ಉದ್ಘಾಟಿಸಲಿದ್ದಾರೆ, ಅದು ಈ ಕೆಳಗೆ ಸೂಚಿಸಿದ ಎಂಟು ವಿಂಘಡಿತ ವಿಷಯಾಧಾರಿತ ಸಭೆಗಳನ್ನು ಹೊಂದಿರುತ್ತದೆ:

1. ಕಲಿಯುವರನ್ನು ಕೇಂದ್ರೀಕರಿಸಿದ ಶಿಕ್ಷಣದ ಅಧ್ಯಾಪನಶಾಸ್ತ್ರವನ್ನು ವೃದ್ಧಿಗೊಳಿಸುವುದು – ಅನುಕೂಲಕರ ಕಲಿಕೆಗಾಗಿ ಕೃತಕ ಬುದ್ಧಿಮತ್ತೆಯ ಬಳಕೆ.

2. ಉದ್ಯೋಗ ಅಪೇಕ್ಷೆಯಿಂದ ಉದ್ಯೋಗ ಸೃಷ್ಠಿಯೆಡೆಗೆ – ನಾವಿನ್ಯತೆಯನ್ನು ಮತ್ತು ಉದ್ಯಮಶೀಲತೆಯನ್ನು ವೃದ್ಧಿಸುವುದು

3. ಸಂಶೋಧನೆಗಳ ಗುಣಮಟ್ಟವನ್ನು ವೃದ್ಧಿಸುವುದು – ಭಾರತ ಅಗತ್ಯಗಳಿಗೆ ಕೇಂದ್ರೀಕರಿಸುವುದು

4. ವಿದ್ಯಾಭ್ಯಾಸ ಸಂಸ್ಥೆಗಳ ನಡುವೆ ಪರಸ್ಪರ ಸಂಯೋಜನೆ ಸೃಷ್ಠಿಸುವುದು – ಗ್ರಂಥಾಲಯಗಳ ಹಂಚಿಕೊಳ್ಳುವಿಕೆ ಮತ್ತು ಜ್ಞಾನ ವಿನಿಮಯಗಳೇ ಮುಂತಾದ ಶೈಕ್ಷಣಿಕ ಸಂಪನ್ಮೂಲಗಳ ಪರಸ್ಪರ ಏಕೀಕೃತ ಸಂಗ್ರಹ ಮೂಲಕ ಬಳಕೆಮಾಡುವುದು

5. ಸಂಯುಕ್ತವಾಗಿ ವಿಸ್ತರಿತ ಮತ್ತು ಏಕೀಕೃತ ಕ್ಯಾಂಪಸ್ ಗಳು – ವಿದ್ಯಾರ್ಥಿಗಳಿಗೆ ಭಾವನಾತ್ಮಕವಾಗಿ ಶೈಕ್ಷಣಿಕ ಪರಿಸರದಲ್ಲಿ ಆಸಕ್ತಿ ಹುಟ್ಟುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು.

6. ಸಹಭಾಗಿ ಆಡಳಿತ ಮಾದರಿಗಳು – ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಅವಕಾಶ ಮಾಡಿಕೊಡುವುದು.

7. ಸದೃಢ ಆರ್ಥಿಕ ಮಾದರಿಗಳ ನಿರ್ಮಾಣ – ಸರಕಾರಿ ಸಂಪನ್ಮೂಲಗಳ ಜೊತೆ ಹೆಚ್ಚವರಿಯಾಗಿ ಹಳೆವಿದ್ಯಾರ್ಥಿಗಳಿಂದ ಮತ್ತು ವಾಣಿಜ್ಯಸಂಸ್ಥೆಗಳಿಂದ ( ಸಿ.ಎಸ್.ಆರ್.) ಕೂಡ ನಿಧಿ ಸಂಗ್ರಹಿಸುವುದು

8. ಸಾರ್ವತ್ರಿಕ ಮೌಲ್ಯಗಳನ್ನು ಮತ್ತು ಜೀವನದ ಕೌಶಲ್ಯತೆಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಮೂಲಕ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ವೃದ್ಧಿಗೆ ಪ್ರೋತ್ಸಾಹಿಸುವುದು.

ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರು ಸಮಾರೋಪ ಸಭೆಯ ಅಧ್ಯಕ್ಷತೆ ವಹಿಸುವರು. ಇದರಲ್ಲಿ ಎಂಟು ತಂಡಗಳೂ ತಾವು ಒಪ್ಪಿಕೊಂಡಿರುವ ಕ್ರಮಯೋಜನೆಗಳ ಬಗ್ಗೆ ಪ್ರತ್ಯೇಕವಾಗಿ ವ್ಯಾಖ್ಯಾನ (ವಿವರಣೆ) ಪ್ರಸ್ತುತಪಡಿಸುತ್ತವೆ. ಸಮಗ್ರ ಸಭೆಯಲ್ಲಿ ಇವುಗಳ ಬಗ್ಗೆ ಚರ್ಚೆಗಳು ನಡೆಯಲಿದೆ ಮತ್ತು ದೇಶದ ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಸವಿಸ್ತಾರದ ಕಾರ್ಯಯೋಜನೆ ಹೊರಹೊಮ್ಮುವ ನಿರೀಕ್ಷೆಯಿದೆ.

***