Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೆಲ್ವಿ ಜೆ ಜಯಲಲಿತಾ ನಿಧನಕ್ಕೆ ಪ್ರಧಾನಿ ಸಂತಾಪ

ಸೆಲ್ವಿ ಜೆ ಜಯಲಲಿತಾ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಲ್ವಿ ಜೆ. ಜಯಲಲಿತಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಸೆಲ್ವಿ ಜೆ. ಜಯಲಲಿತಾ ಅವರ ನಿಧನದಿಂದ ಅತೀವ ದುಃಖವಾಗಿದೆ, ಅವರ ಅಗಲಿಕೆಯಿಂದ ಭಾರತೀಯ ರಾಜಕೀಯಕ್ಕೆ ದೊಡ್ಡ ನಷ್ಟ ಉಂಟಾಗಿದೆ.

ಜಯಲಲಿತಾ ಜೀ ಸದಾ ಜನರೊಂದಿಗೆ ಸಂಪರ್ಕ ಹೊಂದಿದ್ದರು, ಬಡವರ, ಮಹಿಳೆಯರ ಮತ್ತು ಶೋಷಿತರ ಕಲ್ಯಾಣದ ಕಾಳಜಿ ಹೊಂದಿದ್ದರು, ಅವರು ಸದಾ ಸ್ಫೂರ್ತಿಯ ಮೂಲವಾಗಿದ್ದರು.

ಈ ದುಃಖದ ಸಮಯದಲ್ಲಿ ನನ್ನ ಸಂವೇದನೆ ಮತ್ತು ಪ್ರಾರ್ಥನೆ ತಮಿಳುನಾಡಿನ ಜನರೊಂದಿಗಿದೆ.

ದೇವರು ಅವರಿಗೆ ಭರಿಸಲಾರದ ನಷ್ಟವನ್ನು ಸಹಿಸುವ ಶಕ್ತಿ, ಧೈರ್ಯವನ್ನು ನೀಡಲಿ.

ಹಲವು ಸಂದರ್ಭಗಳಲ್ಲಿ ನಾನು ಜಯಲಲಿತಾಜೀ ಅವರೊಂದಿಗೆ ಭೇಟಿ ಮಾಡಿದ್ದು ಸ್ಮರಣೀಯವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ.” ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.


***

AKT/SH