ಪಿಎಂಇಂಡಿಯಾ
ಜರ್ಮನಿಯಲ್ಲಿ ತಮಗೆ ಮೂರು ದಿನಗಳ ಹಿಂದೆ ಈ ಪ್ರಶ್ನೆ ಕೇಳಲಾಗಿತ್ತು ಎಂದ ಪ್ರಧಾನಿ, ಪ್ಯಾರಿಸ್ ಒಪ್ಪಂದ ಇತ್ತೋ ಅಥವಾ ಇಲ್ಲವೋ.. ಅಂಥ ಕಾಲದಲ್ಲೂ ಭಾರತದ ಸಂಪ್ರದಾಯ ಸ್ವಚ್ಛ ಗ್ರಹ, ಸ್ವಚ್ಛ ವಾಯುವನ್ನು ನಮ್ಮ ಮಕ್ಕಳಿಗೆ ನೀಡುವ ಆ ಮೂಲಕ ಅವರ ಕ್ಷೇಮವನ್ನೂ ಕಾಯುವ ಕಾರ್ಯ ಮಾಡಿದೆ ಎಂದರು. ಇಲ್ಲಿರುವ ವಿಷಯ ಒಂದು ಕಡೆ ಅಥವಾ ಇನ್ನೊಂದು ಕಡೆ ಇರುವುದಲ್ಲ, ಬದಲಾಗಿ ಮುಂಬರುವ ಪೀಳಿಗೆಯ ಜೊತೆಗಿರುವುದು ಎಂದು ಪ್ರತಿಪಾದಿಸಿದರು.
ಭಾರತ ರಷ್ಯಾ ಬಾಂಧವ್ಯದ ಕುರಿತು, ಮತ್ತು ಚೀಣಾ ಕುರಿತು
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಕಳೆದ ಕೆಲವು ದಶಕಗಳ ಹಿಂದೆ ಇದ್ದಂತೆ ವಿಶ್ವ ದ್ವಿಧ್ರುವೀಯವಾಗಷ್ಟೇ ಉಳಿದಿಲ್ಲ. ನಾವು ಜಾಗತಿಕ ಬಾಂಧವ್ಯದ ಕುರಿತು ಮಾತನಾಡಿದಾಗ, ಇಡೀ ವಿಶ್ವವೇ ಅಂತರ ಸಂಪರ್ಕಿತ ಮತ್ತು ಅಂತರ ಅವಲಂಬಿತ ಎಂಬುದನ್ನು ನಾವು ಮನಗಾಣಬೇಕು ಎಂದರು. ಪ್ರತಿಯೊಂದು ರಾಷ್ಟ್ರವೂ ಮತ್ತೊಂದು ರಾಷ್ಟ್ರದೊಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಂಪರ್ಕಿತವಾಗಿದೆ ಮತ್ತು ಸಹಕಾರದ ಜೊತೆಗೆ ಕೆಲವು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯವೂ ಇರಬಹುದು ಎಂದರು.
ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಬಲವಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನಿ, ಇಡೀ ವಿಶ್ವವೇ ಸೇಂಟ್ ಪೀಟರ್ಸ್ ಬರ್ಗ್ ಘೋಷಣೆಯನ್ನು ಎಚ್ಚರಿಕೆಯಿಂದ ಓದಿ, ಈ ಬಾಂಧವ್ಯವನ್ನು ಅರ್ಥಮಾಡಿಕೊಂಡು, ಮತ್ತು ನಾವು ಹೇಗೆ ಮುಂದಡಿ ಇಡುತ್ತಿದ್ದೇವೆ ಎಂದು ನೋಡುತ್ತದೆ ಎಂದರು
ಚೀಣಾದೊಂದಿಗೆ ಗಡಿ ತಗಾದೆ ಇದ್ದಾಗ್ಯೂ, ಕಳೆದ ನಲವತ್ತು ವರ್ಷಗಳಲ್ಲಿ ಗಡಿಯಾಚಿಯಿಂದ ಒಂದೇ ಒಂದು ಗುಂಡೂ ಹಾರಿಲ್ಲ, ಆರ್ಥಿಕ ಬಾಂಧವ್ಯವೂ ವಿಸ್ತಾರಗೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು. ಯಾವುದೇ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮೂರನೇ ದೃಷ್ಟಿಕೋನದಿಂದ ನೋಡಬಾರದು ಎಂದರು. ಬ್ರಿಕ್ಸ್ ನಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳೂ ಒಗ್ಗೂಡಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಬ್ರಿಕ್ಸ್ ಬ್ಯಾಂಕ್ ಒಂದು ಉದಾಹರಣೆಯಾಗಿದೆ ಎಂದರು. ಭಾರತವು ಸಬ್ ಕ ಸಾತ್ ಸಬ್ ಕ ವಿಕಾಸ್ (ಸರ್ವರೊಂದಿಗೆ ಸರ್ವರ ವಿಕಾಸ) ಮಂತ್ರದಲ್ಲಿ ನಂಬಿಕೆ ಇಟ್ಟಿದೆ ಎಂದ ಪ್ರಧಾನಿ, ನಾವು ಪ್ರತಿಯೊಬ್ಬರನ್ನೂ ಪ್ರಗತಿಯ ಪಥದಲ್ಲಿ ಕೊಂಡೊಯ್ಯಲು ಬಯಸುತ್ತೇವೆ ಎಂದರು
ಭಯೋತ್ಪಾದನೆ ಕುರಿತಂತೆ
ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ವಿಶ್ವಕ್ಕೆ ಭಯೋತ್ಪಾದನೆ ಮತ್ತು ಅದರಿಂದುಂಟಾಗುವ ಅಪಾಯಗಳ ಸಂಪೂರ್ಣ ಅರಿವು ಇರಲಿಲ್ಲ ಎಂದು ಪ್ರಧಾನಿ ಹೇಳಿದರು. ಕಳೆದ ನಲವತ್ತು ವರ್ಷಗಳಿಂದಲೂ ಭಾರತ ಗಡಿಯಾಚೆಗಿನ ಭಯೋತ್ಪಾದನೆಗೆ ಬಲಿಪಶುವಾಗಿದೆ ಎಂದರು. 9/11ರ ಬಳಿಕವಷ್ಟೇ ಜಗತ್ತು ಭಯೋತ್ಪಾದನೆಯ ನೈಜ ಕ್ರೌರ್ಯವನ್ನು ಮತ್ತು ಅದಕ್ಕೆ ಯಾವುದೇ ಗಡಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದು ಎಂದರು.
ಭಯೋತ್ಪಾದನೆಯಿಂದ ವಿಶ್ವವನ್ನು ಕಾಪಾಡಲು ಎಲ್ಲ ಮಾನವೀಯ ಪಡೆಗಳೂ ಒಗ್ಗೂಡುವುದು ಈ ಹೊತ್ತಿನ ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.
ನಲವತ್ತು ವರ್ಷಗಳಿಂದ ವಿಶ್ವಸಂಸ್ಥೆಗೆ ಭಯೋತ್ಪಾದನೆ ಕುರಿತ ವ್ಯಾಖ್ಯೆಯ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು. ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಎತ್ತುವುದಾಗಿ ನಿನ್ನೆ ತಿಳಿಸಿದ ಅಧ್ಯಕ್ಷ ಪುಟಿನ್ ಅವರ ನಿಲುವು ಸ್ವಾಗತಿಸಿದರು.
ಭಯೋತ್ಪಾದಕರು ಶಸ್ತ್ರಾಸ್ತ್ರ ತಯಾರಿಸುವುದಿಲ್ಲ ಮತ್ತು ನೋಟುಗಳನ್ನು ಮುದ್ರಿಸುವುದಿಲ್ಲ, ಆದರೆ ಕೆಲವು ರಾಷ್ಟ್ರಗಳಿಂದ ಅವರು ಇದನ್ನು ಪಡೆದುಕೊಳ್ಳುತ್ತಾರೆ ಎಂದು ಪ್ರಧಾನಿ ಹೇಳಿದರು. ಇಡೀ ವಿಶ್ವವೇ ಇದು ಮಾನವೀಯತೆಯನ್ನು ಒಳಗೊಂಡ ವಿಷಯ ಎಂಬುದನ್ನು ಅರಿಯಬೇಕು ಮತ್ತು ಆಗ ಮಾತ್ರ ನಾವು ಭಯೋತ್ಪಾದನೆ ಮೆಟ್ಟಿ ನಿಲ್ಲಲು ಸಾಧ್ಯ ಎಂದರು.
ಜಾಗತಿಕ ವ್ಯಾಪಾರ ಕುರಿತು
ಭಾರತವು ಮುಕ್ತ ಆರ್ಥಿಕತೆಯಲ್ಲಿ ನಂಬಿಕೆ ಇಟ್ಟಿದೆ ಎಂದು ಪ್ರಧಾನಿ ಹೇಳಿದರು. ಜಾಗತಿಕ ವ್ಯಾಪಾರದಲ್ಲಿ, ಎಲ್ಲ ರಾಷ್ಟ್ರಗಳೂ ಪರಸ್ಪರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಮತ್ತು ಅವರು ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂದರು
***
AKT/SH
The world today is different from what it was two decades ago. The world is now interconnected and interdependent: PM @narendramodi
— PMO India (@PMOIndia) June 2, 2017
India and China are increasing their economic cooperation: PM @narendramodi
— PMO India (@PMOIndia) June 2, 2017
Back in the 80s & 90s, lot of nations saw terrorism as a law and order issue of the affected country: PM @narendramodi
— PMO India (@PMOIndia) June 2, 2017
For 40 years, India has been a victim of cross border terrorism: PM @narendramodi
— PMO India (@PMOIndia) June 2, 2017
It was after 9/11 that the entire world realised the dangers of terrorism: PM @narendramodi
— PMO India (@PMOIndia) June 2, 2017
The world must come together to fight terrorism: PM @narendramodi
— PMO India (@PMOIndia) June 2, 2017
There are nations that supply terrorists with arms and currency: PM @narendramodi
— PMO India (@PMOIndia) June 2, 2017