Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೇನಾ ದಿನದ ಸಂದರ್ಭದಲ್ಲಿ ಭಾರತೀಯ ಸೇನೆಗೆ ವಂದಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೇನಾ ದಿನದ ಸಂದರ್ಭದಲ್ಲಿ ಭಾರತೀಯ ಸೇನೆಯ ಶೌರ್ಯ ಮತ್ತು ಅಪರಿಮಿತ ಸೇವೆಗೆ ಗೌರವ ನಮನ ಸಲ್ಲಿಸಿದ್ದಾರೆ.

“ಎಲ್ಲ ಯೋಧರಿಗೆ, ಅನುಭವಿ ಹಿರಿಯರಿಗೂ ಮತ್ತು ಅವರ ಕುಟುಂಬದವರಿಗೆ ಸೇನಾ ದಿನದ ಶುಭಾಶಯಗಳು. ನಾವು ಭಾರತೀಯ ಸೇನೆಯ ಶೌರ್ಯ ಮತ್ತು ಅಪರಿಮಿತ ಸೇವೆಗೆ ವಂದಿಸುತ್ತೇವೆ.

ದೇಶದ ಸಾರ್ವಭೌಮತ್ವವನ್ನು ಕಾಪಾಡುವುದಾಗಿರಲಿ ಅಥವಾ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ದೇಶದ ಜನತೆಗೆ ನೆರವು ನೀಡುವುದಿರಲಿ ಭಾರತೀಯ ಸೇನೆಯು ಸದಾ ಮುಂಪಡೆಯ ನೇತೃತ್ವ ವಹಿಸುತ್ತದೆ.

ನಮ್ಮ ಸೇನೆ ಮಾಡಿರುವ ಎಲ್ಲ ತ್ಯಾಗವನ್ನು ನಾವು ಶ್ರೇಷ್ಠ ಗೌರವದೊಂದಿಗೆ ಸ್ಮರಿಸುತ್ತೇವೆ. ಅಪಾಯವನ್ನೂ ಲೆಕ್ಕಿಸದೆ ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ಹೀಗಾಗಿ 125 ಕೋಟಿ ಭಾರತೀಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.,” ಎಂದು ಪ್ರಧಾನಿ ಹೇಳಿದ್ದಾರೆ.

***

AKT/HS