Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೇವಾ ತೀರ್ಥದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೈಗೊಂಡ ಮೊದಲ ನಿರ್ಧಾರಗಳು ಸೇವೆಯ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಸಮಾಜದ ಪ್ರತಿಯೊಂದು ವರ್ಗದ ಸ್ಪರ್ಶ

ಸೇವಾ ತೀರ್ಥದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೈಗೊಂಡ ಮೊದಲ ನಿರ್ಧಾರಗಳು ಸೇವೆಯ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಸಮಾಜದ ಪ್ರತಿಯೊಂದು ವರ್ಗದ ಸ್ಪರ್ಶ


ಸೇವಾ ತೀರ್ಥಕ್ಕೆ ಸ್ಥಳಾಂತರ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೈಗೊಂಡ ಹಲವು ಪ್ರಮುಖ ನಿರ್ಧಾರಗಳು ಸೇವೆಯ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ. ಈ ನಿರ್ಧಾರಗಳು ಸಮಾಜದ ಪ್ರತಿಯೊಂದು ವರ್ಗ ಅಂದರೆ ರೈತರು, ಮಹಿಳೆಯರು, ಯುವಜನತೆ ಮತ್ತು ದುರ್ಬಲ ವರ್ಗದ ಪ್ರಜೆಗಳನ್ನು ಒಳಗೊಂಡಿದೆ.

  1. ಪಿಎಂ ರಹತ್ ಯೋಜನೆ: ಪ್ರತಿಯೊಬ್ಬ ಪ್ರಜೆಯ ಜೀವ ಉಳಿತಾಯ ರಕ್ಷಣೆ        

ಪ್ರಧಾನಮಂತ್ರಿ ಅವರು ಪಿಎಂ ರಹತ್ ಯೋಜನೆ ಆರಂಭಕ್ಕೆ ಅನುಮೋದನೆ ನೀಡಿದ್ದಾರೆ.

ಈ ಉಪಕ್ರಮದಡಿ ಅಪಘಾತ ಸಂತ್ರಸ್ತರು, 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆ ಪಡೆಯಲಿದ್ದಾರೆ. ಇದರಿಂದ ತಕ್ಷಣ ವೈದ್ಯಕೀಯ ಸಹಾಯವಿಲ್ಲದೆ, ಯಾವೊಂದು ಜೀವಕ್ಕೂ ಹಾನಿಯಾಗಬಾರದು ಎಂಬುದನ್ನು ಖಾತ್ರಿಪಡಿಸಲಾಗಿದೆ.

  1. ಲಖ್ ಪತಿ ದೀದಿ ಗುರಿ ದುಪ್ಪಟ್ಟು ಹೆಚ್ಚಿಸಿ 6 ಕೋಟಿಗೆ ಹೆಚ್ಚಳ

ಸರ್ಕಾರ ಮಹತ್ವದ 3 ಕೋಟಿ ಲಖ್ ಪತಿ ದೀದಿಗಳನ್ನು ದಾಟಿದ್ದು, ಇದು ಮೂಲ ಗಡುವು ಮಾರ್ಚ್ 2027ಕ್ಕಿಂತ ಒಂದು  ವರ್ಷ ಮುಂಚೆಯೇ ಸಾಧಿಸಲಾಗಿದೆ.

ಹಾಗಾಗಿ ಪ್ರಧಾನಮಂತ್ರಿ ಅವರು ಇದೀಗ ಹೊಸ ಗುರಿ ನಿಗದಿಪಡಿಸಿದ್ದು, 2029ರ ಮಾರ್ಚ್ ವೇಳೆಗೆ 6 ಕೋಟಿ ಲಖ್ ಪತಿ ದೀದಿಗಳ ಮಹತ್ವದ ಗುರಿ ಇದೆ. ಆ ಮೂಲಕ ಅದರ ವ್ಯಾಪ್ತಿ ಮತ್ತು ಆಶೋತ್ತರವನ್ನು ದುಪ್ಪಟ್ಟುಗೊಳಿಸಿದೆ.

  1. ರೈತರಿಗೆ ಪ್ರಮುಖ ಉತ್ತೇಜನ: ಕೃಷಿ ಮೂಲಸೌಕರ್ಯ ನಿಧಿಯಡಿ ಸಾಲದ ಗುರಿ  2 ಲಕ್ಷ ಕೋಟಿ ರೂ.ಗಳಿಗೆ ದುಪ್ಪಟ್ಟು ಹೆಚ್ಚಳ  

ಭಾರತದ ಇಡೀ ಕೃಷಿ ಮೌಲ್ಯ ಸರಣಿಯನ್ನು ಬಲವರ್ಧನೆಗೊಳಿಸುವ ಗುರಿಯೊಂದಿಗೆ ಪ್ರಧಾನಮಂತ್ರಿ ಅವರು, ಕೃಷಿ ಮೂಲಸೌಕರ್ಯ ನಿಧಿಯ ಸಾಲದ ಗುರಿಯನ್ನು ದುಪ್ಪಟ್ಟು ಹೆಚ್ಚಿಸಿ, 1 ಲಕ್ಷ ಕೋಟಿ ಯಿಂದ 2 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿ ಘೋಷಿಸಿದ್ದಾರೆ.

  1. 10,000 ಕೋಟಿ ರೂ. ಆವರ್ತ ನಿಧಿಯೊಂದಿಗೆ ಸ್ಟಾರ್ಟ್ ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0 : ನಾವೀನ್ಯತೆಯ ಹೊಸ ಅಲೆ

ಭಾರತದ ನಾವೀನ್ಯತೆಯ ಪೂರಕ ವ್ಯವಸ್ಥೆಯ ಶಕ್ತಿ ವಿಶೇಷವಾಗಿ ಡೀಪ್ ಟೆಕ್, ಆರಂಭಿಕ ಹಂತದ ಚಿಂತನೆಗಳು, ಅತ್ಯಾಧುನಿಕ ಉತ್ಪಾದನೆ ಮತ್ತು ಮಹತ್ವದ ತಂತ್ರಜ್ಞಾನಗಳ ಶಕ್ತಿಯನ್ನು ಮನಗಂಡು, ಪ್ರಧಾನಮಂತ್ರಿ ಅವರು, ಸ್ಟಾರ್ಟ್ ಅಪ್ ಇಂಡಿಯಾ ಫಂಡ್ ಆಫ್ ಫಂಡ್ಸ್ 2.0ಗೆ 10,000 ಕೋಟಿ ರೂ.ಗಳ ಆವರ್ತನಿಧಿಯನ್ನು ಅನುಮೋದಿಸಿದ್ದಾರೆ.

 

*****