ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ, ಸ್ಪೇನ್ ಸರ್ಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು ಫೆಬ್ರವರಿ 18 ಮತ್ತು 19, 2026ರಂದು AI ಇಂಪ್ಯಾಕ್ಟ್ ಶೃಂಗಸಭೆ 2026 ರಲ್ಲಿ ಭಾಗವಹಿಸಲು ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. 2024 ರ ಅಕ್ಟೋಬರ್ 27 ರಿಂದ 29 ರ ನಡುವೆ ನಡೆದ ದ್ವಿಪಕ್ಷೀಯ ಭೇಟಿಯ ನಂತರ ಇದು ಅವರ ಭಾರತದ ಎರಡನೇ ಅಧಿಕೃತ ಭೇಟಿಯಾಗಿದೆ. ಅವರೊಂದಿಗೆ ಡಿಜಿಟಲ್ ರೂಪಾಂತರ ಮತ್ತು ನಾಗರಿಕ ಸೇವಾ ಸಚಿವರಾದ ಶ್ರೀ ಆಸ್ಕರ್ ಲೋಪೆಜ್ ಅಗುಡಾ ಮತ್ತು ಸ್ಪೇನ್‌ನ ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಚಿವರಾದ ಶ್ರೀ ಲೂಯಿಸ್ ಪ್ಲಾನಾಸ್ ಪುಚಾಡೆಸ್ ಕೂಡಾ ಭಾರತಕ್ಕೆ ಭೇಟಿ ನೀಡಿದ್ದರು.
ಪ್ರಧಾನಮಂತ್ರಿ ಶ್ರೀ ಮೋದಿ ಮತ್ತು ಅಧ್ಯಕ್ಷರಾದ ಶ್ರೀ ಸ್ಯಾಂಚೆಜ್ ಅವರು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿ, ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ, ಮೂಲಸೌಕರ್ಯ, ಹವಾಮಾನ ಮತ್ತು ನವೀಕರಿಸಬಹುದಾದ ಇಂಧನ, ರಕ್ಷಣೆ ಮತ್ತು ಭದ್ರತೆ, ಬಾಹ್ಯಾಕಾಶ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜನರಿಂದ ಜನರ ವಿನಿಮಯ ಸೇರಿದಂತೆ ಭಾರತ-ಸ್ಪೇನ್ ಉಭಯ ದೇಶಗಳ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದರು. ಉಭಯ ನಾಯಕರು ದ್ವಿಪಕ್ಷೀಯ ಸಹಕಾರದಲ್ಲಿನ ಸಕಾರಾತ್ಮಕ ಆವೇಗವನ್ನು ಸ್ವಾಗತಿಸಿ, ಅಕ್ಟೋಬರ್ 2024 ರಲ್ಲಿ ಜಂಟಿಯಾಗಿ ಉದ್ಘಾಟಿಸಲಾದ ವಡೋದರಾ ಸೌಲಭ್ಯದ ಸಿ-295 ಸಾರಿಗೆ ವಿಮಾನ ಅಂತಿಮ ಅಸೆಂಬ್ಲಿ ಲೈನ್‌ಗಾಗಿ ಟಾಟಾ-ಏರ್‌ಬಸ್ ಸಹಯೋಗದಲ್ಲಿನ ಪ್ರಗತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ಆಧಾರದ ಮೇಲೆ ರಕ್ಷಣಾ-ಕೈಗಾರಿಕಾ ಸಹಯೋಗದ ಮಹತ್ವವನ್ನು ಕೂಡಾ ಅವರು ಒತ್ತಿ ಹೇಳಿದರು.
ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತಾದ 70 ನೇ ವಾರ್ಷಿಕೋತ್ಸವದ ಅಂಗವಾಗಿ ಈ ವರ್ಷ ಆಚರಿಸಲಾಗುತ್ತಿರುವ ಭಾರತ-ಸ್ಪೇನ್ ದ್ವಿ-ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕ ಬುದ್ಧಿಮತ್ತೆಯ ದ್ವಿತೀಯ ವರ್ಷದ ಸಾಮರ್ಥ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು. ಇದು ದ್ವಿಪಕ್ಷೀಯ ತಂತ್ರಜ್ಞಾನ, ನಾವೀನ್ಯತೆ, ವ್ಯವಹಾರ ಮತ್ತು ಜನರ ನಡುವಿನ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಅಧ್ಯಕ್ಷರಾದ ಸ್ಯಾಂಚೆಜ್ ಅವರು AI ಇಂಪ್ಯಾಕ್ಟ್ ಶೃಂಗಸಭೆಯ ಮಹತ್ವವನ್ನು ಉಲ್ಲೇಖಿಸಿ, ಅದರ ಫಲಿತಾಂಶಗಳು ಜಾಗತಿಕ AI ಆಡಳಿತವನ್ನು ರೂಪಿಸುವಲ್ಲಿ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕೃತಕ ಬುದ್ಧಿಮತ್ತೆಯನ್ನು ಪರಿವರ್ತನಾತ್ಮಕ ಶಕ್ತಿಯಾಗಿ ಇಬ್ಬರೂ ನಾಯಕರು ಗುರುತಿಸಿ, ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಯೋಜನಕ್ಕಾಗಿ ಅದರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಭಾರತ-ಸ್ಪೇನ್ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು.
ಭಾರತದ ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಸಹಕಾರದ ಸಾಧ್ಯತೆಯ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. ಈ ಸಂದರ್ಭದಲ್ಲಿ, 2026 ರ ಫೆಬ್ರವರಿ 19 ಮತ್ತು 20 ರಂದು ನವದೆಹಲಿಯಲ್ಲಿ ನಡೆದ ಭಾರತೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಸ್ಪ್ಯಾನಿಷ್ ವಿಶ್ವವಿದ್ಯಾಲಯಗಳ ರೆಕ್ಟರ್‌ಗಳ ಸಮ್ಮೇಳನವನ್ನು ಅವರು ಸ್ವಾಗತಿಸಿದರು. ದ್ವಿಮುಖ ಪ್ರವಾಸೋದ್ಯಮದಲ್ಲಿ ನಿರಂತರ ಪ್ರಭಾವಶಾಲಿ ಬೆಳವಣಿಗೆ ಕಂಡುಬರುವುದಾಗಿ ಉಭಯ ನಾಯಕರು ಹೇಳಿದರು. ಇದು ಆಯಾ ದೇಶಗಳಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆಗಳಿಗೆ ಕೊಡುಗೆ ನೀಡುತ್ತಿದ್ದು, ಜನರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಪ್ರಧಾನಮಂತ್ರಿ ಮೋದಿಯವರು ಪ್ರಮುಖ ಸ್ಪ್ಯಾನಿಷ್ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳನ್ನು, ವಿಶೇಷವಾಗಿ STEM ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ, ಹೊಸ ಶಿಕ್ಷಣ ನೀತಿಯಡಿಯಲ್ಲಿ ಭಾರತದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲು ಆಹ್ವಾನಿಸಿದರು.
ಇಂಡೋ-ಪೆಸಿಫಿಕ್ ಸಾಗರ ಉಪಕ್ರಮಕ್ಕೆ ಸೇರುವ ಸ್ಪೇನ್‌ನ ನಿರ್ಧಾರ ಸೇರಿದಂತೆ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತಾಗಿ ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ-EU FTA ಮಾತುಕತೆಯನ್ನು ಅವರು ಪ್ರಮುಖ ಮೈಲಿಗಲ್ಲು ಎಂದು ಶ್ಲಾಘಿಸಿದರು, ಇದು ಭಾರತ ಮತ್ತು ಸ್ಪೇನ್ ಹಾಗೂ ಯುರೋಪ್ ನಡುವಿನ ಅಪಾರ ವ್ಯಾಪಾರ ಮತ್ತು ಹೂಡಿಕೆ ಸಾಮರ್ಥ್ಯವನ್ನು ತೆರೆಯಲು ಮಾಡಲು ಸಹಾಯ ಮಾಡುತ್ತದೆ. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ಅವರು ಬಲವಾಗಿ ಖಂಡಿಸಿ, ಭಯೋತ್ಪಾದನೆಯನ್ನು ಎದುರಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಅಗತ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.
ದ್ವಿಪಕ್ಷೀಯ ವರ್ಷದ ಮೂಲಕ ಬಲಪಡಿಸಲಾದ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವುದು ಭಾರತ-ಸ್ಪೇನ್ ಪಾಲುದಾರಿಕೆಗೆ ಹೊಸ ಆವೇಗವನ್ನು ನೀಡುತ್ತದೆ ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.
*****
Had a productive meeting with President Pedro Sánchez in Delhi. Discussed ways to boost the India-Spain friendship, especially in areas such as defence, security, technology and more. Our nations are marking 2026 as the India-Spain Year of Culture, Tourism and AI. This will… pic.twitter.com/AAG6nssd3F
— Narendra Modi (@narendramodi) February 18, 2026
Tuve una reunión productiva con el presidente Pedro Sánchez en Delhi. Hablamos de formas de fortalecer la amistad entre la India y España, especialmente en ámbitos como la defensa, la seguridad, la tecnología y otros.
— Narendra Modi (@narendramodi) February 18, 2026
Nuestros países celebran 2026 como el Año India-España de la… pic.twitter.com/5u4IiRtjFg