Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಯಂ ಘೋಷಿತ ಗೋ ರಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಧಾನಿ; ಗೋವು ಸಂರಕ್ಷಕರೆಂಬ ಮುಖವಾಡ ತೊಟ್ಟ ಅಪರಾಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹ.


ಮೈ ಗೌ ಉದ್ಘಾಟನೆಯ ಎರಡನೇ ವರ್ಷದ ಅಂಗವಾಗಿ ವಿನೂತನವಾಗಿ ಪುರಭವನದಲ್ಲಿ ಸಂವಾದ ನಡೆಸಿದ ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು “ಗೋವುಗಳ ಹೆಸರಿನಲ್ಲಿ ಅಂಗಡಿ ನಡೆಸುತ್ತಿರುವ” ಸ್ವಯಂ ಘೋಷಿತ “ಗೋವು ರಕ್ಷಕ”ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮತ್ತು ಗೋ ರಕ್ಷಕರೆಂದು ಮುಖವಾಡ ಹಾಕಿಕೊಂಡಿರುವ ಅಪರಾಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೈ ಗೌ – ಜನ ಪಾಲ್ಗೊಳ್ಳುವ ಸರ್ಕಾರದ ಅಂತರ್ಜಾಲ ವೇದಿಕೆ ಉದ್ಘಾಟನೆಯ ಎರಡನೇ ವಾರ್ಷಿಕೋತ್ಸವ ಅಂಗವಾಗಿ ವಿಶಿಷ್ಟ ಟೌನ್ ಹಾಲ್ ಸಂವಾದದಲ್ಲಿ

ಮಾತನಾಡಿದ ಪ್ರಧಾನಿ, ರಾಜ್ಯ ಸರ್ಕಾರಗಳು ಇಂತಹವರ ಒಂದು ಪಟ್ಟಿ ಮಾಡುವಂತೆ ತಿಳಿಸಿದ್ದಾರೆ. ಹಸುಗಳು ಹೇಗೆ ಪ್ಲಾಸ್ಟಿಕ್ ಸೇವಿಸಿ ಸಾಯುತ್ತಿವೆ ಎಂಬುದನ್ನು ಪ್ರಸ್ತಾಪಿಸಿದ ಅವರು, ಯಾರು ನಿಜವಾಗಿಯೂ ಗೋವುಗಳ ಕಲ್ಯಾಣದ ಬಗ್ಗೆ ಚಿಂತಿಸುತ್ತಾರೋ ಅವರು, ಗೋವುಗಳು ಪ್ಲಾಸ್ಟಿಕ್ ತಿನ್ನದಂತೆ ಖಾತ್ರಿ ಪಡಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಉತ್ತಮ ಆಡಳಿತ, ವಿದೇಶಾಂಗ ನೀತಿ ಮತ್ತು ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಪ್ರಧಾನಮಂತ್ರಿಯವರು ಉತ್ತರ ನೀಡಿದರು.

ಯಾರಾದರೂ ನಾಗರಿಕರು ಕೇವಲ ಮತ ನೀಡುವಲ್ಲಿಗೆ ತಮ್ಮ ಕರ್ತವ್ಯ ಮುಗಿಯುತ್ತದೆ ಎಂದು ತಿಳಿದಿದ್ದರೆ, ಆಗ ಪ್ರಜಾಪ್ರಭುತ್ವದ ಸ್ಫೂರ್ತಿ ಅಪೂರ್ಣವಾಗುತ್ತದೆ ಎಂದು ಅವರು ಹೇಳಿದರು. ಜನರ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ ಅತ್ಯಗತ್ಯ ಎಂದು ಅವರುಪ್ರತಿಪಾದಿಸಿದರು. ಕೊನೆಯ ಮೈಲಿಯವರೆಗಿನ ವಿತರಣೆಯ ಬಗ್ಗೆ ಮಾತನಾಡಿದ ಅವರು, ಇದು ನೀತಿಗಳಷ್ಟೇ ಮಹತ್ವದ್ದು ಮತ್ತು ಸ್ವಲತ್ತುಗಳು ಫಲಾನುಭವಿಗಳಿಗೆ ಖಚಿತವಾಗಿ ತಲುಪಬೇಕು ಎಂದು ಹೇಳಿದರು. ಉತ್ತಮ ಆಡಳಿತ ಎಂದರೆ ಯಾವ ಪ್ರಕ್ರಿಯೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಇರುವುದಿಲ್ಲ. ಕುಂದುಕೊರತೆ ಪರಿಹಾರ ವ್ಯವಸ್ಥೆ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಎಂದು ಹೇಳಿದರು.

ಆರ್ಥಿಕತೆಗೆ ಶಕ್ತಿ ತುಂಬಬಲ್ಲ ವಲಯವೆಂದರೆ ಅದು ಕೃಷಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರುರ್ಬನ್ ಅಭಿಯಾನದ ಪ್ರಸ್ತಾಪ ಮಾಡಿದ ಪ್ರಧಾನಿ, ಈ ಮುನ್ನೋಟವು ಹಳ್ಳಿಗಳ ಆತ್ಮವನ್ನು ಉಳಿಸಿಕೊಂಡು ಗ್ರಾಮೀಣ ಪ್ರದೇಶಗಳಿಗೆ ಆಧುನಿಕ ಮೂಲಸೌಕರ್ಯ ಒದಗಿಸುವುದಾಗಿದೆ ಎಂದರು.

ಕೈಮಗ್ಗದ ವಿಚಾರದ ಮೇಲೆ ಮಾತನಾಡಿದ ಪ್ರಧಾನಮಂತ್ರಿ, “ದೇಶಕ್ಕಾಗಿ ಖಾದಿ, ಫ್ಯಾಷನ್ ಗಾಗಿ ಖಾದಿ” ಎಂದು ಬಣ್ಣಿಸಿ, ಈ ಒಂದು ನೀತಿ ಜನರಿಗೆ ಮಾರ್ಗದರ್ಶಿಯಾಗಲಿದೆ ಎಂದರು.

ಭಾರತ ಮೊದಲು (ಇಂಡಿಯಾ ಫಸ್ಟ್) ಎಂಬುದು ವಿದೇಶಾಂಗ ನೀತಿಯ ಧ್ಯೇಯವಾಗಿದೆ ಎಂದು ಹೇಳಿದರು. ಇತರ ರಾಷ್ಟ್ರಗಳೊಂದಿಗೆ ಭಾರತವನ್ನು ಬೆಸೆಯಲು ಭಾರತೀಯ ಸಮುದಾಯ ಉತ್ತಮ ಪಾತ್ರ ವಹಿಸುತ್ತಿದೆ ಎಂದರು.

ಪ್ರಧಾನಮಂತ್ರಿಯವರು ಆರೋಗ್ಯ ರಕ್ಷಣೆ ಮತ್ತು ಪ್ರವಾಸೋದ್ಯಮದ ಬಗ್ಗೆಯೂ ತಮ್ಮ 100 ನಿಮಿಷಗಳ ಸಂವಾದದ ವೇಳೆ ಪ್ರಸ್ತಾಪಿಸಿದರು.

ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು, ವೇದಿಕೆಯಲ್ಲಿ ಸಂಕ್ಷಿಪ್ತವಾಗಿ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕೆ ಮತ್ತು ಮೈ ಗೌ ವೇದಿಕೆಗೆ ಕೊಡುಗೆ ನೀಡುತ್ತಿರುವವರೊಂದಿಗೆ ಸಂವಾದ ನಡೆಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯದ ನೂತನ ಆಪ್ ಗೆ ಪ್ರಧಾನಿ ಚಾಲನೆ ನೀಡಿದರು, ಮತ್ತು ಈ ಆಪ್ ಅಭಿವೃದ್ಧಿಪಡಿಸಲು ಸಹಕರಿಸಿದ ಯುವ ಕಾಂಟ್ರಿಬ್ಯೂಟರ್ ಗಳನ್ನು ಭೇಟಿ ಮಾಡಿದರು.

****

AD/NT