ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಸ್ವಾತಂತ್ರ್ಯ ಸೈನಿಕ್ ಸಮ್ಮಾನ್ ಪಿಂಚಣಿ ಯೋಜನೆ (ಎಸ್.ಎಸ್.ಎಸ್.ಪಿ.ಎಸ್.)1980ರಡಿ ಸ್ವಾತಂತ್ರ್ಯ ಯೋಧರ ಮತ್ತು ಅವರ ಸಂಗಾತಿಗಳ (ವಿಧವೆ/ವಿಧುರ), ಅರ್ಹ ಹೆಣ್ಣುಮಕ್ಕಳ ಮತ್ತು ಮೃತಪಟ್ಟ ಸ್ವಾತಂತ್ರ್ಯಯೋಧರ ಅವಲಂಬಿತ ಪಾಲಕರ ಪಿಂಚಣಿಯನ್ನು ಹೆಚ್ಚಳ ಮಾಡಲು ಪೂರ್ವಾನ್ವಯ ಅನುಮೋದನೆ ನೀಡಿದೆ.
ಕೇಂದ್ರಿಯ ಸ್ವಾತಂತ್ರ್ಯ ಹೋರಾಟದ ಜೈಲುವಾಸಿಗಳ ಮತ್ತು ಅವರ ಅರ್ಹ ಅವಲಂಬಿತರ ಪಿಂಚಣಿ ಯೋಜನೆಯನ್ನು ಈ ಕೆಳಗಿನಂತೆ ಪುನಾರಚಿಸಲಾಗಿದೆ:-
|
1. |
ಮಾಜಿ ಅಂಡಮಾನ್ ರಾಜಕೀಯ ಸೆರೆವಾಸಿಗಳು/ ಸಂಗಾತಿಗಳು |
ರೂ. 24,775 |
ರೂ. 30,000/- |
|
2. |
ಬ್ರಿಟಿಷ್ ಭಾರತದ ಹೊರಗೆ ಹೆಣಗಿದ ಸ್ವಾತಂತ್ರ್ಯ ಯೋಧರು/ಸಂಗಾತಿಗಳು |
ರೂ. 23,085/- |
ರೂ. 28,000/- |
|
3. |
ಐ.ಎನ್.ಎ. ಸೇರಿ ಇತರ ಸ್ವಾತಂತ್ರ್ಯ ಯೋಧರು / ಸಂಗಾತಿಗಳು |
ರೂ. 21,395/- |
ರೂ. 26,000/- |
|
4. |
ಅವಲಂಬಿತ ಪಾಲಕರು/ಅರ್ಹ ಹೆಣ್ಣು ಮಕ್ಕಳು (ಯಾವುದೇ ಸಂದರ್ಭದಲ್ಲಿ ಗರಿಷ್ಠ ಮೂವರು ಹೆಣ್ಣುಮಕ್ಕಳು) |
ರೂ. 3,380/- |
ಸ್ವಾತಂತ್ರ್ಯಯೋಧರಿಗೆ ಅನ್ವಯವಾಗುವ ಮೊತ್ತದ ಶೇ.50ರಷ್ಟು ಅಂದರೆರೂ. 13,000/- ದಿಂದ ರೂ.. 15,000/-ವರೆಗೆ |
ಕ್ರ.ಸಂ | ಸ್ವಾತಂತ್ರ್ಯಯೋಧರ ವರ್ಗ | ಪ್ರಸ್ತುತ ಪಡೆಯುತ್ತಿರುವ ಪಿಂಚಣಿ (ಮಾಸಿಕ) | ಹೆಚ್ಚಳ ಮಾಡಲಾದಪಿಂಚಣಿ (ಮಾಸಿಕ) |
|---|
(i) ಪರಿಷ್ಕೃತ ಪಿಂಚಣಿಯು 2016ರ ಆಗಸ್ಟ್ 15ರಿಂದ ಜಾರಿಗೆ ಬಂದಿದೆ. ಜೊತೆಗೆ ಪರಿಷ್ಕೃತ ಒಟ್ಟಾರೆ ಪಿಂಚಣಿ ಮೊತ್ತವನ್ನು ಆಯಾ ವರ್ಗದಲ್ಲಿ ಸ್ವಾತಂತ್ರ್ಯ ಯೋಧರಿಗೆ ನೀಡಲಾಗುವ ತುಟ್ಟಿ ಪರಿಹಾರ ಲೆಕ್ಕಾಚಾರಕ್ಕೆ ಮೂಲ ಪಿಂಚಣಿ ಎಂದು ತೆಗೆದುಕೊಳ್ಳಲಾಗುತ್ತದೆ.
(ii) ಪ್ರಸ್ತುತ ತುಟ್ಟಿ ಪರಿಹಾರ ವ್ಯವಸ್ಥೆಯು ಕೈಗಾರಿಕಾ ನೌಕರರ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕವೇ ಸ್ವಾತಂತ್ರ್ಯ ಯೋಧರ ಪಿಂಚಣಿಗೆ ವಾರ್ಷಿಕ ಆಧಾರದ ಮೇಲೆ ಅನ್ವಯವಾಗುತ್ತಿತ್ತು, ಈಗ ಅದನ್ನು ರದ್ದು ಮಾಡಿ ಮತ್ತು ವರ್ಷದಲ್ಲಿ ಎರಡು ಬಾರಿ ಸರ್ಕಾರಿ ಸೌಕರರಿಗೆ ಅನ್ವಯವಾಗುವ ತುಟ್ಟಿ ಭತ್ಯೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದನ್ನು “ತುಟ್ಟಿ ಪರಿಹಾರ” ಎಂದು ಕರೆಯಲಾಗಿದೆ, ಇದು ಪಿಂಚಣಿದಾರರ ವಿಚಾರದಲ್ಲಿ ಸೂಕ್ತ ಪದವಾಗಿದೆ.
ಎಲ್ಲ ಸ್ವಾತಂತ್ರ್ಯ ಯೋಧರು ಮತ್ತು ಅವರ ಸಂಗಾತಿಗಳು ಮತ್ತು ಮರಣ ಹೊಂದಿದ ಸ್ವಾತಂತ್ರ್ಯ ಯೋಧರ ಅವಲಂಬಿತ ಪಾಲಕರು/ಅರ್ಹ ಹೆಣ್ಣು ಮಕ್ಕಳು ಸ್ವಾತಂತ್ರ್ಯ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ 1980ರ ಅಡಿಯಲ್ಲಿ ಪಿಂಚಣಿ ಪಡೆಯಲು ಅರ್ಹರಾಗಿದ್ದು, ಈ ನಿರ್ಧಾರದ ಲಾಭ ಪಡೆಯಲಿದ್ದಾರೆ.
ಹಿನ್ನೆಲೆ
ಪೋರ್ಟ್ ಬ್ಲೇರ್ ನ ಸೆಲ್ಯುಲಾರ್ ಜೈಲ್ ನಲ್ಲಿ ಬಂದಿಯಾಗಿದ್ದ ಸ್ವಾತಂತ್ರ್ಯ ಯೋಧರಿಗೆ ಗೌರವ ನೀಡಲು ಮಾಜಿ ಅಂಡಮಾನ್ ರಾಜಕೀಯ ಸೆರೆವಾಸಿಗಳ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರ 1969ರಲ್ಲಿ ಪರಿಚಯಿಸಿತು. 25ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ 1972ರಲ್ಲಿ ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಮಂಜೂರು ಮಾಡಲು ನಿಯಮಿತ ಯೋಜನೆಯನ್ನು ತರಲಾಯಿತು. ಆ ನಂತರ, 1.8.1980ರಿಂದ ಜಾರಿಗೆ ಬರುವಂತೆ ಸ್ವಾತಂತ್ರ್ಯ ಸೈನಿಕ ಸಮ್ಮಾನ ಪಿಂಚಣಿ ಯೋಜನೆ ಎಂಬ ಸರಳೀಕೃತ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಲ್ಲಿ ಸ್ವಾತಂತ್ರ್ಯ ಯೋಧರಷ್ಟೇ ಅಲ್ಲದೆ, ಅವರ ಸಂಗಾತಿಗಳು (ವಿಧವೆ, ವಿಧುರರು), ಅವಿವಾಹಿತ ಮತ್ತು ನಿರುದ್ಯೋಗಿ ಹೆಣ್ಣುಮಕ್ಕಳು (ಯಾವುದೇ ಸಂದರ್ಭದಲ್ಲಿ ಗರಿಷ್ಠ 3 ಮೀರದಂತೆ) ಮತ್ತು ಮೃತ ಸ್ವಾತಂತ್ರ್ಯ ಯೋಧರ ಅವಲಂಬಿತ ಪಾಲಕರು ಈ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ. 2016ರವರೆಗೆ ಒಟ್ಟು 1,71,605 ಸ್ವಾತಂತ್ರ್ಯಯೋಧರಿಗೆ ಮತ್ತು ಅವರ ಅರ್ಹ ಅವಲಂಬಿತರಿಗೆ ಯೋಜನೆಯಡಿ ಪಿಂಚಣಿ ಮಂಜೂರು ಮಾಡಲಾಗಿದೆ. ಪ್ರಸ್ತುತ 37,981 ಸ್ವಾತಂತ್ರ್ಯ ಯೋಧರು ಮತ್ತು ಅವರ ಅರ್ಹ ಅವಲಂಬಿತರು ಯೋಜನೆಯಡಿ ಬರುತ್ತಾರೆ. ಈ ಪೈಕಿ 11,690 ಮಂದಿ ಸ್ವಾತಂತ್ರ್ಯ ಯೋಧರಾದರೆ, 24,792 ಮಂದಿ ಸಂಗಾತಿಗಳು (ವಿಧವೆ/ವಿಧುರರು) ಮತ್ತು 1,490 ಮಂದಿ ಪಿಂಚಣಿದಾರರ ಹೆಣ್ಣುಮಕ್ಕಳು. ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಆಧಾರ್ ಸಂಪರ್ಕಿತ ವ್ಯವಸ್ಥೆಗೆ ತರುವಂತೆ ಎಲ್ಲ ಅಧಿಕೃತ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ.
***
AKT/VBA/SH