ಪಿಎಂಇಂಡಿಯಾ
ಗೌರವಾನ್ವಿತ ಅಧ್ಯಕ್ಷರೆ,
ಉಭಯ ದೇಶಗಳ ಪ್ರತಿನಿಧಿಗಳೆ,
ಮಾಧ್ಯಮ ಮಿತ್ರರೆ,
ನಮಸ್ಕಾರ!
ಸ್ವಿಜರ್ಲೆಂಡ್ ಅಧ್ಯಕ್ಷರನ್ನು ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ.
ಮೊದಲನೆಯದಾಗಿ, ಭಾರತ ಮತ್ತು ಸ್ವಿಜರ್ಲೆಂಡ್ ನಡುವಿನ ಸಂಬಂಧಗಳ ಬಲವರ್ಧನೆಗೆ ಅವರು ತೋರುತ್ತಿರುವ ಬದ್ಧತೆಯನ್ನು ನಾನು ಶ್ಲಾಘಿಸುತ್ತೇನೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಅವರ ವೈಯಕ್ತಿಕ ಬೆಂಬಲದೊಂದಿಗೆ, ಭಾರತ ಮತ್ತು ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಸಂಘಟನೆ (ಇಎಫ್ಟಿಎ) ದೇಶಗಳ ನಡುವೆ ಐತಿಹಾಸಿಕ ‘ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ’ವನ್ನು ನಾವು ಜಾರಿಗೆ ತಂದೆವು. ಯುರೋಪ್ನ ಯಾವುದೇ ಆರ್ಥಿಕ ಒಕ್ಕೂಟದೊಂದಿಗೆ ಭಾರತ ಮಾಡಿಕೊಂಡಿರುವ ಮೊದಲ ಮುಕ್ತ ವ್ಯಾಪಾರ ಒಪ್ಪಂದ(ಎಫ್ಟಿಎ) ಇದಾಗಿದೆ.
ಇದು ಹೂಡಿಕೆ, ನಾವೀನ್ಯತೆ, ಉದ್ಯೋಗಗಳು ಮತ್ತು ಹಂಚಿಕೆಯ ಸಮೃದ್ಧಿಗೆ ಒಂದು ಮಹತ್ವಾಕಾಂಕ್ಷಿ ನೀಲಿನಕ್ಷೆಯೂ ಆಗಿದೆ. ಇದರ ಮೂಲಕ, ಮುಂದಿನ 15 ವರ್ಷಗಳಲ್ಲಿ ಭಾರತದಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮತ್ತು 10 ಲಕ್ಷ ನೇರ ಉದ್ಯೋಗಗಳ ಸೃಜನೆಯ ಗುರಿಯನ್ನು ನಾವು ಹೊಂದಿದ್ದೇವೆ.
ಸ್ನೇಹಿತರೆ,
ಭಾರತ ಮತ್ತು ಸ್ವಿಜರ್ಲೆಂಡ್ ನಡುವಿನ ಸ್ನೇಹವು ಶತಮಾನಗಳಷ್ಟು ಹಳೆಯದು. 19ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಸ್ವಿಸ್ ಆಲ್ಪ್ಸ್ ಪರ್ವತ ಶ್ರೇಣಿಯಲ್ಲಿ ಹಿಮಾಲಯದ ಛಾಯೆಯನ್ನು ಕಂಡಿದ್ದರು. ಮಹಾತ್ಮ ಗಾಂಧಿ ಅವರು ಕೂಡ ಸ್ವಿಜರ್ಲೆಂಡ್ನಲ್ಲಿ ಸಮಯ ಕಳೆದು, ಅಲ್ಲಿನ ಜನರೊಂದಿಗೆ ಬೆರೆತಿದ್ದರು. ಆ ಐತಿಹಾಸಿಕ ಭೇಟಿಗಳ ನೆನಪುಗಳು ಇಂದಿಗೂ ನಮ್ಮ ಸ್ನೇಹದಲ್ಲಿ ಜೀವಂತವಾಗಿವೆ.
ಇಂದು ನಾವೀನ್ಯತೆ, ಮೂಲಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು ನಮ್ಮ ಪಾಲುದಾರಿಕೆಯ ಪ್ರಬಲ ಆಧಾರಸ್ತಂಭಗಳಾಗಿವೆ. ಇಂದಿನ ಶೃಂಗಸಭೆಯ ಮೂಲಕ, ನಾವು ನಮ್ಮ ಪಾಲುದಾರಿಕೆಗೆ ಹೊಸ ಚೈತನ್ಯ ನೀಡಿ, ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದೇವೆ.
ಸ್ನೇಹಿತರೆ,
ಸ್ವಿಜರ್ಲೆಂಡ್ನಲ್ಲಿ ಭಾರತೀಯ ರಫ್ತುಗಳಿಗೆ ಮಾರುಕಟ್ಟೆ ಪ್ರವೇಶ ಹೆಚ್ಚಿಸಲು ಮತ್ತು ಉಭಯ ದೇಶಗಳ ನಡುವೆ ಹೂಡಿಕೆಯನ್ನು ಮತ್ತಷ್ಟು ಸುಗಮಗೊಳಿಸಲು ನಾವು ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದೇವೆ.
ಇದು ಸ್ವಿಜರ್ಲೆಂಡ್ಗೆ ಭಾರತೀಯ ಕೃಷಿ ಉತ್ಪನ್ನಗಳು, ಔಷಧಗಳು, ಜವಳಿ ಮತ್ತು ಎಂಜಿನಿಯರಿಂಗ್ ಸರಕುಗಳ ರಫ್ತು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಜೈವಿಕ ತಂತ್ರಜ್ಞಾನ, ಜೀವ ವಿಜ್ಞಾನ, ಬ್ಯಾಂಕಿಂಗ್, ವಿಮೆ, ಆಹಾರ ಸಂಸ್ಕರಣೆ ಮತ್ತು ಸುಸ್ಥಿರತೆಯಂತಹ ಭಾರತದ ಪ್ರಮುಖ ವಲಯಗಳಿಗೆ ನಾವು ಹೊಸ ಸ್ವಿಸ್ ಹೂಡಿಕೆಗಳನ್ನು ಆಕರ್ಷಿಸುತ್ತೇವೆ. ಈ ಉಪಕ್ರಮಗಳ ಮೂಲಕ, ಜಗತ್ತಿಗಾಗಿ ವಿಶ್ವಾಸಾರ್ಹ ಪೂರೈಕೆ ಸರಪಳಿಗಳು ಮತ್ತು ಭರವಸೆಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.
ಸ್ನೇಹಿತರೆ,
ಇಂದು ಸೇನಾ ವಿನಿಮಯ ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಸಹಕಾರ ಹೊಂದಲು ಹೊಸ ಅವಕಾಶಗಳನ್ನು ನಾವು ಗುರುತಿಸಿದ್ದೇವೆ. ಪರಮಾಣು ಶಕ್ತಿಯಲ್ಲಿ ಸಹಕಾರವನ್ನು ಇನ್ನಷ್ಟು ಆಳಗೊಳಿಸಲು ನಾವು ಒಪ್ಪಿಕೊಂಡಿದ್ದೇವೆ.
ವಾರಣಾಸಿ ರೋಪ್ವೇ, ನೋಯ್ಡಾದ ಜೆವಾರ್ ವಿಮಾನ ನಿಲ್ದಾಣ ಮತ್ತು ಪರ್ವತ ಪ್ರದೇಶಗಳಲ್ಲಿ ರೈಲ್ವೆ ಮತ್ತು ಸುರಂಗ ಮಾರ್ಗ ಯೋಜನೆಗಳು ನಮ್ಮ ಮೂಲಸೌಕರ್ಯ ಸಹಕಾರದ ಬೆಳಕು ಚೆಲ್ಲುವ ಉದಾಹರಣೆಗಳಾಗಿವೆ. ಈ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಇಂದು ನಾವು ಸಾರಿಗೆ, ಚಲನಶೀಲತೆ ಮತ್ತು ಮೂಲಸೌಕರ್ಯಗಳ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದೇವೆ.
ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವಂತೆ, ಸಾಮರ್ಥ್ಯ ವೃದ್ಧಿ, ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನಾವು ಸ್ವಿಸ್ ಮೂಲಸೌಕರ್ಯ ಕಂಪನಿಗಳನ್ನು ಆಹ್ವಾನಿಸುತ್ತೇವೆ.
ಸ್ನೇಹಿತರೆ,
ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರವು ನಮ್ಮ ಪಾಲುದಾರಿಕೆಯ ಬಲಿಷ್ಠ ಆಧಾರಸ್ತಂಭವಾಗಿದೆ. ಆರೋಗ್ಯ, ಸ್ವಚ್ಛ ಇಂಧನ ಮತ್ತು ಬಾಹ್ಯಾಕಾಶದಂತಹ ಆದ್ಯತೆಯ ಕ್ಷೇತ್ರಗಳಲ್ಲಿ ನಾವು ಶೀಘ್ರದಲ್ಲೇ ಹೊಸ ಜಂಟಿ ಸಂಶೋಧನಾ ಯೋಜನೆಗಳನ್ನು ಪ್ರಾರಂಭಿಸಲಿದ್ದೇವೆ ಎಂಬುದರಿಂದ ನನಗೆ ತುಂಬಾ ಸಂತೋಷವಾಗಿದೆ. ಭಾರತದ ವಿಜ್ಞಾನ ನವೋದ್ಯಮಗಳ ಸಾಮರ್ಥ್ಯವನ್ನು ಹೆಚ್ಚಿಸಲು ಜ್ಯೂರಿಚ್ ವಿಶ್ವವಿದ್ಯಾಲಯದೊಂದಿಗಿನ ಒಪ್ಪಂದವನ್ನು ಸಹ ನಾವು ಸ್ವಾಗತಿಸುತ್ತೇವೆ.
ಸ್ವಿಜರ್ಲೆಂಡ್ನಲ್ಲಿ ಯೋಗ ಮತ್ತು ಆಯುರ್ವೇದದ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಕುರಿತು ನಾವು ಇಂದು ಅರ್ಥಪೂರ್ಣ ಚರ್ಚೆ ನಡೆಸಿದ್ದೇವೆ.
ಸ್ನೇಹಿತರೆ,
ಉಭಯ ರಾಷ್ಟ್ರಗಳ ಜನರಿಂದ ಜನರಿಗೆ ಸಂಬಂಧಗಳು ನಮ್ಮ ಪಾಲುದಾರಿಕೆಯ ಬಹುದೊಡ್ಡ ಶಕ್ತಿಯಾಗಿದೆ. ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದ ಮತ್ತು ಯುವ ವೃತ್ತಿಪರರ ಒಪ್ಪಂದಕ್ಕೆ ಇಂದು ಸಹಿ ಹಾಕಿದ್ದು, ಸ್ವಿಜರ್ಲೆಂಡ್ನಲ್ಲಿ ಭಾರತೀಯ ವಿದ್ಯಾರ್ಥಿಗಳು, ಸಂಶೋಧಕರು, ವೃತ್ತಿಪರರು ಮತ್ತು ಯುವಜನರಿಗೆ ಅನೇಕ ಹೊಸ ಅವಕಾಶಗಳನ್ನು ತೆರೆಯುತ್ತದೆ.
ಸ್ನೇಹಿತರೆ,
ಭಾರತ ಮತ್ತು ಸ್ವಿಜರ್ಲೆಂಡ್ ಎರಡೂ ದೇಶಗಳು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ಆಳ್ವಿಕೆ, ಸಂವಾದ ಮತ್ತು ರಾಜತಾಂತ್ರಿಕತೆಯ ಮೇಲೆ ನಂಬಿಕೆ ಹೊಂದಿವೆ. ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.
ಉಕ್ರೇನ್ ಆಗಿರಲಿ ಅಥವಾ ಪಶ್ಚಿಮ ಏಷ್ಯಾ ಆಗಿರಲಿ, ಶಾಂತಿಯತ್ತ ಸಾಗುವ ಪ್ರತಿಯೊಂದು ಅರ್ಥಪೂರ್ಣ ಪ್ರಯತ್ನವನ್ನೂ ಭಾರತವು ಸತತವಾಗಿ ಬೆಂಬಲಿಸಿದೆ.
ಹೆಚ್ಚುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅತ್ಯಗತ್ಯ ಎಂಬ ವಿಷಯವನ್ನೂ ನಾವು ಒಪ್ಪುತ್ತೇವೆ.
ಸ್ನೇಹಿತರೆ,
ದೊಡ್ಡ ವ್ಯಾಪಾರ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿದ ಸ್ವಿಜರ್ಲೆಂಡ್ ಅಧ್ಯಕ್ಷರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅಕ್ಟೋಬರ್ 7ರಂದು ಅವರ ಉಪಸ್ಥಿತಿಯಲ್ಲಿ ನಾವು ಭಾರತ- ಇಎಫ್ಟಿಎ ಉದ್ಯಮ ದಿಗ್ಗಜರೊಂದಿಗೆ “ಸಮೃದ್ಧಿ ಶೃಂಗಸಭೆ” ಆಯೋಜಿಸುತ್ತಿದ್ದೇವೆ. ನಮ್ಮ ಉದ್ಯಮ ವ್ಯಾಪಾರ ಮತ್ತು ಹೂಡಿಕೆ ಪಾಲುದಾರಿಕೆಯ ಭರವಸೆಯನ್ನು ಮೂರ್ತ ಫಲಿತಾಂಶಗಳನ್ನಾಗಿ ಪರಿವರ್ತಿಸಲು ಈ ಶೃಂಗಸಭೆಯು ಒಂದು ಪ್ರಮುಖ ವೇದಿಕೆಯಾಗಲಿದೆ. ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಉದ್ಯಮ ದಿಗ್ಗಜರಿಗೂ ನಾನು ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಗೌರವಾನ್ವಿತರೆ,
ಈ ವರ್ಷದ ಫೆಬ್ರವರಿಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಎಐ(ಕೃತಕ ಬುದ್ಧಿಮತ್ತೆ) ಶೃಂಗಸಭೆ ಆಯೋಜಿಸಿತ್ತು. ಮುಂದಿನ ವರ್ಷ ಸ್ವಿಜರ್ಲೆಂಡ್ “ಜಿನೀವಾ ಎಐ ಶೃಂಗಸಭೆ”ಯ ಮೂಲಕ ಈ ಪಯಣ ಮುಂದುವರಿಸಲಿದೆ. ಜಿನೀವಾ ಎಐ ಶೃಂಗಸಭೆಯ ಯಶಸ್ಸಿಗಾಗಿ ನಾನು ಸ್ವಿಜರ್ಲೆಂಡ್ಗೆ ಶುಭ ಹಾರೈಸುತ್ತೇನೆ. ಎಐ ತಂತ್ರಜ್ಞಾನವನ್ನು ಜವಾಬ್ದಾರಿಯುತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಮಾನವ-ಕೇಂದ್ರಿತವನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂಬ ವಿಶ್ವಾಸ ನನಗಿದೆ.
ಮತ್ತೊಮ್ಮೆ, ನಿಮ್ಮ ಭಾರತ ಭೇಟಿಗಾಗಿ ಮತ್ತು ಭಾರತ- ಸ್ವಿಜರ್ಲೆಂಡ್ ಸಂಬಂಧಗಳಿಗೆ ಬಲಿಷ್ಠ ಬೆಂಬಲಿಗರಾಗಿರುವುದಕ್ಕಾಗಿ ನಿಮಗೆ ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Addressing the press meet with Mr. Guy Parmelin, President of the Swiss Confederation. @ParmelinG https://t.co/Om5YLt3pcY
— Narendra Modi (@narendramodi) October 5, 2026
We also discussed deeper cooperation in sectors like health, clean energy, space, Yoga and Ayurveda. India and Switzerland share a strong commitment to democracy, dialogue and diplomacy. We will continue working together for global peace and stability. https://t.co/136O79i378
— Narendra Modi (@narendramodi) October 5, 2026
In our talks today, President Guy Parmelin and I discussed ways to take the India-Switzerland partnership forward across key areas like: Trade and investment, especially in the wake of the India-EFTA agreement. Defence production Nuclear energy Infrastructure and mobility Science, technology and innovation Opportunities for students and professionals @ParmelinG
— Narendra Modi (@narendramodi) October 5, 2026
हमने भारत और यूरोपियन फ्री ट्रेड एसोसिएशन, यानि “एफ्टा” देशों के बीच, एक ऐतिहासिक ट्रैड एण्ड इकनॉमिक पार्ट्नर्शिप एग्रीमेंट लागू किया। यह यूरोप के किसी भी economic bloc के साथ भारत का पहला FTA है: PM @narendramodi
— PMO India (@PMOIndia) October 5, 2026
हमने भारत के exports का स्विट्ज़रलैंड में मार्केट एक्सेस बढ़ाने, और दोनों देशों के बीच इनवेस्टमेंट को और सुगम बनाने के लिए कई महत्वपूर्ण निर्णय लिए हैं। इससे भारत के ऐग्रिकल्चर, फार्मा, textile और engineering goods का स्विट्ज़रलैंड में निर्यात बढ़ेगा। साथ-साथ, भारत के बायोटेक, लाइफ साइंसेज़, बैंकिंग, इन्श्योरेन्स, फूड प्रोसेसिंग और सस्टे-निबिलिटी जैसे महत्वपूर्ण क्षेत्रों में हम नए स्विस इनवेस्टमेंट को आकर्षित करेंगे: PM @narendramodi
— PMO India (@PMOIndia) October 5, 2026
People-to-people ties हमारी पार्ट्नर्शिप की सबसे बड़ी ताकत है। आज हुए माइग्रेशन और मोबिलिटी पार्टनरशिप एग्रीमेंट और यंग प्रोफेशनल्स एग्रीमेंट से, भारत के students, researchers, professionals और युवाओं के लिए स्विट्ज़रलैंड में कई नए अवसर खुलेंगे: PM @narendramodi
— PMO India (@PMOIndia) October 5, 2026
भारत और स्विट्ज़रलैंड, दोनों डेमोक्रेटिक वैल्यूज़, rule of law, डायलॉग और डिप्लोमेसी में विश्वास रखते हैं। हम ग्लोबल पीस और स्टेबिलिटी के लिए मिलकर काम करते रहेंगे। यूक्रेन हो या पश्चिमी एशिया, भारत शांति की दिशा में किए जाने वाले हर सार्थक प्रयास का समर्थन करता रहा है। हम इस बात पर भी एकमत हैं कि बढ़ते हुए ग्लोबल challenges के समाधान के लिए Global institutions में रिफॉर्म अनिवार्य है: PM @narendramodi
— PMO India (@PMOIndia) October 5, 2026