Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಿಜರ್ಲ್ಯಾಂಡ್ ಭೇಟಿಯ ವೇಳೆ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ (ಜೂನ್ 6, 2016)

ಸ್ವಿಜರ್ಲ್ಯಾಂಡ್ ಭೇಟಿಯ ವೇಳೆ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ (ಜೂನ್ 6, 2016)


ಘನತೆವೆತ್ತ ಅಧ್ಯಕ್ಷ ಜೊಹಾನ್ ಷ್ನೇಯ್ಡರ್-ಅಮ್ಮನ್ ಅವರೇ,

ಸ್ನೇಹಿತರೇ

ಮಾನ್ಯರೇ ನಿಮ್ಮ ಆತ್ಮೀಯ ಹೇಳಿಕೆ ಮತ್ತು ಆಹ್ವಾನಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾನು ಈ ನೈಜ ಅಂತಾರಾಷ್ಟ್ರೀಯ ನಗರ ಜಿನೀವಾದಲ್ಲಿ ನಿಮ್ಮೊಂದಿಗೆ ನಿಂತು ಇತಿಹಾಸದ ತೂಕವನ್ನು ಅನುಭವಿಸುತ್ತಿದ್ದೇನೆ. ಮತ್ತು ಇದು ಕೇವಲ ಅಂತಾರಾಷ್ಟ್ರೀಯವಷ್ಟೇ ಅಲ್ಲ, ಜೊತೆಗೆ ಮಾನವೀಯತೆಯ ಆತ್ಮವನ್ನುಳ್ಳ ನಗರವಾಗಿದೆ. ಎಲ್ಲಕ್ಕಿಂತ ಇದು “ರೆಡ್ ಕ್ರಾಸ್” ತವರು, ಮತ್ತು ಮನುಕುಲದ ಸೇವೆಗೆ ಅರ್ಪಿಸಿಕೊಂಡ ಹಲವು ಅಂತಾರಾಷ್ಟ್ರೀಯ ಸಂಘಟನೆಗಳ ಕೇಂದ್ರಸ್ಥಾನ.

ಭಾರತ ಮತ್ತು ಸಿಜರ್ಲ್ಯಾಂಡ್ ಎರಡೂ ವಿಶ್ವದಲ್ಲಿ ಮಾನವೀಯತೆ ಮೌಲ್ಯಗಳನ್ನು ಅರ್ಥಮಾಡಿಕೊಂಡ, ಶಾಂತಿಯ ಧ್ವನಿಯಾಗಿವೆ. ಕಳೆದ ಏಳು ದಶಕಗಳಲ್ಲಿ ನಮ್ಮ ಬಾಂಧವ್ಯ ನಿರಂತರವಾಗಿ ಏರುಗತಿಯ ಮಾರ್ಗದಲ್ಲಿ ಸಾಗಿರುವುದನ್ನು ಕಾಣುತ್ತೇವೆ. ಇಂದು ನಾನು ಮತ್ತು ಅಧ್ಯಕ್ಷರು ನಮ್ಮ ಬಹುಶ್ರುತವಾದ ದ್ವಿಪಕ್ಯ ಬಾಂಧವ್ಯದ ಪರಾಮರ್ಶೆ ನಡೆಸಿದ್ದೇವೆ. ಅಲ್ಲದೆ ನಾವು ಸ್ವಿಸ್ ಸಿ.ಇ.ಓ.ಗಳೊಂದಿಗೆ ವಿವರವಾದ ಚರ್ಚೆ ನಡೆಸಿದ್ದೇವೆ.

ಸ್ನೇಹಿತರೇ,

ನಮ್ಮ ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ನಂಟು ಬಲವಾಗಿದೆ ಮತ್ತು ರೋಮಾಂಚಕವಾಗಿದೆ. ಹಲವು ಸ್ವಿಸ್ ಕಂಪನಿಗಳು ಭಾರತದಲ್ಲಿ ಮನೆ ಮಾತಾಗಿವೆ. ವ್ಯಾಪಾರ, ಹೂಡಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿಯ ಸಹಯೋಗದ ಬಾಂಧವ್ಯದ ಫಲಗಳು ನಮ್ಮ ಎರಡೂ ಸಮಾಜಕ್ಕೆ ದೊರಕುತ್ತಿದೆ. ಭಾರತವು ಇ.ಎಫ್.ಟಿ.ಎ. ಜೊತೆಗೆ ಎಫ್.ಟಿ.ಎ. ಮಾತುಕತೆ ಮರು ಆರಂಭಿಸಲು ಸಿದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ನಮ್ಮೆಲ್ಲರಿಗೂ ಸ್ವಿಸ್ ಆರ್ಥಿಕತೆಯ ಬಲದ ಅರಿವಿದೆ. ಆದರೆ ಭಾರತವು ಕೂಡ ಅಗಾದವಾದ ಪರಿವರ್ತನೆಯಲ್ಲ ಸಾಗುತ್ತಿದೆ. ನಾವು ಈಗ ವಿಶ್ವದಲ್ಲಿಯೇ ತ್ವರಿತವಾಗಿ ಬೆಲೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದ್ದೇವೆ. ಆದರೆ, ಅದೊಂದೇ ಸಾಕಾಗುವುದಿಲ್ಲ. ನಾನು ಭಾರತದ ಆರ್ಥಿಕತೆ ಸ್ಮಾರ್ಟ್, ಸುಸ್ಥಿರ ನಗರಗಳು, ದೃಢವಾದ ಕೃಷಿ ವಲಯ, ಚೈತನ್ಯಶೀಲ ಉತ್ಪಾದನಾ ವಲಯ ಮತ್ತು ಕ್ರಿಯಾತ್ಮಕ ಸೇವಾ ವಲಯ ಮುನ್ನಡೆಸಬೇಕು ಎಂದು ಬಯಸುತ್ತೇನೆ. ಮತ್ತು ಅದರ ಎಂಜಿನ್ ಗಳು ವಿಶ್ವದರ್ಜೆಯ ರೈಲು, ರಸ್ತೆ, ವಿಮಾನನಿಲ್ದಾಣ ಮತ್ತು ಡಿಜಿಟಲ್ ಸಂಪರ್ಕದ ಜಾಲದಲ್ಲಿ ಓಡಬೇಕು. ಅಲ್ಲಿ ಸರ್ವರಿಗೂ ಸೂರು ಮತ್ತು ಪ್ರತಿ ಮನೆಗೂ ವಿದ್ಯುತ್ ಇರಬೇಕು. ಮತ್ತು 500 ದಶಲಕ್ಷಕ್ಕೂ ಹೆಚ್ಚು ಯುವಕರು ಕೌಶಲವಂತರಾಗಿ ಮತ್ತು ಜಾಗತಿಕ ಮಾನವಶಕ್ತಿಯ ಅಗತ್ಯಗಳನ್ನು ಪೂರೈಸುವಂತಿರಬೇಕು. ಅಧ್ಯಕ್ಷರೆ ನಾನು ಭಾರತದ ಅಗತ್ಯಗಳಿಗೆ ಅನುಗುಣವಾದ ಸ್ವಿಸ್ ವೃತ್ತಿಪರ ಮತ್ತು ಶೈಕ್ಷಣಿಕ ತರಬೇತಿ ವ್ಯವಸ್ಥೆಯನ್ನು ಕಟ್ಟಲು ಒಪ್ಪಿದ್ದೇನೆ. ನಿನ್ನೆ ನಾವು ವಿಶ್ವ ಪರಿಸರ ದಿನ ಆಚರಿಸಿದೆವು. ಅದರ ಉದ್ದೇಶಗಳಿಗೆ ಮತ್ತು ಭಾರತದ ನಾಗರಿಕತೆಯ ಸಿದ್ಧಾಂತಗಳಿಗೆ ತಕ್ಕಂತೆ ಅಂದರೆ ಭೂಗ್ರಹ ಸ್ನೇಹಿಯಾಗಿ ಆರ್ಥಿಕವಾಗಿ ಪ್ರಗತಿ ಸಾಧಿಸುವುದು ಭಾರತದ ನಿಲುವಾಗಿದೆ. ಅವಶೇಷಗಳ ಇಂಧನಗಳ ಬದಲಾಗಿ ಪುನರ್ನವೀಕರಿಸುವ ಇಂಧನ ನಮ್ಮ ಉದ್ದೇಶವಾಗಿದೆ.

ಸ್ನೇಹಿತರೇ,

ನಾವು ನಮ್ಮ ಅಭಿವೃದ್ಧಿ ಮತ್ತು ಸ್ವಿಸ್ ಶಕ್ತಿಗೆ ಸೂಕ್ತವಾದ ಸಂಪರ್ಕವನ್ನು ಕಂಡಿದ್ದೇವೆ. ಹೀಗಾಗಿ ಭಾರತದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾಲದಾರರಾಗಲು ಇಂಥ ಶ್ರೇಷ್ಠ ಅವಕಾಶವನ್ನು ಬಳಸಿಕೊಳ್ಳುವಂತೆ ನಾನು ಸ್ವಿಸ್ ಕಂಪನಿಗಳಿಗೆ ಆಹ್ವಾನ ನೀಡುತ್ತೇನೆ. ಅಂತಿಮವಾಗಿ 125 ಕೋಟಿ ಜನರ ಆರ್ಥಿಕ ಪ್ರಗತಿ ಇಡೀ ವಿಶ್ವಕ್ಕೇ ಲಾಭ ತರುವಂತಿರಬೇಕು.

ಸ್ನೇಹಿತರೇ,

ಭಾರತ ಮತ್ತು ಸ್ವಿಜರ್ಲ್ಯಾಂಡ್ ಗಳು ಪ್ರಸಕ್ತ ಜಾಗತಿಕ ವಾಸ್ತವಗಳ ರೀತ್ಯ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸುಧಾರಣೆ ಮಾಡಲು ಬದ್ಧತೆಯನ್ನು ಹಂಚಿಕೊಂಡಿವೆ. ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶ್ವಾಶ್ವತ ಸದಸ್ಯತ್ವಕ್ಕಾಗಿ ಪರಸ್ಪರರಿಗೆ ಬೆಂಬಲ ನೀಡಲು ಒಪ್ಪಿದ್ದೇವೆ. ಪರಮಾಣು ಸರಬರಾಜು ಗುಂಪಿನ ಸದಸ್ಯತ್ವಕ್ಕೆ ಭಾರತಕ್ಕೆ ಬೆಂಬಲ ನೀಡಿದ ಮತ್ತು ಅರ್ಥಮಾಡಿಕೊಂಡ ಸ್ವಿಜರ್ಲ್ಯಾಂಡ್ ಅಧ್ಯಕ್ಷರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಕಪ್ಪುಹಣದ ವಿರುದ್ಧದ ಹೋರಾಟಕ್ಕೆ ಮತ್ತು ತೆರಿಗೆ ವಂಚನೆ ತಡೆ ಸಹ ನಮ್ಮ ವಿನಿಮಯಿತ ಆದ್ಯತೆಯಾಗಿದೆ. ನಾವು ತೆರಿಗೆ ಅಪರಾಧಿಗಳನ್ನು ನ್ಯಾಯಾಂಗಕ್ಕೆ ತರಲು ತ್ವರಿತವಾಗಿ ಹಾಗೂ ಆದಷ್ಟು ಶೀಘ್ರ ಮಾಹಿತಿಯ ವಿನಿಮಯದ ಅಗತ್ಯ ಕುರಿತೂ ಚರ್ಚಿಸಿದ್ದೇವೆ. ಈ ನಿಟ್ಟಿನಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದ ಕುರಿತ ಮಾತುಕತೆಯ ತ್ವರಿತ ಆರಂಭ ಮಹತ್ವದ್ದಾಗಿದೆ.

ಸ್ನೇಹಿತರೇ,

ನಮ್ಮ ಈ ಬಾಂಧ್ಯವ್ಯದ ಕೊಂಡಿಗೆ ನಮ್ಮ ಎರಡೂ ದೇಶಗಳ ಜನತೆಯ ಬಲವಾದ ಬಾಂಧವ್ಯ ಮಹತ್ವದ ನೆಲೆ ಮತ್ತು ಮಾನದಂಡವಾಗಿದೆ. ಭಾರತೀಯ ಚಲನಚಿತ್ರೋದ್ಯಮಕ್ಕೆ ಧನ್ಯವಾದಗಳು. ನಮಗೆ ಸ್ವಿಸ್ ಭೂದೃಶ್ಯದ ಅದ್ಭುತ ಸೌಂದರ್ಯಕ್ಕೆ ಪರಿಚಿತರಾಗಿದ್ದೇವೆ. ಅದೇ ರೀತಿ ನಾವೂ ಕೂಡ ದೊಡ್ಡ ಸಂಖ್ಯೆಯ ಸ್ವಿಸ್ ಪ್ರವಾಸಿಗರನ್ನು ಭಾರತಕ್ಕೆ ಸ್ವಾಗತಿಸಲು ಉತ್ಸುಕರಾಗಿದ್ದೇವೆ. ಇದಕ್ಕಾಗಿ ನಾವು ಸ್ವಿಸ್ ರಾಷ್ಟ್ರೀಯರಿಗೆ ಈ ವರ್ಷದ ಆರಂಭದಿಂದ ಇ- ಪ್ರವಾಸಿ ವೀಸಾ ವ್ಯವಸ್ಥೆ ಜಾರಿಗೊಳಿಸಿದ್ದೇವೆ.

ಸ್ನೇಹಿತರೇ,

ನಮ್ಮ ಸ್ನೇಹ ಕುರಿತಂತೆ ಹಲವು ಯಶೋಗಾಥೆಗಳಿವೆ. ಅದರಲ್ಲಿ ಒಂದೆಂದರೆ, ಗ್ರಾಂಡ್ ಸ್ಲಾಮ್ ಟೆನಿಸ್ ವಿಶ್ವದಲ್ಲಿ ಹೆಸರಾಂತ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಮತ್ತು ಭಾರತದ ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್ ಪೇಸ್ ಜೋಡಿಯಾಗಿ ಆಡುತ್ತಾರೆ. ನಮ್ಮ ಸಾಮಾನ್ಯ ಬದ್ಧತೆಗಳು ಮತ್ತು ಮೌಲ್ಯಗಳು, ಜನರಿಂದ ಜನರ ಸಂಪರ್ಕ ಮತ್ತು ಬಲಿಷ್ಠ ಮತ್ತು ಬೆಳೆಯುತ್ತಿರುವ ಆರ್ಥಿಕ ಪಾಲುದಾರಿಕೆ ನಮ್ಮ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ನಂಬಿಕೆ ನನಗಿದೆ.

ನಾನು ಮತ್ತೊಮ್ಮೆ ಜಿನೀವಾ ಆತಿಥ್ಯಕ್ಕೆ ಧನ್ಯವಾದ ಅರ್ಪಿಸುತ್ತೇನೆ.

ಧನ್ಯವಾದಗಳು.

AKT/SH