Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಲವು ಆಪರೇಟರುಗಳು ಹೊಂದಿರುವ ಅಥವಾ ಮುಂಬರುವ ಹರಾಜಿನಲ್ಲಿ ಅವರು ಪಡೆದುಕೊಳ್ಳಲಿರುವ ವಿವಿಧ ತರಂಗಾಂತರ ಬ್ಯಾಂಡ್ ಗಳ ತರಂಗಾಂತರಗಳ ಬಳಕೆ ಶುಲ್ಕಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಶೀಘ್ರವೇ ಹರಾಜು ನಡೆಯಲಿರುವ ವಿವಿಧ ತರಂಗಾಂತರ ಬ್ರಾಂಡ್ ಗಳಿಗೆ ತರಂಗಾಂತರ ಬಳಕೆ ಶುಲ್ಕ (ಎಸ್.ಯು.ಸಿ) ದರಗಳನ್ನು ಅನುಮೋದಿಸಿದೆ. ಈ ನಿರ್ಧಾರದೊಂದಿಗೆ ದೂರಸಂಪರ್ಕ ಇಲಾಖೆಗೆ ತರಂಗಾಂತರ ಹರಾಜಿಗಾಗಿ ಅರ್ಜಿಗಳನ್ನು ಆಹ್ವಾನಿಸಲು ಪ್ರಕಟಣೆ ಹೊರಡಿಸಲು ಹಾದಿ ಸುಗಮವಾಗಿದೆ.

ಸಂಪುಟದ ನಿರ್ಧಾರದಂತೆ ತರಂಗಾಂತರ ಬಳಕೆಯ ಶುಲ್ಕಗಳು ಈ ಕೆಳಗೆ ಸೂಚಿಸಿರುವಂತೆ ಇವೆ:

(i) ಮುಂಬರುವ ಹರಾಜಿನಲ್ಲಿ ಪಡೆದುಕೊಳ್ಳುವ 700, 800, 900, 1800, 2100, 2300 ಮತ್ತು 2500 ಎಂ.ಎಚ್.ಝಡ್. ಬ್ರಾಂಡ್ ತರಂಗಾಂತರಕ್ಕೆ ತಂತಿ ಮಾರ್ಗ ಸೇವೆಯ ಆದಾಯ ಹೊರತುಪಡಿಸಿ ಹೊಂದಾಣಿಕೆಯಾದ ನಿವ್ವಳ (ಎಜಿಆರ್) ಶೇ.3ರಷ್ಟು.

(ii) ಒಬ್ಬ ಆಪರೇಟರ್ ಗೆ ನೀಡಲಾದ (ಆಡಳಿತಾತ್ಮಕವಾಗಿ ಅಥವಾ ಹರಾಜಿನ ಮೂಲಕ ಅಥವಾ ಮಾರಾಟದ ಮೂಲಕ ಹೇಗೆ ಆಗಲಿ) ಎಸ್.ಯು.ಸಿ.ಯ ಮಾಪನದ ಸರಾಸರಿ ದರಗಳು 2010 ಹರಾಜಿನಲ್ಲಿ ಪಡೆದ ಬಿಡಬ್ಲ್ಯುಎ ಸ್ಪೆಕ್ಟ್ರಮ್ ಸೇರಿದಂತೆ ಎಲ್ಲಾ ಲಭ್ಯ ತರಂಗಾಂತರ ಬ್ಯಾಂಡ್ಗ ಗಳಿಗೂ ಆದರೆ ತಂತಿ ಮಾರ್ಗದ ಆದಾಯ ಹೊರತುಪಡಿಸಿ ಎ.ಜಿ.ಆರ್.ನ ಕನಿಷ್ಠ ಶೇ.3ರಷ್ಟು ಆದಾಯಕ್ಕೆ ಎಸ್.ಯು.ಸಿ. ದರಗಳು ಅನ್ವಯಿಸುತ್ತವೆ. ಹೊಂದಿರುವ ತರಂಗಾಂತರದ ಮೊತ್ತ ಮತ್ತು ಅನ್ವಯವಾಗುವ ಎಸ್.ಯು.ಸಿ. ದರಗಳನ್ನು ಒಟ್ಟು ತರಂಗಾಂತರದಿಂದ ಭಾಗಿಸಿದಾಗ ಮಾಪನದ ಸರಾಸರಿ ತಿಳಿದುಬರುತ್ತದೆ. ಮಾಪನದ ಸರಾಸರಿ ದರವನ್ನು ಪ್ರತಿ ಆಪರೇಟರ್ ಗೆ ಪ್ರತಿ ಸೇವಾ ವಲಯಕ್ಕೆ ನಿರ್ಧರಿಸಲಾಗುತ್ತದೆ.

(iii) 2015-16ರ ಸಾಲಿನಲ್ಲಿ ಆಪರೇಟರ್ ಗಳು ಮಾಪನ ಸರಾಸರಿಯಂತೆ ಪಾವತಿ ಮಾಡಬೇಕಾದ ಎಸ್.ಯು.ಸಿ. ಮೊತ್ತವನ್ನು ಮುಂಬರುವ ಹರಾಜಿನಲ್ಲಿ ಪಡೆದುಕೊಳ್ಳುವ ತರಂಗಾಂತರವನ್ನೂ ಪರಿಗಣಿಸಿ ಮತ್ತು 2015-16ಕ್ಕೆ ಮುನ್ನ ಪಡೆಯಲಾದ/ಹಂಚಿಕೆ ಮಾಡಲಾದ 2300 MHz/2500 MHz ಬ್ಯಾಂಡ್ ತರಂಗಾಂತರ ಹೊರತು ಪಡಿಸಿ ನಿರ್ಧರಿಸಲಾಗುತ್ತದೆ. ಇದನ್ನು ಆಪರೇಟರ್ ಗಳು ಪಾವತಿ ಮಾಡಬೇಕಾದ ಎಸ್.ಯು.ಸಿ.ಯ ಫ್ಲೋರ್ ಮೊತ್ತ ಎಂದು ಪರಿಗಣಿಸಲಾಗುತ್ತದೆ. ಒಂದೊಮ್ಮೆ ಸೇವೆ ಒದಗಿಸುವವರ ಎ.ಜಿ.ಆರ್.ನಲ್ಲಿ ಕಡಿತ ಇದ್ದಲ್ಲಿ, ಎಸ್.ಯು.ಸಿ.ಯ ಫ್ಲೋರ್ ಮೊತ್ತವನ್ನು ಅದಕ್ಕೆ ಅನುಗುಣವಾಗಿ ಕಡಿತ ಮಾಡಲಾಗುತ್ತದೆ.

ಇದು ಸರಳ, ಪಾರದರ್ಶಕ ಮತ್ತು ಕಾನೂನು ರೀತ್ಯ ಫ್ಲಾಟ್ ಆಡ್-ವಲೋರೆಮ್ ಎಸ್.ಯು.ಸಿ. ಆಡಳಿತಕ್ಕೆ ಸಾಗಲು ಅವಕಾಶ ಮಾಡಿಕೊಡುತ್ತದೆ ಮತ್ತು ಆದಾಯವನ್ನು ತಪ್ಪಿಸಿ ಸಾಗುವ ರಚನಾತ್ಮಕ ಲೆಕ್ಕಾಚಾರವನ್ನು ತಡೆಯುತ್ತದೆ.

***

AD/VBA/SH