ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಹೂಡಿಕೆ ಕುರಿತಂತೆ ಭಾರತ ಮತ್ತು ಬೆಲಾರಸ್ ನಡುವೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಟಿ)ಗೆ ಅಂಕಿತ ಹಾಕಲು ಮತ್ತು ಸ್ಥಿರೀಕರಿಸಲು ತನ್ನ ಅನುಮೋದನೆ ನೀಡಿದೆ.
ಎರಡೂ ದೇಶಗಳ ನಡುವೆ ಈ ಒಪ್ಪಂದವು ಹೂಡಿಕೆಯ ಹರಿವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಈ ಒಪ್ಪಂದವು ಹೂಡಿಕೆದಾರರ ವಿಶ್ವಾಸವನ್ನು ಸುಧಾರಿಸುವ ನಿರೀಕ್ಷೆ ಇದ್ದು, ಎಫ್.ಡಿ.ಐ. ಮತ್ತು ಸಾಗರೋತ್ತರ ನೇರ ಹೂಡಿಕೆ (ಓ.ಡಿ.ಐ.) ಅವಕಾಶಗಳ ಹೆಚ್ಚಳಕ್ಕೆ ಕಾರಣವಾಗಲಿದೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.
ಬೆಲಾರಸ್ ಒಂದು ಯುರೇಷಿಯನ್ ಆರ್ಥಿಕ ಒಕ್ಕೂಟದ (ಇ.ಎಂ.ಇಯು) ಸದಸ್ಯ ರಾಷ್ಟ್ರವಾಗಿದ್ದು, ಎರಡು ದೇಶಗಳ ನಡುವೆ ಬಿಐಟಿಯ ಅಂಕಿತ ಮತ್ತು ಸ್ಥಿರೀಕರಣ ವ್ಯೂಹಾತ್ಮಕ ಉಪಕ್ರಮವಾಗಿ ಕಾರ್ಯನಿರ್ವಹಿಸಲಿದೆ. ಭಾರತ ಈಗಾಗಲೇ ಕಿರ್ಗಿಜ್ ಗಣರಾಜ್ಯದೊಂದಿಗೆ ಬಿ.ಐ.ಟಿ. ಪಠ್ಯ ಪ್ರಾರಂಭಿಸಿದೆ ಮತ್ತು ರಷ್ಯಾ ಒಕ್ಕೂಟದೊಂದಿಗೆ ಮಾದರಿ ಬಿಐಟಿ ಪಠ್ಯದ ಆಧಾರದ ಮೇಲೆ ಹೊಸ ಬಿಐಟಿಗಾಗಿ ಮಾತುಕತೆ ನಡೆಸುತ್ತಿದೆ.
******