ಪಿಎಂಇಂಡಿಯಾ
ಪ್ರಮುಖ ಲಕ್ಷಣಗಳು:
ಈ ತಿಳುವಳಿಕಾ ಒಪ್ಪಂದಗಳಲ್ಲಿ ಬರುವ ಸಹಕಾರ ಕ್ಷೇತ್ರಗಳು ಕೆಳಗಿನಂತಿವೆ;
1. ಭೂಮಿಯನ್ನು ಬಹುದೂರದಿಂದ ಪರೋಕ್ಷವಾಗಿ ಅರಿಯುವುದು;
2. ಕೃತಕ ಉಪಗ್ರಹಮೂಲಕ ಸಂವಹನ ಮತ್ತು ಅದರ ಆಧಾರಿತ ನೌಕಾಯಾನ ಸಂಚಾರ
3. ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಸಂಬಂಧಿತ ಅವಕಾಶಗಳ ಸೃಷ್ಠಿ
4. ಬಾಹ್ಯಾಕಾಶ ನೌಕೆ / ಗಗನನೌಕೆ, ಉಡಾವಣಾ ನೌಕೆಗಳು, ಬಾಹ್ಯಾಕಾಶ ವ್ಯವಸ್ಥೆಗಳು,
ಮತ್ತು ಭೂವ್ಯವಸ್ಥೆಗಳು
5. ಭೂಕೇಂದ್ರಿತ ಬಾಹ್ಯಾಕಾಶ ಸಲಕರಣೆಗಳು ಮತ್ತು ತಂತ್ರಜ್ಞಾನಗಳು ಸೇರಿದಂತೆ
ಬಾಹ್ಯಾಕಾಶ ತಂತ್ರಜ್ಞಾನಗಳ ಪ್ರಾಯೋಗಿಕ ಅನುಷ್ಠಾನಗಳು; ಮತ್ತು
6. ಕಕ್ಷಿಗಳು ನಿರ್ಧರಿಸುವ ಇತರ ಕ್ಷೇತ್ರಗಳ ಸಹಕಾರಗಳು
ತಿಳುವಳಿಕಾ ಒಪ್ಪಂದಗಳ ಸಹಕಾರಗಳು ಈ ಕೆಳಗಿನಂತೆ ನಡೆಯುತ್ತವೆ:
1. ಪರಸ್ಪರ ಆಸಕ್ತಿಯ ಮತ್ತು ಪ್ರಯೋಜನಕಾರಿ ಜಂಟಿ ಬಾಹ್ಯಾಕಾಶ ಯೋಜನೆಗಳನ್ನು
ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು
2. ಬಾಹ್ಯಾಕಾಶ ಚಟುವಟಿಕೆಗಳ ಪೂರಕವಾಗಿ ಭೂಸ್ಥರ ನಿಲ್ದಾಣಗಳನ್ನು ಸ್ಥಾಪನೆ, ಚಾಲನೆ
ಮತ್ತು ನಿರ್ವಹಣೆ;
3. ಕೃತಕ ಉಪಗ್ರಹಗಳ ದತ್ತಾಂಶ, ಪ್ರಯೋಗಗಳ ಫಲಿತಾಂಶಗಳು ಮತ್ತು ವೈಜ್ಞಾನಿಕ ಹಾಗೂ
ತಂತ್ರಜ್ಞಾನಗಳ ಮಾಹಿತಿಗಳನ್ನು ಹಂಚಿಕೊಳ್ಳುವುದು;
4. ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳು;
5. ಸಹಕಾರ ಕಾರ್ಯಕ್ರಮಗಳಲ್ಲಿ ತಾಂತ್ರಿಕತೆ ಮತ್ತು ವೈಜ್ಞಾನಿಕ ಕಾರ್ಯಗಳಿಗಾಗಿ
ನಿಯೋಜಿತ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆ;
6. ಸಮಾಜದ ಉದ್ಧೇಶಗಳ ಬಳಕೆಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ತಂತ್ರಜ್ಞಾನ ಮತ್ತು
ಬಾಹ್ಯಾಕಾಶ ಸಂಬಂಧಿತ ಕಾರ್ಯಕ್ರಮಗಳು;
7. ಜಂಟಿ ಸಿಂಪೋಸಿಯಗಳು, ಸಮಾವೇಶಗಳು ಮತ್ತು ವೈಜ್ಞಾನಿಕ ಸಭೆಗಳನ್ನು ಏರ್ಪಡಿಸುವುದು; ಮತ್ತು
8. ಕಕ್ಷಿಗಳ ನಡುವಣ ಪರಸ್ಪರ ಸಮ್ಮತಿ ಬರೆಯುವ ಮೂಲಕ ಹೆಚ್ಚುವರಿ ರೀತಿಯ ಸಹಕಾರವನ್ನೂ
ನಿರ್ಧರಿಸುತ್ತದೆ.
ಪ್ರಯೋಜನಗಳು:
ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಮತ್ತು ದೂರದಿಂದ ಪರೋಕ್ಷವಾಗಿ ಭೂಮಿಯನ್ನು
ಅರಿಯುವಿಕೆ ಸೇರಿದಂತೆ ಬಾಹ್ಯಾಕಾಶ ಕಾರ್ಯಕ್ರಮಗಳು, ಕೃತಕ ಉಪಗ್ರಹ ಸಂವಹನ ಮತ್ತು
ಕೃತಕ ಉಪಗ್ರಹ ಆಧಾರಿತ ನೌಕಾಯಾನ ಸಂಚಾರ ವ್ಯವಸ್ಥೆ; ಬಾಹ್ಯಕಾಶ ವಿಜ್ಞಾನ ಮತ್ತು
ಗ್ರಹಸಂಬಂಧಿತ ಅವಕಾಶಗಳು; ಗಗನನೌಕೆಗಳ ಮತ್ತು ಬಾಹ್ಯಾಕಾಶ ವ್ಯವಸ್ಥೆಗಳು ಹಾಗೂ
ಭೂಸ್ಥರ ವ್ಯವಸ್ಥೆಗಳ ಬಳಕೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳ ಬಳಕೆ ಮುಂತಾದ
ಸಾಧ್ಯತೆಗಳ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಮುಂದುವರಿಸುವುದನ್ನು ತಿಳುವಳಿಕಾ
ಒಪ್ಪಂದಗಳಿಗೆ ಸಹಿಹಾಕುವ ಮೂಲಕ ಸಶಕ್ತಿಗೊಳಿಸಲಾಗುತ್ತದೆ.