ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮುಂದಿನ ನಾಲ್ಕು ವರ್ಷಗಳಲ್ಲಿ (2016-2020) ಒಂದು ಕೋಟಿ ಜನರಿಗೆ ಕೌಶಲ ಹೆಚ್ಚಿಸುವ ಸಲುವಾಗಿ 12,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ (ಪಿ.ಎಂ.ಕೆ.ವಿ.ವೈ)ಗೆ ತನ್ನ ಅನುಮೋದನೆ ನೀಡಿದೆ. ಪಿ.ಎಂ.ಕೆ.ವಿ.ವೈ. 60 ಲಕ್ಷ ಯುವಕರಿಗೆ ಹೊಸದಾಗಿ ಮತ್ತು ಅನೌಪಚಾರಿಕವಾಗಿ ಈ ಮೊದಲೇ ಕಲಿತಿರುವವರಿಗೆ ಮಾನ್ಯತೆ ನೀಡುವ (ಆರ್.ಪಿ.ಎಲ್.) ಅಡಿ 40 ಲಕ್ಷ ಜನರಿಗೆ ಕೌಶಲ ತರಬೇತಿ ನೀಡಲಿದೆ. ಹೊಸದಾಗಿ ತರಬೇತಿ ನೀಡುವ ಮತ್ತು ಆರ್.ಪಿ.ಎಲ್. ನಡುವಿನ ಹಂಚಿಕೆಯ ಗುರಿ ಕಾರ್ಯಾನುಷ್ಠಾನ ಮತ್ತು ಕಾರ್ಯಾಚರಣೆ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ ಮತ್ತು ಬದಲಾವಣೆಯಾಗಬಹುದಾದುದಾಗಿದೆ.
ಈ ಯೋಜನೆ, ಈ ಮುನ್ನ ಅಧಿಸೂಚನೆಗೊಳಿಸಲಾಗಿರುವ ಸಾಮಾನ್ಯ ನಿಬಂಧನೆಗಳಿಗೆ ಸೇರಿದ್ದಾಗಿರುತ್ತದೆ. ತರಬೇತಿ ಮತ್ತು ನಿರ್ಧರಣೆಯ ವೆಚ್ಚವನ್ನು ನೇರವಾಗಿ ತರಬೇತಿ ನೀಡುವವರಿಗೆ ಮತ್ತು ನಿರ್ಧರಣೆ ಕಾಯಗಳಿಗೆ ಸಾಮಾನ್ಯ ನಿಯಮಗಳ ಅಡಿಯಲ್ಲಿ ಮರು ಪಾವತಿ ಮಾಡಲು ಇದು ಅನುದಾನ ಆಧಾರಿತ ಮಾದರಿ ನಡೆಯಾಗಿದೆ.
ತರಬೇತಿಪಡೆಯುವವರಿಗೆ ಆರ್ಥಿಕ ಬೆಂಬಲವನ್ನು ಸಾರಿಗೆ ಭತ್ಯೆ, ವಸತಿ ಮತ್ತು ಊಟದ ಭತ್ಯೆಯ ವೆಚ್ಚದ ರೂಪದಲ್ಲಿ ನೀಡಲಾಗುತ್ತದೆ. ತರಬೇತಿ ನಂತರದ ಉದ್ಯೋಗ ಬೆಂಬಲವನ್ನು ಫಲಾನುವಭವಿಗಳಿಗೆ ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಮೂಲಕ ನೇರವಾಗಿ ಫಲಾನುಭವಿಗಳಿಗೆ ನೀಡಲಾಗುತ್ತದೆ. ತರಬೇತಿಯ ವೆಚ್ಚವನ್ನು ತರಬೇತಿ ಪಾಲುದಾರರಿಗೆ ವಿತರಿಸುವುದಕ್ಕೆ ಆಧಾರ್ ಸಂಪರ್ಕ ಮತ್ತು ಉತ್ತಮ ಪಾರದರ್ಶಕತೆ ಹಾಗೂ ಗುರಿಗಾಗಿ ಬಯೋ ಮೆಟ್ರಿಕ್ ಕಲ್ಪಿಸಲಾಗಿದೆ. ಕೌಶಲ ತರಬೇತಿಯನ್ನು ಕೈಗಾರಿಕೆಗಳಿಗೆ ಹೊಂದಿಕೊಳ್ಳುವ ಗುಣಮಟ್ಟದ ಆಧಾರದಲ್ಲಿ ರಾಷ್ಟ್ರೀಯ ಕೌಶಲ ಅರ್ಹತೆ ಚೌಕಟ್ಟಿನಲ್ಲಿ (ಎನ್.ಎಸ್.ಕ್ಯು.ಎಫ್.) ನೀಡಲಾಗುತ್ತದೆ.
ವಿವಿಧ ರಾಜ್ಯಗಳ ಅನನ್ಯ ಅಗತ್ಯಗಳನ್ನು ಪೂರೈಸುವ ಅಗತ್ಯದ ಬಗ್ಗೆ ಕೌಶಲ ವರ್ಧನೆ ಕುರಿತ ಮುಖ್ಯಮಂತ್ರಿಗಳ ಉಪ ಗುಂಪು ಮಾಡಿರುವ ಶಿಫಾರಸನ್ನು ಗಮನದಲ್ಲಿಟ್ಟುಕೊಂಡು, ಯೋಜನೆ ಆಧಾರಿತ ಕ್ರಮದಲ್ಲಿ ಪಿ.ಎಂ.ಕೆ.ವಿ.ವೈ. 2016-20 ಅಡಿಯಲ್ಲಿ ಈ ಯೋಜನೆಯ ವಾಹಿನಿಯಲ್ಲಿ ಹಂಚಿಕೆಯಾಗುವ ಹಣಕಾಸು ಮತ್ತು ಭೌತಿಕ ಎರಡೂ ಸೇರಿದಂತೆ ಶೇ.25ರಷ್ಟು ಒಟ್ಟು ತರಬೇತಿ ಗುರಿಯೊಂದಿಗೆ ರಾಜ್ಯ ಸರ್ಕಾರಗಳನ್ನು ಸೇರಿಸಿಕೊಳ್ಳಲಾಗಿದೆ.ಪಿ.ಎಂ.ಕೆ.ವಿ.ವೈ.ನ ಮುಂದಿನ ಹಂತದ ಒಟ್ಟು ತರಬೇತಿ ಗುರಿಯ ಶೇ.25ರಷ್ಟು ಸಾಧನೆಗೆ ಹಣಕಾಸು ಮೊತ್ತ/ಆಯವ್ಯಯವನ್ನು ನೇರವಾಗಿ ರಾಜ್ಯಗಳಿಗೇ ಹಂಚಿಕೆ ಮಾಡಲಾಗುತ್ತದೆ.
ತರಬೇತಿ ಪಡೆಯುವವರನ್ನು ಕಲೆ ಹಾಕುವುದು, ಉಸ್ತುವಾರಿ ಮತ್ತು ತರಬೇತಿ ನಂತರದ ಉದ್ಯೋಗ ನೀಡಿಕೆಯನ್ನು ಉದ್ಯೋಗ ಮೇಳಗಳ ಮೂಲಕ ಮತ್ತು ಕೌಶಲ ಶಿಬಿರಗಳ ಮೂಲಕ ಮಾಡಲಾಗುತ್ತದೆ.
ಸಾಮಾನ್ಯ ನಿಯಮಗಳಲ್ಲಿ ಅಂತರ್ಗತವಾದ ಪ್ರೋತ್ಸಾಹಕ/ಪ್ರೋತ್ಸಾಹಕವಿಲ್ಲದ ಸೇರಿದ ಉದ್ಯೋಗದೊಂದಿಗೆ ತರಬೇತಿ ಪಡೆದವರಿಗೆ ಉದ್ಯೋಗ ಕಲ್ಪಿಸಲು ವಿಶೇಷ ಗಮನ ಹರಿಸಲಾಗಿದೆ. ಸಾಂಪ್ರದಾಯಿಕ ಉದ್ಯೋಗಕ್ಕಾಗಿ ಔಪಚಾರಿಕವಲ್ಲ ತರಬೇತಿಗೂ ಯೋಜನೆ ಆಧಾರಿತ ವಿಧಾನವನ್ನು ರೂಪಿಸಲುದ್ದೇಶಿಸಲಾಗಿದೆ. ಪಿ.ಎಂ.ಕೆ.ವಿ.ವೈ. ದೇಶೀಯ ಕೌಶಲ ಅಗತ್ಯಗಳ ಸೃಷ್ಟಿಯ ಜೊತೆಗೆ, ಗಲ್ಫ್ ರಾಷ್ಟ್ರಗಳಲ್ಲಿ, ಯುರೋಪ್ ಮತ್ತು ಇತರ ಸಾಗರೋತ್ತರ ತಾಣಗಲಲ್ಲಿ ಉದ್ಯೋಗಕ್ಕಾಗಿ ಅಂತಾಷ್ಟ್ರೀಯ ಗುಣಮಟ್ಟ ಒಳಗೊಂಡು ಕೌಶಲ ತರಬೇತಿಗೂ ಗಮನ ಕೊಟ್ಟಿದೆ. ಯೋಜನೆಯ ಅಡಿಯಲ್ಲಿ ಉನ್ನತ ಕೆಲಸದ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನೂ ನೀಡಲಾಗುತ್ತದೆ.