ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಹೋಮಿಯೋಪಥಿಗಾಗಿ ರಾಷ್ಟ್ರೀಯ ಆಯೋಗ ಸ್ಥಾಪನೆಯ ಕರಡು ವಿಧೇಯಕ 2018 ಕ್ಕೆ ಅನುಮೋದನೆ ನೀಡಿತು. ಇದು ಪಾರದರ್ಶಕತೆಯನ್ನು ಖಾತ್ರಿಪಡಿಸುವುದಕ್ಕಾಗಿ ಈಗಿರುವ ನಿಯಂತ್ರಕ ವ್ಯವಸ್ಥೆಯಾದ ಕೇಂದ್ರೀಯ ಹೋಮಿಯೋಪಥಿ ಪರಿಷತ್ತು (ಸಿ.ಸಿ.ಎಚ್.) ಅನ್ನು ಹೊಸ ಮಂಡಳಿಯೊಂದಿಗೆ ಸ್ಥಳಾಂತರಿಸಲಿದೆ.
ಒಟ್ಟು ಹೋಮಿಯೋಪಥಿ ಶಿಕ್ಷಣವನ್ನು ಸಂಘಟಿಸುವ ಹೊಣೆಯನ್ನು ಹೋಮಿಯೋಪಥಿ ಶಿಕ್ಷಣ ಮಂಡಳಿಗೆ ನೀಡಿ ಮೂರು ಸ್ವಾಯತ್ತ ಮಂಡಳಿಗಳೊಂದಿಗೆ ರಾಷ್ಟ್ರೀಯ ಆಯೋಗವನ್ನು ರಚಿಸಲು ಈ ಕರಡು ವಿಧೇಯಕ ಅವಕಾಶ ನೀಡುತ್ತದೆ. ಹೋಮಿಯೋಪಥಿ ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಲು ಮತ್ತು ಮೌಲ್ಯಮಾಪನ ಮಾಡಲು ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿ ಮತ್ತು ರಾಷ್ಟ್ರೀಯ ಹೋಮಿಯೋಪಥಿ ಆಯೋಗದಡಿಯಲ್ಲಿ ಹೋಮಿಯೋಪಥಿ ವಿಧಾನ ಪಾಲಿಸುವ ವೃತ್ತಿಪರರ ನೋಂದಣೆಗೆ ಸಂಬಂಧಿಸಿ ರಾಷ್ಟ್ರೀಯ ರಿಜಿಸ್ಟರ್ ನಿರ್ವಹಣೆ ಹಾಗು ಈ ಪದ್ದತಿಯ ಅಳವಡಿಕೆಗೆ ಸಂಬಂಧಿಸಿದ ನೀತಿ ಸಂಬಂಧಿ ವಿಷಯಗಳಿಗಾಗಿ ನೀತಿ ಮಂಡಳಿ .
ಈ ಪದ್ದತಿ ಪ್ರ್ಯಾಕ್ಟೀಸಿನ ಅನುಮತಿಗಳಿಗಾಗಿ ಎಲ್ಲಾ ಪದವೀಧರರೂ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ನಿರ್ಗಮನ ಪರೀಕ್ಷೆ ಯಲ್ಲಿ ಉತ್ತೀರ್ಣತೆ ಸಾಧಿಸಬೇಕು ಎಂಬ ಪ್ರಸ್ತಾಪವನ್ನು ಇದು ಒಳಗೊಂಡಿದೆ. ಜೊತೆಗೆ ಬೋಧಕರ ನೇಮಕಾತಿ ಹಾಗು ಪದೋನ್ನತಿಗಳಿಗೆ ಗುಣಮಟ್ಟ ಮೌಲ್ಯಮಾಪನಕ್ಕಾಗಿ ಬೋಧಕರ ಅರ್ಹತಾ ಪರೀಕ್ಷೆಯನ್ನು ಅಳವಡಿಸಿಕೊಳ್ಳುವ ಪ್ರಸ್ತಾಪವೂ ಇದರಲ್ಲಿದೆ.
ಅಲೋಪಥಿ ವೈದ್ಯ ಪದ್ದತಿಗೆ ಸ್ಥಾಪಿಸಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಾದರಿಯಲ್ಲಿ ಹೋಮಿಯೋಪಥಿ ವೈದ್ಯ ಶಿಕ್ಷಣದಲ್ಲಿಯೂ ಸುಧಾರಣೆಗಳನ್ನು ತರಲು ಇದು ಉದ್ದೇಶಿಸಿದೆ. ಸಿ.ಸಿ.ಹೆಚ್ ನ್ನು ಈ ಮೊದಲು ಅದ್ಯಾದೇಶದ ಮೂಲಕ ಬೋರ್ಡ್ ಆಫ್ ಗವರ್ನರ್ಸ್ ಸೂಪರ್ ಸೀಡ್ ಮಾಡಲಾಗಿತ್ತು ಬಳಿಕ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು.