Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೌಡಿ ಮೋದಿ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗೆ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹ್ಯೂಸ್ಟನ್ ಭಾಷಣಕ್ಕೆ ಪ್ರಮುಖ ಗಣ್ಯ ವ್ಯಕ್ತಿಗಳಾದ ಅಮೆರಿಕದ ರಿಪಬ್ಲಿಕನ್ ಪೇಟ್ ಓಲ್ಸನ್, ರಿಪಬ್ಲಿಕನ್ ಕೆವಿನ್ ಬ್ರಾಡಿ, ಸೆನೆಟರ್ ಜಾನ್ ಕೋರ್ ನೈನ್, ಸೆನೆಟರ್ ಕೆವಿನ್ ಕ್ರಾಮೆರ್, ಸೆನೆಟರ್ ಟೆಡ್ ಕ್ರುಝ್, ಮಿಸ್ಸಿಪ್ಪಿ ಗವರ್ನರ್ ಫಿಲ್ ಬೈರಾಂಟ್, ಗವರ್ನರ್ ಮಾಟ್ ಬೆವಿನ್, ಹ್ಯೂಸ್ಟನ್ ಮೇಯರ್ಸೇ ರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಹೆಸರಾಂತ ಗಣ್ಯ ವ್ಯಕ್ತಿಗಳಾದ ವಿಕಾಸ್ ಖನ್ನಾ, ಪ್ರಸೂನ್ ಜೋಶಿ, ಕರನ್ ಜೋಹರ್, ಅಜಯ್ ದೇವಗನ್, ಮಿಲಿಂದ್ ದಿಯೋರಾ ಮತ್ತು ರಿಷಿ ಕಪೂರ್ ಅವರೂ ಸಹ ಪ್ರಧಾನಮಂತ್ರಿ ಭಾಷಣವನ್ನು ಶ್ಲಾಘಿಸಿದ್ದಾರೆ. ಅದಕ್ಕಾಗಿ ಪ್ರಧಾನಮಂತ್ರಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಖಂಡಿತವಾಗಿ ಒಪ್ಪುತ್ತೇನೆ  @RepPeteOlson!

 

ನಿಮ್ಮಂತಹ ವ್ಯಕ್ತಿಗಳು ನಮ್ಮ ರಾಷ್ಟ್ರಗಳು ಇನ್ನಷ್ಟು ಸನಿಹಕ್ಕೆ ಬರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಹೌಡಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಭಾರತೀಯ ಉಡುಪು ಅದ್ಭುತವಾಗಿತ್ತು. ! https://t.co/8aTt61P010

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ನಾನು ನಿಮ್ಮಲ್ಲಿ ಅಸಾಧಾರಣ ಶಕ್ತಿಯನ್ನು ಕಂಡೆ, ಕಾರ್ಯಕ್ರಮಕ್ಕೆ ಬಂದಿದ್ದಕ್ಕಾಗಿ ಧನ್ಯವಾದಗಳು. @RepKevinBrady.

 

ಸದನ ಮತ್ತು ಸೆನೆಟ್ ನ ನಿಮ್ಮ ಹಲವು ಸಹೋದ್ಯೋಗಿಗಳು ಈ ಮುಂಜಾವಿನಲ್ಲಿ ಘನ ಉಪಸ್ಥಿತಿ ಇದ್ದದ್ದು, ನನಗೆ ಗೌರವ ಮೂಡಿಸಿದೆ. https://t.co/OiX0K2XUag

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ಹೌಡಿ ಮೋದಿ ಸಮುದಾಯ ಕಾರ್ಯಕ್ರಮದಲ್ಲಿ ನಿಮ್ಮ ಜೊತೆ ಇದ್ದದ್ದು ವಿಶೇಷ ಎನಿಸಿತು, ಟೆಕ್ಸಾಸ್ ಮತ್ತು ಅಮೆರಿಕದಲ್ಲಿ ನಿಮ್ಮ ಸೇವೆಗಳು ಮತ್ತು ಪ್ರಯತ್ನಗಳು ಅಪಾರ, ನಿಮ್ಮಲ್ಲಿ ನಾನು ಭಾರತದ ಒಬ್ಬ ಮೌಲ್ಯಯುತ ಸ್ನೇಹಿತನನ್ನು ಕಂಡೆ

https://t.co/OWQ1MGUSSx

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ಹೌಡಿ ಮೋದಿ ಕಾರ್ಯಕ್ರಮದಲ್ಲಿ @SenKevinCramer. ಉಪಸ್ಥಿತರಿದ್ದದ್ದಕ್ಕೆ ನನ್ನ ಅಭಿನಂದನೆಗಳು, ಭಾರತ-ಅಮೆರಿಕ ನಡುವಿನ ಬಲಿಷ್ಠ ಸಂಬಂಧಗಳ ಬಗ್ಗೆ ವೈಯಕ್ತಿಕವಾಗಿ ನಿಮಗಿರುವ ಬದ್ಧತೆ ತುಂಬಾ ಶ್ಲಾಘನಾರ್ಹ.. https://t.co/bCDoAZg6Ek

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

ಖಂಡಿತವಾಗಿ ಒಪ್ಪುತ್ತೇನೆ  @RepPeteOlson!

 

 

ನಮ್ಮ ರಾಷ್ಟ್ರಗಳನ್ನು ಇನ್ನಷ್ಟು ಸನಿಹಕ್ಕೆ ತರುವಲ್ಲಿ ನಿಮ್ಮಂತಹ ವ್ಯಕ್ತಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದೀರಿ, ಹೌಡಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕಾಗಿ ಧನ್ಯವಾದಗಳು, ನಿಮ್ಮ ಭಾರತೀಯ ಉಡುಗೆ ಸೊಗಸಾಗಿತ್ತು. https://t.co/8aTt61P010

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ನನ್ನ ಪ್ರೀತಿಯ ಗವರ್ನರ್ @PhilBryantMS, ಅಮೆರಿಕ ಜೊತೆಗಿನ ನಮ್ಮ ಸಹಭಾಗಿತ್ವದ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ಮಿಸ್ಸಿಸ್ಸಿಪ್ಪಿ ಅದ್ಭುತ ರಾಷ್ಟ್ರ ! @SenHydeSmith ಉಪಸ್ಥಿತಿಯಲ್ಲಿ ಹೌಡಿ ಮೋದಿ ಕಾರ್ಯಕ್ರಮ ವಿಶೇಷವಾಗಿತ್ತು. https://t.co/RPG8QZ8js4

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ಪ್ರೀತಿಯ  @GovMattBevin, ನೀವು, ಹ್ಯೂಸ್ಟನ್ ಗೆ ಬಂದಿದ್ದು, ನಿಮ್ಮ ಅದ್ಭುತ ನಡವಳಿಕೆಯನ್ನು ತೋರುತ್ತದೆ. ಹೌಡಿ ಮೋದಿ ಕಾರ್ಯಕ್ರಮದ ನಂತರ ಸಮುದಾಯ ಸ್ವೀಕಾರ ಸಮಾರಂಭದಲ್ಲಿ ನಿಮ್ಮ ಭಾಷಣವನ್ನು ನಾನು ಆನಂದಿಸಿದೆ.  https://t.co/NWtVoN27fl

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ಹ್ಯೂಸ್ಟನ್    @HoustonTX   Mayor, @SylvesterTurner  ಅವರ ಆಥಿತ್ಯಕ್ಕಾಗಿ ನಾನು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಹ್ಯೂಸ್ಟನ್ ಸುಂದರ ನಗರಿ. ಅದು ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ.  https://t.co/O2t2GFqtRb

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ನಮ್ಮ ಸುಂದರ ಭಾಷೆಗಳು ನಮ್ಮ ಬೇರುಗಳ ಮಾರ್ಗಪಥಗಳು. ನಮ್ಮ ಸಂಸ್ಕೃತಿಯಲ್ಲಿ ಜೀವನ ಪ್ರೀತಿಯನ್ನು ನಮ್ಮದೇ ಆದ ವಿಧಾನದಲ್ಲಿ ನೂರೆಂಟು ಬಗೆಯಲ್ಲಿ ಅಭಿವ್ಯಕ್ತಪಡಿಸುತ್ತೇವೆ. ಈ ಎಲ್ಲ ಸುಂದರ ನೇಯ್ಗೆಗಳು ಸುಂದರ ವಸ್ತ್ರಗಳನ್ನು ಸೃಷ್ಟಿಸಿ, ನವಭಾರತವನ್ನು ಬಲಿಷ್ಠ ಮತ್ತು ವಿಭಿನ್ನಗೊಳಿಸುತ್ತವೆ. . https://t.co/o807BavvoU

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ಜನರು ನನಗೆ ಆಶೀರ್ವಾದ ಮಾಡಿ, ನನ್ನ ಮೇಲೆ ವಿಶ್ವಾಸವಿಟ್ಟಿರುವುದು, ಸದಾ ನನಗೆ ಅತಿದೊಡ್ಡ ವಿಶ್ವಾಸವೃದ್ಧಿಗೆ ಕಾರಣವಾಗಿದೆ.  @prasoonjoshi_

https://t.co/9cinFnoegh

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

130  ಕೋಟಿ ಭಾರತೀಯರ ಪ್ರತಿನಿಧಿಯಾಗಿ ನಾನು ಇಲ್ಲಿ ಪಡೆಯುತ್ತಿರುವ ಗೌರವ ಮತ್ತು ಪ್ರೀತಿಯನ್ನು ನನ್ನ ದೇಶಕ್ಕೆ ಸಮರ್ಪಿಸುತ್ತಿದ್ದೇನೆ. ಧನ್ಯವಾದಗಳು ಕರಣ್ ಜೋಹರ್ https://t.co/po8UY73ktV

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ಅಜಯ್ ದೇವಗನ್ ಅವರೆ, ಹ್ಯೂಸ್ಟನ್ ನಲ್ಲಿ ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಜನರ ಹೃದಯ ಬೆಸುಗೆ ಕಾರ್ಯಕ್ರಮ ಭಾರತ – ಅಮೆರಿಕ ನಡುವಿನ ಗೆಳೆತನದಲ್ಲಿ ಹೊಸ ಮೈಲಿಗಲ್ಲು  https://t.co/0UP4RRYrx3

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

 

ಧನ್ಯವಾದಗಳು ಮಿಲಿಂದ್ ದಿಯೋರಾ,

ನನ್ನ ಗೆಳೆಯ ದಿವಂಗತ ಮುರಳಿ ದಿಯೋರಾ ಅವರ ಅಮೆರಿಕದೊಂದಿಗಿನ ಬಲಿಷ್ಠ ಸಂಬಂಧಗಳ ಬದ್ಧತೆ ಬಗ್ಗೆ ನೀವು ಉಲ್ಲೇಖಿಸುತ್ತಿರುವುದು ತುಂಬಾ ಸರಿ ಇದೆ, ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳು ಬಲವರ್ಧನೆಯಾಗುವುದನ್ನು ನೋಡಿದ್ದರೆ ಅವರು ನಿಜಕ್ಕೂ ಹರ್ಷಪಡುತ್ತಿದ್ದರು. @POTUS ಅವರ ಆತಿಥ್ಯ ಅದ್ಭುತವಾಗಿತ್ತು. https://t.co/eyP1D3xRJo

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019

 

ರಿಷಿ ಜಿ ನಿಮ್ಮ ಅತ್ಯುತ್ಸಾಹಿ ಉತ್ತೇಜನಕ್ಕೆ ಧನ್ಯವಾದಗಳು, ನೀವು ಇತ್ತೀಚೆಗಷ್ಟೇ ಅಮೆರಿದಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದೀರಿ, ಹಾಗಾಗಿ ನಾನು ನೀವು ಭೇಟಿಯಾಗುವುದು ತಪ್ಪಿದೆ, ದೇವರು ನಿಮಗೆ ಉತ್ತಮ ಆರೋಗ್ಯ ನೀಡಲಿ ಎಂದು ನಾನು ಬೇಡುತ್ತೇನೆ, ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಕೊಳ್ಳುವುದನ್ನು ನಾನು ಎದುರು ನೋಡುತ್ತಿರುತ್ತೇನೆ. @chintskap https://t.co/vFhTTBNsCL

–       ನರೇಂದ್ರ ಮೋದಿ (@narendramodi) ಸೆಪ್ಟೆಂಬರ್ 23, 2019