Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

#10YearsOfMyGov: ಉತ್ತಮ ಆಡಳಿತಕ್ಕಾಗಿ ವೇದಿಕೆಯನ್ನು ಅತ್ಯದ್ಭುತ ವೇದಿಕೆ ಎಂದು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ


ಮೈಗೌವ್‌ ವೇದಿಕೆಯು ಇಂದು ಹತ್ತು ವರ್ಷ ಪೂರೈಸಿದ್ದು, ಉತ್ತಮ ಆಡಳಿತ ಮತ್ತು ಪಾಲ್ಗೊಳ್ಳುವಿಕೆಗೆ ಇದು ಅತ್ಯದ್ಭುತ ವೇದಿಕೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಅಮೂಲ್ಯವಾದ ಒಳನೋಟಗಳು ಮತ್ತು ಸಲಹೆಗಳಿಂದ ಮೈಗೌವ್‌ ವೇದಿಕೆಯನ್ನು ಶ್ರೀಮಂತಗೊಳಿಸಿದ ಎಲ್ಲರನ್ನೂ ಪ್ರಧಾನಿ ಶ್ರೀ ಮೋದಿ ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ: 

“ಮೈಗೌವ್‌ ವೇದಿಕೆಗೆ ಇಂದು ದಶಕದ ಸಂಭ್ರಮ, #10YearsOfMyGov. ಈ ವೇದಿಕೆಯನ್ನು ತಮ್ಮ ತಮ್ಮ ಅಮೂಲ್ಯ ಒಳನೋಟಗಳು ಮತ್ತು ಸಲಹೆಗಳಿಂದ ಶ್ರೀಮಂತಗೊಳಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು. ಕಳೆದ ದಶಕದಲ್ಲಿ, ಉತ್ತಮ ಆಡಳಿತ ಮತ್ತು ಪಾಲ್ಗೊಳ್ಳುವಿಕೆಗೆ ಮೈಗೌ ರೋಮಾಂಚನಕಾರಿ ಮಾಧ್ಯಮವಾಗಿ ಹೊರಹೊಮ್ಮಿದೆ.”

 

 

*****