Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2018ರ ಜೂನ್ 23ರಂದು ಮಧ್ಯಪ್ರದೇಶದಲ್ಲಿ ಮೋಹನ್ ಪುರ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣ

2018ರ ಜೂನ್ 23ರಂದು ಮಧ್ಯಪ್ರದೇಶದಲ್ಲಿ ಮೋಹನ್ ಪುರ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣ

2018ರ ಜೂನ್ 23ರಂದು ಮಧ್ಯಪ್ರದೇಶದಲ್ಲಿ ಮೋಹನ್ ಪುರ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣ

2018ರ ಜೂನ್ 23ರಂದು ಮಧ್ಯಪ್ರದೇಶದಲ್ಲಿ ಮೋಹನ್ ಪುರ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣ


ನಿಮ್ಮೆಲ್ಲರಿಗೂ ನನ್ನ ಶುಭಕಾಮನೆಗಳು

ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಇಲ್ಲಿ ಸೇರಿರುವಂತಹ ರಾಜಘಡದ ನನ್ನ ಪ್ರೀತಿಯ ಸೋದರ-ಸೋದರಿಯರೇ

ಜೂನ್ ತಿಂಗಳ ಉರಿಯುವ ಬಿಸಿಲಿನ ಕಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀವೆಲ್ಲರೂ ನನಗೆ ಮತ್ತು ಸಹೋದ್ಯೋಗಿಗಳಿಗೆ ಆಶೀರ್ವಾದ ಮಾಡಲು ನೆರೆದಿದ್ದೀರಿ. ಇಷ್ಟೊಂದು ದೊಡ್ಡ ಮಟ್ಟದ ಪ್ರೀತಿ ಇಟ್ಟುಕೊಂಡಿರುವುದಕ್ಕೆ ನಾನು ಮೆಚ್ಚುತ್ತೇನೆ. ನಿಮ್ಮೆಲ್ಲರ ಬಲ ಮತ್ತು ಆಶೀರ್ವಾದವು ಸದಾಕಾಲ ಭಾರತೀಯ ಜನತಾ ಪಕ್ಷದ ಸದಸ್ಯರು ಪರಿಣಾಮಕಾರಿಯಾಗಿ ನಿಮ್ಮ ಸೇವೆ ಮಾಡಲು ಪ್ರೋತ್ಸಾಹ ನೀಡುತ್ತದೆ. 4000 ಕೋಟಿ ರೂಪಾಯಿ ಮೊತ್ತದ ಮೋಹನ್ ಪುರ ನೀರಾವರಿ ಯೋಜನೆಯೂ ಸೇರಿದಂತೆ ಮಹತ್ವದ ಮೂರು ಯೋಜನೆಗಳನ್ನು ಉದ್ಘಾಟನೆ ಮಾಡುವಂತಹ ಅದೃಷ್ಟ ನನಗೆ ಒಲಿದು ಬಂದಿದ್ದು ಖುಷಿ ತಂದಿದೆ. ಈ ಯೋಜನೆಯ ಜತೆ ಕೈಜೋಡಿಸಿದ ಎಲ್ಲರಿಗೂ ಅಂದರೆ ಸನಿಕೆ ಹಿಡಿದು ಮಣ್ಣನ್ನು ಹದ ಮಾಡಿದ ಸೋದರ,ಸೋದರಿ ಮತ್ತು ತಾಯಂದಿರು, ಆ ಮಣ್ಣಿನಿಂದ ಇಟ್ಟಿಗೆಯನ್ನು ಮಾಡಿ ಅದನ್ನು ತಲೆ ಮೇಲೆ ಹೊತ್ತು ಸಾಗಿದ ಜನರು, ಸಣ್ಣ ಮತ್ತು ದೊಡ್ಡ ಯಂತ್ರಗಳನ್ನು ಚಾಲನೆ ಮಾಡಿದಂತಹ ಪ್ರತಿಯೊಬ್ಬರಿಗೂ ನಾನು ನನ್ನ ಶುಭಾಶಯ ಮತ್ತು ವಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ರಾಷ್ಟ್ರ ನಿರ್ಮಾಣದಲ್ಲಿ ಇಂತಹ ಪುಣ್ಯದ ಕೆಲಸದಲ್ಲಿ ಭಾಗಿಯಾದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ.

ನನ್ನ ಸೋದರ-ಸೋದರಿಯರೇ,

ಒಂದು ಗುಂಡಿಯನ್ನು ಒತ್ತಿ ಯೋಜನೆಯೊಂದನ್ನು ಉದ್ಘಾಟನೆ ಮಾಡುವುದು ಇಂದು ಸಾಮಾನ್ಯ ಎನಿಸಿಕೊಂಡಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಿಹಿಯಾದ ಪ್ರೀತಿಯಿಂದಲೇ ಈ ಕಾಮಗಾರಿಗಳು ಉದ್ಘಾಟನೆ ಆಗಿರುತ್ತವೆ. ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರವು ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಣೆ ಮಾಡುತ್ತಾ ನಾಲ್ಕು ವರ್ಷಗಳನ್ನು ಪೂರೈಸಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕ್ರಮಗಳು ಮತ್ತು ಸಿದ್ದಾಂತಗಳ ಮೇಲೆ ಅಗಾಧವಾದ ನಂಬಿಕೆ ಇರುವುದರಿಂದಲೇ ನೀವೆಲ್ಲರೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇಲ್ಲಿ ಸೇರಿಕೊಂಡಿದ್ದೀರಿ. ಯಾವ ಜನರು ನಮ್ಮ ವಿರುದ್ಧ ಅಪಪ್ರಚಾರಗಳನ್ನು ಮಾಡುತ್ತಿದ್ದರೋ, ಗೊಂದಲ ಮತ್ತು ನಿರಾಶಾವಾದವನ್ನು ಸೃಷ್ಟಿ ಮಾಡುತ್ತಿದ್ದರೋ ಅವರಿಗೆ ವಾಸ್ತವದ ಅರಿವಾಗಿದೆ.

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತ್ಯೋತ್ಸವವಾದ ಜೂನ್ 23ರಂದೇ ದಿನವೇ ಈ ಕಾರ್ಯಕ್ರಮ ನಡೆಯುತ್ತಿರುವುದು ಕಾಕತಾಳೀಯವಾಗಿದೆ.ಇದೇ ದಿನ ಕಾಶ್ಮೀರದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅನುಮಾನಾಸ್ಪದ ರೀತಿಯಲ್ಲಿ ಸಾವು ಕಂಡಿದ್ದರು. ನಾನು ಇಂದು ಅವರಿಗೆ ಸಂತಾಪ ಸೂಚಿಸುವ, ವಂದಿಸುವ ಮತ್ತು ಸ್ಮರಣೆ ಮಾಡಿಕೊಳ್ಳಲು ಬಯಸುತ್ತೇನೆ.

ಸೋದರ-ಸೋದರಿಯರೇ,

‘ಯಾವುದೇ ದೇಶವು ಅದರ ಸ್ವಂತ ಸಾಮರ್ಥ್ಯದಿಂದ ರಕ್ಷಣೆ ಪಡೆದುಕೊಳ್ಳುತ್ತದೆ’ ಎಂದು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಹೇಳುತ್ತಿದ್ದರು. ದೇಶದ ಸಂಪತ್ತು ಮತ್ತು ಜನರ ಪ್ರತಿಭೆಯ ಮೇಲೆ ಅವರು ಅಗಾಧವಾದ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಸ್ವಾತಂತ್ರ್ಯ ಬಂದ ದಿನದಿಂದಲೂ ಅನುಸರಿಸಿಕೊಂಡು ಬಂದಿದ್ದ ನಿರಾಸೆ ಮತ್ತು ಹತಾಶೆಗಳನ್ನು ತೊಡೆದು ಹಾಕಿ ಜನರಲ್ಲಿ ಉತ್ಸಾಹ ತುಂಬುವಂತಹ ಕೆಲಸವನ್ನು ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಮಾಡಿದ್ದರು. ಇದು ಇವತ್ತಿಗೂ ಕೋಟ್ಯಂತರ ಜನರಿಗೆ ಇದು ಪ್ರೇರಣೆ ಎನಿಸಿಕೊಂಡಿದೆ. ದೇಶದ ಮೊದಲ ಕೈಗಾರಿಕೆ ಮತ್ತು ಪೂರೈಕೆ ಸಚಿವರಾಗಿ ದೇಶದ ಚೊಚ್ಚಲ ಕೈಗಾರಿಕಾ ನೀತಿಯನ್ನು ರೂಪಿಸಿದ್ದರು. ‘ಸರ್ಕಾರ, ದೇಶದ ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಜಂಟಿಯಾಗಿ ಕೈಗಾರಿಕೆಯನ್ನು ಉತ್ತೇಜಿಸಿದರೆ ಬಹುಬೇಗ ದೇಶವು ಆರ್ಥಿಕ ಸ್ವಾವಲಂಬಿ ಎನಿಸಿಕೊಳ್ಳುತ್ತದೆ’ ಎಂದು ಸದಾ ಹೇಳುತ್ತಿದ್ದರು. ಅವರ ಕೆಲಸ, ಚಿಂತನೆಗಳು ಮತ್ತು ಆಲೋಚನೆಗಳು ಶಿಕ್ಷಣ, ಮಹಿಳಾ ಸ್ವಾವಲಂಬನೆ ಮತ್ತು ಆಟೋಮಿಕ್ ಎನರ್ಜಿ ಕಡೆಗೇ ಇದ್ದವು. ದೇಶದ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಅವರು ಹೆಚ್ಚು ಮಹತ್ವ ನೀಡುತ್ತಿದ್ದರು. ಇವತ್ತಿಗೂ ಅವರ ಈ ಚಿಂತನೆಯು ಪ್ರಸ್ತುತ ಎನಿಸಿಕೊಂಡಿದೆ.

ಸ್ನೇಹಿತರೇ,

‘ಬಡವರು, ವಸತಿ ಹೀನರು ಮತ್ತು ದುರ್ಬಲರ ಜೀವನವನ್ನು ಮೇಲೆತ್ತುವುದೇ ಸರ್ಕಾರದ ಬಹುದೊಡ್ಡ ಕರ್ತವ್ಯ’ ಎಂದು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಸದಾ ಹೇಳುತ್ತಿದ್ದರು. ಇದೇ ಕಾರಣದಿಂದ ಅವರು ಬಂಗಾಳದ ಆರ್ಥಿಕ ಸಚಿವರಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆಯ ಮೂಲಕ ಗಣನೀಯವಾದ ಕೆಲಸವನ್ನು ಮಾಡಿದ್ದರು. ಅವರು ಕೈಗಾರಿಕಾ ಖಾತೆಯನ್ನು ನಿರ್ವಹಣೆ ಮಾಡುವ ಮೊದಲು ಈ ಕೆಲಸವನ್ನು ಮಾಡಿದ್ದರು. ಬ್ರಿಟಿಷರಂತೆ ಆಳ್ವಿಕೆ ಮಾಡದೇ ಜನರ ಕನಸುಗಳನ್ನು ನನಸು ಮಾಡುವ ಕೆಲಸವನ್ನು ಮಾಡಬೇಕು ಎಂಬುದು ಅವರ ನಂಬಿಕೆಯಾಗಿತ್ತು.

ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಶಿಕ್ಷಣ, ಆರೋಗ್ಯ ಮತ್ತು ಭದ್ರತೆಯ ಮೇಲೆ ಹೆಚ್ಚು ಒತ್ತು ನೀಡಿದ್ದರು. ಅವರು ‘ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ನಗರ ಮತ್ತು ಹಳ್ಳಿಗಳಲ್ಲಿರುವ ಯುವ ಜನರ ಒಳಗೆ ಗುಪ್ತಗಾಮಿನಿಯಾಗಿರುವ ಪ್ರತಿಭೆಯನ್ನು ಹೊರತರಬೇಕು ಎಂದು ಅವರು ಹೇಳುತ್ತಿದ್ದರು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜೀವನದಲ್ಲಿ ಜ್ಞಾನ, ಸಂಪತ್ತು ಮತ್ತು ಅಭಿವೃದ್ಧಿಯನ್ನು ಒಂದೇ ಶಕ್ತಿಯಾಗಿ ಬಳಸಿಕೊಳ್ಳಲಾಗುತ್ತಿತ್ತು.

ದುರಾದೃಷ್ಟವೆಂದರೆ ನಮ್ಮ ದೇಶದ ಜನರು ಒಂದೇ ಕುಟುಂಬವನ್ನು ವಿಜೃಂಭಿಸುತ್ತಿದ್ದಾರೆ. ಭಾರತ ಮಾತೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಅದೆಷ್ಟೋ ಮಹನೀಯರ ಕೊಡುಗೆಗಳು ಅತ್ಯಂತ ಚಾಕಚಕ್ಯತೆಯಿಂದ ಬದಲಿಗೆ ಸರಿಸಿರುವುದಲ್ಲದೇ ಅವರ ಕೊಡುಗೆಗಳನ್ನು ವಿನಾಶ ಮಾಡುವಂತಹ ಯತ್ನಿ ಜನರ ತಲೆಯಲ್ಲಿ ತುಂಬುವ ಪ್ರಯತ್ನಗಳು ನಡೆಯುತ್ತಿವೆ.

ಸ್ನೇಹಿತರೇ,

ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದಲ್ಲಿರುವ ಸರ್ಕಾರಗಳು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗಿಂತಲೂ ಭಿನ್ನವಾಗಿಲ್ಲ. ಸ್ಕಿಲ್ ಇಂಡಿಯಾ ಮಿಷನ್, ಸ್ಟಾರ್ಟ್ ಅಪ್ ಇಂಡಿಯಾ ಮಿಷನ್, ಮುದ್ರಾ ಯೋಜನೆಗಳ ಮೂಲಕ ಬಡ ಜನರಿಗೆ ಯಾವುದೇ ಖಾತ್ರಿ ಇಲ್ಲದೇ ಬ್ಯಾಂಕ್ ಸಾಲಗಳನ್ನು ಕೊಡಿಸುವ ಮೂಲಕ ಸ್ವಾವಲಂಬಿ ಮಾಡಲಾಗುತ್ತಿದೆ ಮತ್ತು ಮೇಕ್ ಇನ್ ಇಂಡಿಯಾ ಮೂಲಕ ಸ್ವ-ಉದ್ಯೋಗಗಳನ್ನು ಕಲ್ಪಿಸಲಾಗುತ್ತಿದೆ.

ನಿಮ್ಮ ರಾಜಘಡ ಜಿಲ್ಲೆಯು ದೀರ್ಘಕಾಲದವರೆಗೆ ಹಿಂದುಳಿದ ಜಿಲ್ಲೆಯಾಗಿ ಉಳಿಯುವುದಿಲ್ಲ. ಸರ್ಕಾರವು ಮಹತ್ವಾಕಾಂಕ್ಷಿ ಜಿಲ್ಲೆಯನ್ನಾಗಿ ಅಭಿವೃದ್ಧಿ ಪಡಿಸುತ್ತಿದೆ. ಆರೋಗ್ಯ, ಶಿಕ್ಷಣ, ಸ್ವಚ್ಛತೆ, ಪೌಷ್ಠಿಕಾಂಶ, ನೀರಿನ ಸಂರಕ್ಷಣೆ ಮತ್ತು ಕೃಷಿ ಕ್ಷೇತ್ರವನ್ನು ಚುರುಕುಗೊಳಿಸಲಾಗುವುದು.

ರಾಷ್ಟ್ರೀಯ ಗ್ರಾಮ ಸ್ವರಾಜ್ಯ ಅಭಿಯಾನ ಯೋಜನೆಯ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಗತ್ಯ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಉಜ್ವಲ ಯೋಜನೆ, ಸೌಭಾಗ್ಯ ಯೋಜನೆ, ಜನಧನ್ ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸುವುದು, ಜೀವ ವಿಮೆ, ಗರ್ಭಿಣಿ ತಾಯಂದಿರು ಮತ್ತು ಮಕ್ಕಳಿಗೆ ಇಂದ್ರ ಧನುಶ್ ಯೋಜನೆಯ ಅಡಿಯಲ್ಲಿ ಲಸಿಕೆಗಳನ್ನು ಹಾಕಲಾಗುತ್ತಿದೆ.

ಸ್ನೇಹಿತರೇ,

ಈ ಕಾರ್ಯವನ್ನು ಈ ಹಿಂದೆ ಇದ್ದ ಸರ್ಕಾರಗಳೂ ಮಾಡಬಹುದಿತ್ತು. ಯಾರೂ ಅವರನ್ನು ತಡೆದಿರಲಿಲ್ಲ. ಆದರೂ ದೀರ್ಘ ಕಾಲ ಆಳಿದಂತಹ ಪಕ್ಷಕ್ಕೆ ನಿಮ್ಮ ಮತ್ತು ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇರಲಿಲ್ಲ. ದೇಶದ ಸಾಮರ್ಥ್ಯದ ಬಗ್ಗೆ ಅದು ಯಾವತ್ತೂ ಆಲೋಚನೆಯನ್ನೇ ಮಾಡಿರಲಿಲ್ಲ.

ನೀವು ನನಗೆ ಹೇಳಿ, ಕಳೆದ ನಾಲ್ಕು ವರ್ಷಗಳಲ್ಲಿ ಯಾವತ್ತಾದರೂ ಕೇಂದ್ರ ಸರ್ಕಾರವು ನಿರಾಶೆಯಿಂದ ಕೆಲಸ ಮಾಡಿದೆಯೇ..? ನಮಗೆ ಯಾವುದೂ ಸಾಧ್ಯವಿಲ್ಲ ಎಂದು ಯಾವಾಗಲಾದರೂ ಹೇಳಿದ್ದೇವೆಯೇ..?ನಮ್ಮ ಸಂಕಲ್ಪಗಳನ್ನು ಪೂರ್ಣಗೊಳಿಸಲು ಮತ್ತು ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ.

ಆದ್ದರಿಂದ ಸೋದರ-ಸೋದರಿಯರೇ,

ನಾವು ಭರವಸೆ ಮತ್ತು ನಂಬಿಕೆಯ ಮೇಲೆ ಮುಂದುವರೆದಿದ್ದೇವೆ,

ಸ್ನೇಹಿತರೇ,

ಈ ಸರ್ಕಾರವು 21ನೇ ಶತಮಾನದಲ್ಲಿ ದೇಶವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಒಯ್ಯಲು ಅದರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಂಪನ್ಮೂಲಗಳನ್ನು ನಂಬಿಕೊಂಡು ಶಕ್ತಿ ಮೀರಿ ಕೆಲಸವನ್ನು ಮಾಡುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮತ್ತು ಕಳೆದ 13 ವರ್ಷಗಳಲ್ಲಿ ಮಧ್ಯಪ್ರದೇಶ ಸರ್ಕಾರವು ಬಡವರು, ಹಿಂದುಳಿದವರು, ತುಳಿತಕ್ಕೊಳಗಾದವರು ಮತ್ತು ಸಮಾಜದ ನಿರ್ಲಕ್ಷಿತರು ಮತ್ತು ರೈತರನ್ನು ಸ್ವಾಭಿಮಾನಿಗಳನ್ನಾಗಿ ಮಾಡಲು ಪ್ರಯತ್ನ ಪಟ್ಟಿದೆ. ಕಳೆದ ಐದು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಕೃಷಿಯ ವಾರ್ಷಿಕ ಬೆಳವಣಿಗೆಯ ದರವು ಸರಾಸರಿ ಶೇಕಡಾ 18ರಲ್ಲೇ ಇದ್ದು ಇದು ದೇಶದಲ್ಲೇ ಅತೀ ಹೆಚ್ಚಿನದ್ದು. ಮಧ್ಯಪ್ರದೇಶವು ದ್ವಿದಳ ಧಾನ್ಯಗಳು, ತೈಲ ಬೀಜಗಗಳು, ಕಡಲೆ, ಸೋಯಾಬೀನ್, ಟೊಮ್ಯಾಟೋ ಮತ್ತು ಬೆಳ್ಳುಳ್ಳಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಗೋಧಿ, ಬೇಳೆಕಾಳುಗಳು, ಸಾಸಿವೆ, ಕೊತ್ತಂಬರಿ ಮತ್ತು ನೆಲ್ಲಿಕಾಯಿ ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನಕ್ಕೇರಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ.

ಮಧ್ಯಪ್ರದೇಶವು ಸನ್ಮಾನ್ಯ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದ ಆಡಳಿತದಲ್ಲಿ ಅಭಿವೃದ್ಧಿಯ ಹೊಸ ಮಜಲನ್ನು ಏರಲು ಸರ್ವ ಪ್ರಯತ್ನವನ್ನು ಮಾಡಿದೆ. ಮೋಹನ್ ಪುರ ನೀರಾವರಿ ಯೋಜನೆಯ ಉದ್ಘಾಟನೆ ಮತ್ತು ಮೂರು ಬೃಹತ್ ನೀರಾವರಿ ಯೋಜನೆಗಳ ಕಾಮಗಾರಿ ಆರಂಭದಿಂದ ಈ ಅಭಿವೃದ್ಧಿ ಯಶೋಗಾಥೆಯ ಮತ್ತೊಂದು ಆಯಾಮ ತೆರೆದುಕೊಂಡಿದೆ. ಕೇವಲ ರಾಜಘಡ ಮಾತ್ರವಲ್ಲ ಇಡೀ ಮಧ್ಯಪ್ರದೇಶಕ್ಕೆ ಇದು ಮಹತ್ತರವಾದ ಯೋಜನೆ ಎನಿಸಿಕೊಂಡಿದೆ.

ಸ್ನೇಹಿತರೇ,

ಈ ಯೋಜನೆಯಿಂದ 725 ರೈತ ಕುಟುಂಬಗಳ ಸೋದರ-ಸೋದರಿಯರು ಲಾಭ ಪಡೆದುಕೊಳ್ಳಲಿದ್ದಾರೆ. ಈ ಹಳ್ಳಿಗಳ 1.25 ಲಕ್ಷ ಹೆಕ್ಟೇರ್ ಪ್ರದೇಶದ ಭೂಮಿಯು ಕೇವಲ ನೀರಾವರಿ ಸೌಲಭ್ಯವನ್ನಷ್ಟೇ ಪಡೆದುಕೊಳ್ಳುವುದಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದಲೂ ಹೊರಬರಲಿವೆ. ನಾವು ಲಕ್ಷಾಂತರ ತಾಯಂದಿರು ಮತ್ತು ಸೋದರಿಯರ ಆಶೀರ್ವಾದವನ್ನು ಪಡೆದುಕೊಂಡಿದ್ದೇವೆ. ತಾಯಂದಿರುವ ಮತ್ತು ಸಹೋದರಿಯರ ಹೊರತಾಗಿ ಯಾರೂ ಕುಡಿಯುವ ನೀರಿನ ಹಾಹಾಕಾರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿಲ್ಲ. ಈ ನಿಟ್ಟಿನಲ್ಲಿ ನೋಡುವುದಾದರೆ ಇದು ತಾಯಂದಿರು ಮತ್ತು ಸೋದರಿಯರ ಸೇವೆಯ ಅತ್ಯಂತ ಮಹತ್ವದ ಯೋಜನೆ ಎನಿಸಿಕೊಂಡಿದೆ.

ಈ ಯೋಜನೆಯು ಕೇವಲ ಅಭಿವೃದ್ಧಿಯ ತ್ವರಿತ ಮುಖದ ಉದಾಹರಣೆ ಮಾತ್ರವಲ್ಲ, ಸವಾಲುಗಳನ್ನು ಮುಟ್ಟುವ ಸರ್ಕಾರದ ಬದ್ಧತೆಯ ಸಾಕ್ಷಿಯೂ ಕೂಡಾ. ಈ ಯೋಜನೆಯು ನಾಲ್ಕು ವರ್ಷಗಳಲ್ಲೇ ಪೂರ್ಣಗೊಂಡಿದೆ. ಸೂಕ್ಷ್ಮ ನೀರಾವರಿಯು ಈ ಯೋಜನೆಯ ಆದ್ಯತೆಯಾಗಿದೆ. ನಾಲೆಗಳನ್ನು ಅಳವಡಿಸುವ ಬದಲಾಗಿ ಪೈಪ್ ಗಳ ಮೂಲಕ ನೀರನ್ನು ಹರಿಸುವ ಕ್ರಮವನ್ನು ನಾವು ಕೈಗೊಂಡಿದ್ದೇವೆ.

ಸೋದರ-ಸೋದರಿಯರೇ,

ಮಾಲ್ವಾದಲ್ಲಿ ಒಂದು ಆಡು ಮಾತಿದೆ ಅದೇನಂದರೆ-ಮಾಲ್ವಾ ಧರತಿ ಗಗನ ಗಂಭೀರ, ಡಗ್ ಡಗ ರೋಟಿ, ಪಗ್ ಪಗ ನೀರ್, ಇದು ಅತ್ಯಂತ ಪುರಾತನವಾದ ನುಡಿ. ಮಾಲ್ವಾ ನೆಲದಲ್ಲಿ ಒಂದು ಕಾಲಕ್ಕೆ ಆಹಾರ ಪದಾರ್ಥ ಅಥವಾ ನೀರಿನ ಸಮಸ್ಯೆ ಇರಲೇ ಇಲ್ಲ ಎನ್ನುವುದು ಈ ಸಾಲಿನ ಇದರ ಅರ್ಥ. ಎಲ್ಲ ಹಂತಗಳಲ್ಲೂ ನೀರು ಸಿಗುತ್ತಿತ್ತು. ಆದರೂ, ಈ ಹಿಂದಿನ ಸರ್ಕಾರಗಳ ನಿರ್ಲಕ್ಷದ ಪರಿಣಾಮದಿಂದಾಗಿ ನೀರು ಈ ಭಾಗದ ಜನರಿಗೆ ಅಲಭ್ಯವಾಯಿತು. ಆದರೂ ಕಳೆದ ಹಲವು ವರ್ಷಗಳಲ್ಲಿ ಶ್ರೀ ಶಿವರಾಜ್ ಸಿಂಗ್ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕಠಿಣ ಪ್ರಯತ್ನಗಳನ್ನು ಹಾಕಿ ಮಾಲ್ವಾ ಮತ್ತು ಮಧ್ಯಪ್ರದೇಶದ ಗುರುತಿಸುವಿಕೆಯನ್ನು ವಾಪಸ್ ತಂದಿದ್ದಾರೆ.

ಸ್ನೇಹಿತರೇ,

2007ರಲ್ಲಿ 7.5 ಲಕ್ಷ ಹೆಕ್ಟೇರ್ ಪ್ರದೇಶವನ್ನು ನೀರಾವರಿ ಯೋಜನೆಗಳ ಮೂಲಕ ಮಧ್ಯಪ್ರದೇಶವು ನೀರಾವರಿಗೊಳಿಸಿತ್ತು. ಶ್ರೀ ಶಿವರಾಜ್ ಸಿಂಗ್ ಅವರ ನೇತೃತ್ವದ ಸರ್ಕಾರವು ನೀರವಾರಿಯನ್ನು 40 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆ ಮಾಡಿದೆ. 2014ರಲ್ಲಿ ಸರ್ಕಾರವು ಇದನ್ನು ದುಪ್ಪಟ್ಟು ಮಾಡಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ದೂರದರ್ಶನ ಪ್ರೇಕ್ಷಕರಿಗೆ ಹೇಳಲು ಬಯಸುತ್ತೇನೆ. ಸರ್ಕಾರವು ಇದಕ್ಕಾಗಿ 70,000 ರೂಪಾಯಿಗಳನ್ನು ಮೈಕ್ರೋ ನೀರಾವರಿ ವ್ಯವಸ್ಥೆಗೆ ತರಲು ಪ್ರಯತ್ನಿಸುತ್ತಿದೆ.

ಈ ಗುರಿಯನ್ನು ಮುಟ್ಟಲು ಸರ್ಕಾರವು ಸರ್ವ ಪ್ರಯತ್ನಗಳನ್ನು ಮಾಡುತ್ತದೆ ಮತ್ತು ಕೇಂದ್ರ ಸರ್ಕಾರವು ನಿಮ್ಮೊಂದಿಗೆ ಇರುತ್ತದೆ.

ಮಧ್ಯಪ್ರದೇಶ ರಾಜ್ಯವು ಪ್ರಧಾನಮಂತ್ರಿ ಕೃಷ್ಟಿ ಸಿಂಚಾಯಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದೆ. ಈ ಯೋಜನೆಯ ಅಡಿಯಲ್ಲಿ 14 ಯೋಜನೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಯೋಜನೆಗಳಿಗಾಗಿ 1400 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿಯಲ್ಲಿ ‘ಹನಿ ನೀರು ಹೆಚ್ಚು ಬೆಳೆ ‘ ಮಿಷನ್ ಅನ್ನು ಸಾಧ್ಯ ಮಾಡಿಕೊಳ್ಳಬಹುದಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಕಠಿಣ ಪರಿಶ್ರಮವನ್ನು ಕೈಗೊಳ್ಳುವ ಮೂಲಕ ದೇಶದ 25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೂಕ್ಷ್ಮ ನೀರಾವರಿಯನ್ನು ಹೆಚ್ಚಿಸಿದೆ. ಇದರಲ್ಲಿ ಮಧ್ಯಪ್ರದೇಶದ 1.5 ಲಕ್ಷ ಹೆಕ್ಟೇರ್ ಪ್ರದೇಶವೂ ಸೇರಿಕೊಂಡಿದೆ.

ಸ್ನೇಹಿತರೇ,

ನಾನು ವಿವಿಧ ಕ್ಷೇತ್ರದ ಜನರ ಜತೆ ಸರ್ಕಾರಿ ಯೋಜನೆಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ ತಂತ್ರಜ್ಞಾನದ ಮೂಲಕ ಮತ್ತು ನಮೋ ಆ್ಯಪ್ ಮೂಲಕ ಮಾತನಾಡುತ್ತಿರುವುದನ್ನು ನೋಡಿರುತ್ತೀರಿ. ಈ ಕಾರ್ಯಕ್ರಮದ ಮೂಲಕ ಜಬುವಾ ಪ್ರದೇಶದ ರೈತ ಸೋದರರು ಮತ್ತು ಸೋದರಿಯರ ಜತೆ ಮಾತನಾಡುವ ಅವಕಾಶವು ಒದಗಿ ಬಂದಿದೆ. ಹನಿ ನೀರಾವರಿ ಮೂಲಕ ಟೊಮ್ಯಾಟೋ ಉತ್ಪಾದನೆಯನ್ನು ಹೆಚ್ಚಿಸಿಕೊಂಡಿರುವ ಬಗ್ಗೆ ಝಬುವಾದ ರೈತ ಮಹಿಳೆಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸ್ನೇಹಿತರೇ,

ನವ ಭಾರತವನ್ನು ಕಟ್ಟುವಲ್ಲಿ ದೇಶದ ರೈತ ಸಮುದಾಯವು ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ. ಆದ್ದರಿಂದ ನವಭಾರತ ನಿರ್ಮಾಣದ ಪ್ರಯತ್ನದಲ್ಲಿ ರೈತ ಸಮುದಾಯದ ಆದಾಯವನ್ನು ದುಪ್ಪಟ್ಟುಗೊಳಿಸುವ ಯತ್ನ ನಡೆಯುತ್ತಿದೆ. ಬೀಜದಿಂದ ಮಾರುಕಟ್ಟೆವೆರಗೂ ಈ ನಿಟ್ಟಿನಲ್ಲಿ ಸರ್ಕಾರವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

ಸ್ನೇಹಿತರೇ,

ಕಳೆದ ನಾಲ್ಕು ವರ್ಷಗಳಲ್ಲಿ ದೇಶದ 14 ಕೋಟಿ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ಮಧ್ಯಪ್ರದೇಶದ 25 ಲಕ್ಷ ರೈತ ಸೋದರ-ಸೋದರಿಯರೂ ಸೇರಿದ್ದಾರೆ. ಈ ಕಾರ್ಡ್ ಗಳ ಮೂಲಕ ಈ ರೈತರ ನೆಲದ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರದ ಗುಣಮಟ್ಟವನ್ನೂ ಸುಧಾರಿಸಲಾಗಿದೆ. ಅದೇ ರೀತಿ ಮಧ್ಯ ಪ್ರದೇಶದ 35 ಲಕ್ಷ ರೈತರು ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ದೇಶದ ಎಲ್ಲಾ ಮಂಡಿಗಳನ್ನೂ ಆನ್ ಲೈನ್ ವ್ಯವಸ್ಥೆಗೆ ಸಂಪರ್ಕಿಸಲಾಗಿದೆ. ಆದ್ದರಿಂದ ಇ-ನ್ಯಾಮ್ ಮೂಲಕ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಒದಗಿಸುವ ಪ್ರಯತ್ನ ನಡೆದಿದೆ. ಈವರೆಗೆ ಇ-ನ್ಯಾಮ್ ವ್ಯವಸ್ಥೆಗೆ 600 ಮಂಡಿಗಳನ್ನು ಸಂಪರ್ಕಿಸಲಾಗಿದೆ. ಇವತ್ತು ಮಧ್ಯಪ್ರದೇಶದ 58 ಮಂಡಿಗಳನ್ನು ಸಂಪರ್ಕಿಸಲಾಗಿದೆ. ಕಾಮನ್ ಸರ್ವಿಸ್ ಸೆಂಟರ್ ಅಥವಾ ಮೊಬೈಲ್ ಫೋನ್ ಗಳ ಮೂಲಕ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಕಾಲವು ತುಂಬಾ ದೂರವಿಲ್ಲ.

ಸೋದರ-ಸೋದರಿಯರೇ,

ಬಡವರು ಮತ್ತು ಹಳ್ಳಿಗಳಲ್ಲಿ ನೆಲೆಸಿರುವವರ ಜೀವನ ಸುಧಾರಣೆಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ದಲಿತ, ಗಿರಿಜನ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ ತಾಯಂದಿರು, ಸೋದರಿಯರನ್ನು ವಿಷಾಕಾರಿ ಹೊಗೆಯಿಂದ ಮುಕ್ತಿಗೊಳಿಸುವ ನಿರಂತರ ಪರಿಶ್ರಮ ನಮ್ಮದಾಗಿದೆ. ನಾಲ್ಕು ಕೋಟಿಗೂ ಅಧಿಕ ಸೋದರ-ಸೋದರಿಯರು ಈ ದಿನದವರೆಗೂ ಉಚಿತ ಎಲ್ ಪಿಜಿ ಸಿಲಿಂಡರ್ ಗಳನ್ನು ಸ್ವೀಕರಿಸಿದ್ದಾರೆ. ಮಧ್ಯಪ್ರದೇಶದಲ್ಲಿ 40 ಲಕ್ಷ ಮಹಿಳೆಯರಿಗೆ ಉಚಿತ ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸ್ನೇಹಿತರೇ,

ಕಠಿಣ ಪರಿಶ್ರಮಕ್ಕೆ ಈ ಸರ್ಕಾರವು ಮಹತ್ತರವಾದ ಗೌರವವನ್ನು ನೀಡುತ್ತದೆ. ಇವತ್ತು ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡುವಂತಹ ಸಾಮರ್ಥ್ಯ ಇರುವ ಉದ್ಯಮಿಗಳನ್ನು ಪ್ರೋತ್ಸಾಹ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಆದರೂ ಕೆಲವು ಜನರು ಸರ್ಕಾರವು ಕಾರ್ಮಿಕರ ವಿಚಾರದಲ್ಲಿ ಋಣಾತ್ಮಕವಾಗಿದೆ ಎನ್ನುವುದನ್ನು ಹರಡುತ್ತಿವೆ. ಆದರೆ ಪ್ರತಿಯೊಬ್ಬರಿಗೂ ಈ ಸರ್ಕಾರದ ಯಶಸ್ಸಿನ ಪ್ರಯತ್ನಗಳು ಕಾಣುತ್ತಿವೆ.

ಮುದ್ರಾ ಯೋಜನೆಯ ಅಡಿಯಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೇ ಸಣ್ಣ ಉದ್ಯಮಿಗಳು ಸಾಲವನ್ನು ಪಡೆದುಕೊಳ್ಳುತ್ತಿದ್ದಾರೆ. ಮಧ್ಯಪ್ರದೇಶದ 85 ಲಕ್ಷ ಜನರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.

ಸೋದರ-ಸೋದರಿಯರೇ,

ದೆಹಲಿ ಮತ್ತು ಭೋಪಾಲ್ ನಲ್ಲಿ ಡಬಲ್ ಎಂಜಿನಿಯರಿಂಗ್ ಮಾಡುತ್ತಿರುವವರು ಮಧ್ಯಪ್ರದೇಶವನ್ನು ಮುನ್ನಡೆಸುತ್ತಿದ್ದಾರೆ. ಮಧ್ಯಪ್ರದೆಶದ ಹಿನ್ನಡೆಯ ಕಾರಣದಿಂದ ಈ ಹಿಂದೆ ಅತ್ಯಂತ ಅವಹೇಳನಕಾರಿ ಪದವನ್ನು ಬಳಸಲಾಗುತ್ತಿತ್ತು. ಬಿಮಾರು ಎನ್ನುವ ಬದವನ್ನು ಕೆಲವರು ಬಳಸುತ್ತಿದ್ದರು. ಯಾರೂ ಇದನ್ನು ಕೇಳಲು ಬಯಸುತ್ತಿರಲಿಲ್ಲ. ದೇಶದ ಅತಿ ಹಿಂದುಳಿದ ರಾಜ್ಯಗಳಲ್ಲಿ ಮಧ್ಯಪ್ರದೇಶವು ಸೇರಿತ್ತು. ಕಾಂಗ್ರೆಸ್ ಸಾಕಷ್ಟು ದಿನಗಳಿಂದ ರಾಜ್ಯದಲ್ಲಿ ಆಡಳಿತವನ್ನು ನಡೆಸಿತ್ತು. ಇದರ ಪರಿಣಾಮ ಮಧ್ಯಪ್ರದೇಶದ ಮೇಲೆ ಆಗುತ್ತಿದೆ ಎಂದು ಕಾಂಗ್ರೆಸ್ ಆಡಳಿತವು ಆಲೋಚಿಸಲಿಲ್ಲ.

ಸಾಮಾನ್ಯ ಜನರನ್ನು ಅವರು ತಮ್ಮ ವಸ್ತು ಎಂದು ಭಾವಿಸಿದ್ದರು ಮತ್ತು ತಮ್ಮ ಸ್ತುತಿ ಗೀತೆಯನ್ನು ಅವರು ಹಾಡುತ್ತಿದ್ದರು. ಮಧ್ಯಪ್ರದೇಶದ ಭವಿಷ್ಯಕ್ಕೆ ಅವರು ಗಮನವನ್ನೇ ಹರಿಸಲಿಲ್ಲ.

ಆದರೆ ಭಾರತೀಯ ಜನತಾ ಪಾರ್ಟಿಯ ಸರ್ಕಾರವು ಈ ಸ್ಥಿತಿಯಿಂದ ಮೇಲಕ್ಕೆ ಎತ್ತಿದೆ. ದೇಶದ ಅಭಿವೃದ್ಧಿಯನ್ನು ತನ್ನನ್ನೂ ಪಾಲುದಾರನನ್ನಾಗಿ ಮಾಡಿಕೊಂಡಿದೆ. ನೀವು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಆವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದೀರಿ. ಆದರೆ ಅವರು ರಾಜ್ಯದ ಜನರ ಸೇವೆಗಾಗಿ ಸೇವಕನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಯಶಸ್ಸಿನ ಹಾದಿಯಲ್ಲಿ ಮುಂಚೂಣಿಗೆ ಬರುವ ಯತ್ನದಲ್ಲಿ ಪಾಲುದಾರರಾದ ಮಧ್ಯಪ್ರದೇಶದ ಜನರಿಗೆ ನಾನು ಶುಭಕೋರುತ್ತೇನೆ.

ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಶುಭಾಶಯಗಳು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿರುವ ನಿಮಗೆ ನನ್ನ ಧನ್ಯವಾದಗಳು.

ನಿಮ್ಮ ಮುಷ್ಟಿಗಳನ್ನು ಬಿಗಿಯಾಗಿ ಹಿಡಿದು ಜೋರು ಧ್ವನಿಯಲ್ಲಿ ಹೇಳಿ.

ಭಾರತ ಮಾತೆಗೆ ಜೈ..

ಭಾರತ ಮಾತೆಗೆ ಜೈ..

ಭಾರತ ಮಾತೆಗೆ ಜೈ.

ನಿಮಗೆಲ್ಲರಿಗೂ ಅನಂತ ಧನ್ಯವಾದಗಳು…