ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2018ರ ಡಿಸೆಂಬರ್ 18ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ.
ರಿಪಬ್ಲಿಕ್ ಟಿವಿ ಮುಂಬೈನಲ್ಲಿ ಆಯೋಜಿಸಿರುವ “ರಿಪಬ್ಲಿಕ್’’ಶೃಂಗವನ್ನುದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ. ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಹೆಸರಾಂತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಆಧಾರಿತ “ಟೈಮ್ ಲೆಸ್ ಲಕ್ಷ್ಮಣ್” ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು ವಸತಿ ಮತ್ತು ನಗರ ಸಾರಿಗೆಗೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ಅನಾವರಣ ಮಾಡಲಿದ್ದಾರೆ.
ಕಲ್ಯಾಣ್ ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಮಂತ್ರಿಯವರು, ಎರಡು ಪ್ರಮುಖ ಮೆಟ್ರೋ ಕಾರಿಡಾರ್ ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇವು ಥಾಣೆ –ಭಿವಂಡಿ-ಕಲ್ಯಾಣ್ ಮೆಟ್ರೋ; ಮತ್ತು ಧಹಿಸಾರ್ – ಮಿರಾ-ಭಯಾಂಡೇರ್ ಮೆಟ್ರೋ ಆಗಿವೆ. ಈ ಎರಡು ಕಾರಿಡಾರ್ ಗಳು ಪೂರ್ಣಗೊಂಡ ಬಳಿಕ, ಈ ಪ್ರದೇಶದ ಸಾರ್ವಜನಿಕ ಸಾರಿಗೆಗೆ ದೊಡ್ಡ ಸೌಕರ್ಯ ಒದಗಿಸಲಿವೆ.
ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ವಸತಿ ಯೋಜನೆಯ ಅಡಿಯಲ್ಲಿ 90000 ಇಡಬ್ಲ್ಯುಎಸ್ ಮತ್ತು ಎಲ್.ಐ.ಜಿ. ವಸತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಮಂತ್ರಿಯವರು ನಂತರ ಪುಣೆಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಪುಣೆ ಮೆಟ್ರೋ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಭಿಕರನ್ನುದ್ದೇಶಿಸಿ ಅವರು ಭಾಷಣವನ್ನೂ ಮಾಡಲಿದ್ದಾರೆ.
PM @narendramodi will visit Maharashtra on December 18, 2018, where he will take part in various programmes.
— PMO India (@PMOIndia) December 17, 2018
He will address the ‘Republic’ Summit, organized by Republic TV, in Mumbai. @republic
At a function in Raj Bhavan, the Prime Minister will release a book, titled “Timeless Laxman”, based on the famous cartoonist, RK Laxman.
— PMO India (@PMOIndia) December 17, 2018
Important projects related to housing and urban transportation will be unveiled during the Prime Minister’s visit to the State.
— PMO India (@PMOIndia) December 17, 2018
At a public meeting in Kalyan, the PM will lay the Foundation Stone of two important metro corridors. These are the Thane-Bhiwandi-Kalyan Metro; and the Dahisar-Mira-Bhayander Metro. The two corridors, once completed, will greatly facilitate public transport in the area.
— PMO India (@PMOIndia) December 17, 2018
He will launch the 90,000 units' EWS and LIG Housing scheme under the Pradhan Mantri Awas Yojana. Shri Narendra Modi will also address the gathering.
— PMO India (@PMOIndia) December 17, 2018
The Prime Minister will then proceed to Pune. He will lay the Foundation Stone of Pune Metro Phase-3. He will also address the gathering.
— PMO India (@PMOIndia) December 17, 2018