ಪಿಎಂಇಂಡಿಯಾ

ಹೊಸ ಗೆಳೆಯರೊಂದಿಗೆ ಸೇರಿ ಸರಿ ಸುಮಾರು ಒಂದು ತಿಂಗಳಾಗಿದೆ, ಪ್ರತೀಯೊಬ್ಬರೂ ಇಲ್ಲಿಗೆ ಬರುವಾಗ ತನ್ನದೇ ಆದ ನಿರ್ದಿಷ್ಟ ಗುರುತಿನೊಂದಿಗೆ, ತನ್ನದೇ ಆದ ನಿರ್ದಿಷ್ಟ ಹಿನ್ನೆಲೆಯೊಂದಿಗೆ ಬಂದಿದ್ದೀರಿ, ಆದರೆ ಒಂದು ತಿಂಗಳೊಳಗೆ ಎಂತಹ ವಾತಾವರಣ ನಿರ್ಮಾಣವಾಗಿದೆ ಎಂದರೆ ನಿಮ್ಮೆಲ್ಲರ ನಡುವೆ ಬೇರ್ಪಡಿಸಲಾಗದ ಬಂಧವೊಂದು ಏರ್ಪಟ್ಟಿದೆ. ಪರಸ್ಪರ ಸಂಬಂಧದ ಬಂಧ ಮತ್ತು ನೀವು ಬೇರೆ ರಾಜ್ಯಗಳ ಕೆಡೆಟ್ ಗಳೊಂದಿಗೆ ಸಂಧಿಸುವಾಗ ನೀವು ಅವರ ವೈಶಿಷ್ಟ್ಯ ಮತ್ತು ವೈವಿಧ್ಯತೆಯನ್ನು ನೋಡಿ ಬೆರಗಾಗುತ್ತೀರಿ. ಭಾರತೀಯ ನಾಗರಿಕರಾಗಿ ದೇಶವನ್ನು ಹೆಚ್ಚು ತಿಳಿದುಕೊಂಡಿದ್ದೇನೆ ಎಂಬ ಭಾವನೆಯೊಂದಿಗೆ , ಬಹಳ ಕುತೂಹಲದೊಂದಿಗೆ ನೀವು ಈ ಸ್ಥಳವನ್ನು ಬಹಳ ಬಿಟ್ಟು ತೆರಳುತ್ತೀರಿ.ನೀವು ದೇಶದ ವೈವಿಧ್ಯತೆಯನ್ನು ಅರಿತುಕೊಂಡಷ್ಟು .ನೀವು ಈ ದೇಶದ ಜತೆಗೆ ಇದ್ದೀರಿ ಎಂಬ ಭಾವನೆ ಬಲವಾಗುತ್ತದೆ. ಈ ಮೌಲ್ಯ ವ್ಯವಸ್ಥೆಯ ಬೀಜಗಳು ಸಹಜವಾಗಿ ಪ್ರತೀ ಎನ್.ಸಿ.ಸಿ. ಶಿಬಿರಗಳಲ್ಲಿ ಬಿತ್ತಲ್ಪಡುತ್ತವೆ. ನಾವು ಪರೇಡ್ ಗಳಲ್ಲಿ ಭಾಗವಹಿಸುತ್ತೇವೆ, ನಾವು ಇಲ್ಲಿಗೆ ಸಮವಸ್ತ್ರದೊಂದಿಗೆ ಬಂದಿದ್ದೇವೆ.ನಾವು ರಾಜ್ ಪಥ್ ಗೆ ತೆರಳಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಆದರೆ ನಮಗ್ಯಾರಿಗೂ ಗೊತ್ತಿಲ್ಲ, ಯಾವಾಗ ನಾವು ನಮ್ಮೊಳಗಿನ ಈ ಭಾರತವನ್ನು ಆದರಿಸುತ್ತೇವೆ, ಪೋಷಿಸುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ.ನಾವು ಇಡೀ ದೇಶವನ್ನು ಆದರಿಸುವುದು, ವ್ಯಾಪಿಸುವುದು ಹೇಗೆ. ನಮಗೆ ದೇಶಕ್ಕೆ ಏನಾದರೊಂದು ಮಾಡಲೇಬೇಕು ಎಂಬ ಬಲವಾದ ಭಾವನೆಯನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬುದೂ ಗೊತ್ತಿಲ್ಲ. ಇಂತಹ ಪರಿಸರ ವ್ಯವಸ್ಥೆಯಲ್ಲಿ, ಇಂತಹ ದೇಶದ ಬಗ್ಗೆ ಚಿಂತಿಸುವಂತೆ ಮಾಡುವ ಪರಿಸರ, ಅದರ ಭವಿಷ್ಯದ ಬಗ್ಗೆ, ಅದರಲ್ಲಿ ನಮ್ಮ ಪಾತ್ರದ ಬಗ್ಗೆ , ಇದರಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ಪ್ರತೀ ಸಂಧರ್ಭಗಳಲ್ಲೂ ಯೋಚಿಸಬೇಕು. ನಾವು ಇದಕ್ಕೆಲ್ಲ ಪ್ರೇರಣೆ ಪಡೆದು ನಾವು ಹಿಂದಿರುಗಿ ಹೋಗುತ್ತೇವೆ. ರಾಜ್ ಪಥ್ ಪರೇಡಿನಲ್ಲಿ ಭಾಗವಹಿಸುವ ಕೆಡೇಟ್ ಗಳು ಮತ್ತು ಈ ಪರೇಡಿನಲ್ಲಿ ಭಾಗವಹಿಸುವ ಅವಕಾಶ ಸಿಗದಿರುವ ಕೆಡೆಟ್ ಗಳು , ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿದವರು, ತಿಂಗಳ ಕಾಲ ಕಠಿಣ ಶ್ರಮ ವಹಿಸಿ ದುಡಿದವರು, ಅಂತಹ ಪ್ರತೀಯೊಬ್ಬ ವ್ಯಕ್ತಿ, 10 ದೇಶಗಳಿಂದ ಬಂದ ಗಣ್ಯರು , ಇಡೀಯ ದೇಶ ಮತ್ತು ವಿಶ್ವದಾದ್ಯಂತ ಹರಡಿರುವ ಭಾರತೀಯತೆಯ ಭಾವನೆಯ ಹೆಮ್ಮೆ ನೀವು ತೆಗೆದುಕೊಳ್ಳುವ ಪ್ರತೀಯೊಂದು ಹೆಜ್ಜೆಯಲ್ಲಿಯೂ ಅಡಕಗೊಂಡಿರುತ್ತದೆ. ಅವರೆಲ್ಲ ನೀವು ತೆಗೆದುಕೊಳ್ಳುವ ಪ್ರತೀ ಹೆಜ್ಜೆಯ ಬಗ್ಗೆಯೂ ಹೆಮ್ಮೆ ಪಡುತ್ತಿರುತ್ತಾರೆ ಮತ್ತು ಅವರು ನಮ್ಮ ದೇಶ ನೀವು ಹಾಕುವ ಹೆಜ್ಜೆಯೊಂದಿಗೆ ಪ್ರಗತಿಯ ಹಾದಿಯಲಿ ಸಾಗುತ್ತಿದೆ ಎಂದು ಭಾವಿಸಿದ್ದಾರೆ. ನೀವು ನಿಮ್ಮ ಅಪರಿಮಿತ ಧೈರ್ಯವನ್ನು ತೋರಿಸಿದರೆ ಆಗ ನಮ್ಮ ಪ್ರತಿಯೊಬ್ಬ ದೇಶವಾಸಿಯೂ ದೇಶದ ಧೈರ್ಯ-ಶೌರ್ಯ ಉನ್ನತ ಮಟ್ಟದಲ್ಲಿದೆ ಎಂದು ಭಾವಿಸುತ್ತಾನೆ.ಇಂತಹ ಪರಿಸರ, ಇಂತಹ ವಾತಾವರಣ ಈ ಸ್ಥಳಕ್ಕೆ ಮಾತ್ರ ಮಿತಿಗೊಳ್ಳಬಾರದು. ನಿಜವಾದ ಪರೀಕ್ಷೆ ಇದರ ನಂತರ ಆರಂಭಗೊಳ್ಳುತ್ತದೆ.
ಎನ್.ಸಿ.ಸಿಯು. ಅದರ ಶಿಸ್ತು ಮತ್ತು ಏಕತೆಗೆ ಹೆಸರಾಗಿದೆ.ಎನ್.ಸಿ.ಸಿ . ಒಂದು ಯಂತ್ರ ವ್ಯವಸ್ಥೆ ಅಲ್ಲ. ಅದೊಂದು ಆಂದೋಲನ. ಎನ್.ಸಿ.ಸಿ. ಎಂದರೆ ಅದೊಂದು ಸಮವಸ್ತ್ರ ಅಲ್ಲ.ಆದರೆ ಅದು ನಿಜವಾದ ಅರ್ಥದಲ್ಲಿ ಒಂದು ಏಕತೆ. ಮತ್ತು ಆದ್ದರಿಂದ ಈ ಭಾವನೆ , ಈ ಪರೇಡ್, ಈ ಕ್ಯಾಂಪ್, ಈ ಶಿಸ್ತು, ಈ ಕಠಿಣ ದುಡಿಮೆ ಕಾರ್ಯ ಏನನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ ?. ಈ ಎಲ್ಲ ಸಂಗತಿಗಳು ಯಾಕಾಗಿ? ಈ ದೇಶದ ಬಡವರಲ್ಲಿ ಬಡವರಾದವರ ಹಣವನ್ನು ಈ ಎಲ್ಲಾ ಕೆಲಸಗಳಿಗೆ ಯಾಕೆ ವಿನಿಯೋಗಿಸಲಾಗುತ್ತದೆ. ? ಇದನ್ನು ಹೂಡಿಕೆ ಮಾಡುವುದು ಯಾಕೆಂದರೆ ಈ ಮಾದರಿಯ ಕೇಂದ್ರ ಮತ್ತು ಈ ಮಾದರಿಯ ವ್ಯಕ್ತಿಗಳನ್ನು ದೇಶದೊಳಗೆ ಸತತವಾಗಿ ನಿರ್ಮಾಣ ಮಾಡಬೇಕು ಎಂಬ ಕಾರಣಕ್ಕಾಗಿ ಮತ್ತು ಅದು ಇತರರಿಗೆ ಪ್ರೇರಣೆಯಾಗಬೇಕು ಎಂಬ ಕಾರಣಕ್ಕಾಗಿ. ಮತ್ತು ಇದರಿಂದ ದೇಶದ ದೃಢತೆ ಸತತವಾಗಿ ಹೆಚ್ಚುತ್ತದೆ ಮತ್ತು ಆ ಮೂಲಕ ಜೀವನವನ್ನು ಉನ್ನತೀಕರಿಸಲು ಮತ್ತು ದೇಶವನ್ನು ಉನ್ನತೀಕರಿಸಲು ಒಂದು ಹಾದಿಯಾಗುತ್ತದೆ ಎನ್ನುವುದಕ್ಕಾಗಿ. ನಾವು ಇದನ್ನೆಲ್ಲ ಇಲ್ಲೇ ಬಿಟ್ಟು , ಮತ್ತು ಇಲ್ಲಿಯ ನೆನಪುಗಳನ್ನು ಬರೇ ಸ್ನೇಹಿತರ ಜತೆ ಹಂಚಿಕೊಳ್ಳುವುದಕ್ಕೆಮಾತ್ರ ಬಳಸಿಕೊಂಡರೆ ಆಗ ಏನೋ ಒಂದು ಕಳೆದು ಹೋದಂತಾಗುತ್ತದೆ. ದೇಶ ಸ್ವತಂತ್ರಗೊಂಡ ಬಳಿಕ ಎನ್.ಸಿ.ಸಿ.ಕಾಯ್ದೆಯನ್ನು ಇತರ ಸಶಸ್ತ್ರ ಪಡೆಗಳಿಗೆ ನಿಯಮಗಳು ಮತ್ತು ನಿಯಮಾವಳಿಗಳನ್ನು ಜಾರಿಗೆ ತರುವುದಕ್ಕೆ ಮೊದಲು ಜಾರಿಗೆ ತರಲಾಯಿತು ಎನ್ನುವುದರ ಬಗ್ಗೆ ನಾವು ಹೆಮ್ಮೆ ಪಡಬೇಕು.ದೇಶ ಕಟ್ಟುವಿಕೆಯನ್ನು ದೇಶದ ಯುವ ತಲೆಮಾರಿನ ಜತೆ ಜೋಡಿಸಲಾಗಿದೆ ಮತ್ತು ದೇಶದ ಭದ್ರತೆಯ ಬಗ್ಗೆ ಆದ್ಯತೆಯನ್ನು ಕೊಡಲಾಗಿದೆ.
ಇಂದು ಎನ್.ಸಿ.ಸಿ.ಯು ೭೦ ವರ್ಷಗಳನ್ನು ಪೂರೈಸಿದೆ. ಏಳು ದಶಕಗಳ ಪ್ರಯಾಣದಲ್ಲಿ ನನ್ನಂತಹ ಮಿಲಿಯಾಂತರ ಎನ್.ಸಿ.ಸಿ. ಕೆಡೆಟ್ ಗಳು ದೇಶಾಭಿಮಾನದ ಮೌಲ್ಯಗಳೊಂದಿಗೆ ಜೀವನದ ಪಥದಲ್ಲಿ ಸಾಗಿ ಹೋಗಿದ್ದಾರೆ.
ಸ್ನೇಹಿತರೇ, ನಾವು ಎನ್.ಸಿ.ಸಿ.ಯಿಂದ ಆಂದೋಲನದ ಭಾವನೆಯನ್ನು ಪಡೆಯುತ್ತೇವೆ.ಎನ್.ಸಿ.ಸಿ.ಯ 70 ನೇ ವರ್ಷ ಪೂರ್ಣಗೊಳ್ಳುವ ಸಂಧರ್ಭದಲ್ಲಿ ನಾವು ಈ ಸಂಗತಿಗಳ ಬಗ್ಗೆ ಗಮನ ಹರಿಸಬೇಕಾದ ಸಮಯ ಬಂದಿದೆ. ನಾವು ಎಲ್ಲಿಂದ ಬಂದೆವು, ನಾವು ಎಲ್ಲಿಗೆ ಬಂದಿದ್ದೇವೆ ಮತ್ತು ನಾವು ದೇಶವನ್ನು ಎಲ್ಲಿಗೆ ಕೊಂಡೊಯ್ಯಲು ಇಚ್ಚಿಸಿದ್ದೇವೆ ಎಂಬುದರತ್ತ ಚಿಂತಿಸಬೇಕು. ಎನ್.ಸಿ.ಸಿ.ಯ ರಚನೆ ಹೇಗಿರಬೇಕು, ಮತ್ತು ಎನ್.ಸಿ.ಸಿ.ಯಲ್ಲಿ ಯಾವ ಹೊಸ ವಿಷಯಗಳನ್ನು ಸೇರಿಸಬೇಕು? ಅದರ ವಿಸ್ತರಣೆ ಏನಾಗಬೇಕು? ನಾನು ಈ ವಿಷಯಗಳಿಗೆ ಸಂಬಂಧಪಟ್ಟ ಜನರಲ್ಲಿ ಎನ್.ಸಿ.ಸಿ. 75 ವರ್ಷಗಳನ್ನು ಪೂರೈಸುವಾಗ ಅದರ ಉದ್ದೇಶದ ಬಗ್ಗೆ ಅವರು ಒಂದು ಚೌಕಟ್ಟನ್ನು, ಹೊರಾವರಣವನ್ನು ತಯಾರು ಮಾಡಬೇಕು ಎಂದು ಮನವಿ ಮಾಡುತ್ತೇನೆ. ನಾವು ಎನ್.ಸಿ.ಸಿ ಆಂದೋಲನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು, ಹೇಗೆಂದರೆ ದೇಶದ ಯಾವುದೇ ಮೂಲೆಯಲ್ಲಿ ಹೊಸತೇನಾದರೂ ಇರಬೇಕು. ಅದು ಕೆಲಮಟ್ಟಿನ ಬದಲಾವಣೆಗಳನ್ನು ತರಬೇಕು, ಅದು ಹೆಮ್ಮೆಯ ಭಾವನೆಯನ್ನು ಮೂಡಿಸಬೇಕು. ಅದರಲ್ಲಿ ಕೆಲಸ ಮಾಡುವುದು ಹೆಮ್ಮೆಯ ಕೆಲಸವಾಗಬೇಕು. ಇಂದು ನಾವು 70 ವರ್ಷಗಳನ್ನು ಪೂರೈಸುತ್ತಿರುವಾಗ ಈ ನಿರ್ಧಾರಗಳೊಂದಿಗೆ ನಾವು 75 ವರ್ಷಕ್ಕೆ ಆಂದೋಲನವನ್ನು ರೂಪಿಸಬೇಕು.
ಈ ದೇಶದ ಯಾವುದೇ ಯುವಕರು ಭ್ರಷ್ಟಾಚಾರವನ್ನು ಸಹಿಸುತ್ತಾರೆ ಎಂದು ನಾನು ನಂಬುವುದಿಲ್ಲ.ಸಮಾಜಕ್ಕೆ ಭ್ರಷ್ಟಾಚಾರದ ಬಗ್ಗೆ ದ್ವೇಷದ ಭಾವನೆ ಇದೆ. ಆದರೆ ನಾವು ನಮ್ಮನ್ನು ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬರೇ ದ್ವೇಷದ ಭಾವನೆಗಷ್ಟೇ ಯಾಕೆ ಮಿತಿಗೊಳಿಸಿಕೊಳ್ಳಬೇಕು, ನಾವು ಭ್ರಷ್ಟಾಚಾರದ ವಿರುದ್ದ ಬರೇ ಆಕ್ರೋಶ ಮತ್ತು ಸಿಟ್ಟನ್ನು ಮಾತ್ರ ಯಾಕೆ ವ್ಯಕ್ತ ಮಾಡಬೇಕು? ಇದು ಸಾಕಾಗುತ್ತದೆಯೇ? ಆಗ ನಾವು ಈ ಯುದ್ದವನ್ನು ಬಹಳ ಧೀರ್ಘ ಅವಧಿಯವರೆಗೆ ಮುಂದುವರೆಸಬೇಕು, ಅದು ನಿಲುಗಡೆ ಕಾಣುವಂತಹದ್ದಲ್ಲ. ಭ್ರಷ್ಟಾಚಾರದ ವಿರುದ್ದದ ಈ ಹೋರಾಟ, ಕಪ್ಪು ಹಣದ ವಿರುದ್ದದ ಈ ಹೋರಾಟ ನನ್ನ ದೇಶದ ಯುವಕರ ಭವಿಷ್ಯವನ್ನು ರೂಪಿಸುವುದಕ್ಕಾಗಿ. ಮತ್ತು ನನ್ನ ದೇಶದ ಯುವಕರ ಭವಿಷ್ಯ ಭದ್ರವಾಗಿದ್ದರೆ ,ಆಗ ಅದು ದೇಶದ ಭವಿಷ್ಯವನ್ನು ನಿರ್ಮಿಸುತ್ತದೆ.
ಆದರೆ ನಾನು ಈ ದೇಶದ ಪ್ರಧಾನ ಮಂತ್ರಿಯಾಗಿ ಭಾರತೀಯ ಯುವಕರಿಂದ ಕೆಲವು ಸಂಗತಿಗಳನ್ನು ತಿಳಿಯಬಯಸುತ್ತೇನೆ. ನಾನು ಎನ್.ಸಿ.ಸಿ. ಕೆಡೆಟ್ ಗಳಿಂದ ಕೆಲವನ್ನು ಕೇಳ ಬಯಸುತ್ತೇನೆ. ನನ್ನನ್ನು ನೀವು ನಿರಾಶೆಗೊಳಿಸುವುದಿಲ್ಲ ಎಂದು ನಾನು ತಿಳಿದಿದ್ದೇನೆ. ನನ ದೇಶದ ಯುವಕರು ನನ್ನನ್ನು ನಿರಾಸೆಗೊಳಿಸಲಾರರು. ನಾನು ಮತಗಳನ್ನು ಕೇಳುವುದಿಲ್ಲ, ಅಥವಾ ನಾವು ರಾಜಕೀಯ ಕ್ಷೇತ್ರದ ಪ್ರಗತಿಗಾಗಿ ನಿಮ್ಮ ನೆರವನ್ನು ಕೋರುವುದೂ ಇಲ್ಲ. ನಾನು ನಿಮ್ಮ ಸಹಾಯ ಕೇಳುತ್ತಿದ್ದರೆ , ನನ್ನ ದೇಶದ ಯುವ ಜನರ ಸಹಾಯ ಬೇಕಾಗಿರುವುದು ಈ ದೇಶವನ್ನು ಗೆದ್ದಲಿನಂತೆ ಕಾಡುತ್ತಿರುವ ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದಕ್ಕೆ . ನೀವೇನು ಮಾಡಬಹುದು ಎಂಬುದನ್ನು ನೀವು ಅರಿತುಕೊಂಡಿರಬಹುದು. ಕನಿಷ್ಟ , ನಾವು ಯಾರಿಗೂ ಲಂಚ ಕೊಡುವುದಿಲ್ಲ ಮತ್ತು ಯಾರಿಂದಲೂ ಲಂಚ ಪಡೆಯುವುದಿಲ್ಲ ಎಂದು ನೀವು ನಿರ್ಧಾರ ಕೈಗೊಳ್ಳಬಹುದು. ನೀವಿದನ್ನು ಯಾವುದೇ ಸಂಧರ್ಭದಲ್ಲಾದರೂ ಮಾಡಬಹುದು. ಆದರೆ ಇದಿಷ್ಟೇ ಸಾಕಾಗಲಾರದು. ಇದು ಒಂದು ವಿಷಯ, ಒಂದು ಕೆಲಸ, ಮತ್ತು ನೀವು ಪ್ರತಿಜ್ಞೆ ಮಾಡಿದರೆ , ಮತ್ತು ಈ ವಿಷಯಗಳ ಬಗ್ಗೆ ಪ್ರತೀ ವರ್ಷ ಕನಿಷ್ಟ 100 ಕುಟುಂಬಗಳಿಗೆ ನೀವು ಸಹಾಯ ಮಾಡುವ ನಿಯಮ ಮಾಡಿಕೊಳ್ಳಿ. ಮತ್ತು ಆ ಕೆಲಸ ಏನು ? ಅಲ್ಲಿ ಉತ್ತರದಾಯಿತ್ವ ಇದ್ದರೆ, ಪಾರದರ್ಶಕತೆ ಇದ್ದರೆ ಆಗ ಅಲ್ಲಿ ಪರಿಸ್ಥಿತಿಯಲ್ಲಿ ಸ್ವಯಂ ಬದಲಾವಣೆ ಆಗುತ್ತದೆ. ನೀವು ಪ್ರತಿಜ್ಞೆ ಮಾಡಬಲ್ಲಿರಾ, ಎಲ್ಲಿಯಾದರೂ , ಯಾವುದಾದರೂ ವಸ್ತುವನ್ನು ಖರೀದಿಸುವಾಗ, ಹಣದ ವರ್ಗಾವಣೆ ಮಾಡುವಾಗ , ಆಗ ನಾವು ಅದನ್ನು ನಗದು ರೂಪದಲ್ಲಿ ಮಾಡುವುದಿಲ್ಲ, ನಮ್ಮೆಲ್ಲರ ಬಳಿಯೂ ಮೊಬೈಲ್ ಗಳಿವೆ. ನಾವು ’ಭೀಮ್ ಆಪ್”ನ್ನು ಡೌನ್ ಲೋಡ್ ಮಾಡಿಕೊಂಡು ನಾವು ಖರೀದಿಸುವ ವಸ್ತುಗಳಿಗೆ ಆ ಅಂಗಡಿಗೆ , ನಾವು ಭೇಟಿ ಕೊಡುವ ಮಾಲ್ ಗೆ ಇದನ್ನು ಬಳಸಿ ಪಾವತಿ ಮಾಡಬೇಕು. ಈ ವಿಷಯದ ಬಗ್ಗೆ ಅಭ್ಯಾಸ ಬೆಳೆಸಿಕೊಳ್ಳಿ. ನೀವು ಈ ರೀತಿಯ ಪಾರದರ್ಶಕತೆ ಅಲ್ಲಿ ರುವಂತೆ ನೋಡಿಕೊಳ್ಳಿ. ಇಲ್ಲಿ ಉತ್ತರದಾಯಿತ್ವವನ್ನು ನಿಗದಿ ಮಾಡುವುದು ಬಹಳ ಸುಲಭ.ಮತ್ತು ಭ್ರಷ್ಟಾಚಾರ ರಹಿತ ಭಾರತ ನಿರ್ಮಾಣ ಮಾಡುವಲ್ಲಿ ನಮಗೊಂದು ದೃಢವಾದ ಹೆಜ್ಜೆಯನ್ನು ತೆಗೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಮತ್ತು ಇದನ್ನು ನನ್ನ ಯುವಕರ ಸಹಾಯವಿಲ್ಲದೆ ಸಾಧಿಸಲಾಗದು. ಎನ್.ಸಿ.ಸಿ. ಕೆಡೆಟ್ ಗಳು ಈ ಕೆಲಸವನ್ನು ಆಂದೋಲನದೋಪಾದಿಯಲ್ಲಿ ಕೈಗೆತ್ತಿಕೊಂಡರೆ ಆಗ ಯಾರೊಬ್ಬರಿಗೂ ದೇಶವನ್ನು ಭ್ರಷ್ಟಾಚಾರದತ್ತ ಎಳೆದೊಯ್ಯುವ ಧೈರ್ಯ ಬರಲಾರದು. ಅತ್ಯಂತ ಭ್ರಷ್ಟ ವ್ಯಕ್ತಿ ಕೂಡಾ ಉನ್ನತ ಸ್ಥಾನದಲ್ಲಿದ್ದರೂ ಆಗ ಆತನೂ ಪ್ರಾಮಾಣಿಕತೆಯ ಹಾದಿಯನ್ನು ಅನುಸರಿಸಬೇಕಾಗುತ್ತದೆ.
ಇಂದು ಭ್ರಷ್ಟಾಚಾರದ ಬಗ್ಗೆ ಭಾರಿ ಮಾತುಗಳನ್ನು ಉನ್ನತ ಮಟ್ಟದಲ್ಲಿ ಆಡಲಾಗುತ್ತದೆ, ಚರ್ಚೆಯೂ ಆಗುತ್ತದೆ ,ಆದರೆ ದೊಡ್ಡ ಮನುಷ್ಯರಿಗೆ, ದುಡ್ಡಿದ್ದವರಿಗೆ ಏನೂ ಆಗುವುದಿಲ್ಲ ಎಂಬ ಬಗ್ಗೆ ಜನರಲ್ಲಿ ಒಂದು ರೀತಿಯ ನಿರಾಶೆಯ ಭಾವ ಇದೆ. ಇಂದು ನೀವು ಇಂತಹ ಪರಿಸ್ಥಿತಿಯಲ್ಲಿ ಹಾದು ಹೋಗುತ್ತಿದ್ದೀರಿ, ಇಂತಹ ಸಮಯದಲ್ಲಿ ಹಾದುಹೋಗುತ್ತಿದ್ದೀರಿ . ಈ ಸಮಯದಲ್ಲಿ ಕನಿಷ್ಟ ಮೂರು ಮಂದಿ ಮುಖ್ಯಮಂತ್ರಿಗಳು ಭ್ರಷ್ಟಾಚಾರಕ್ಕಾಗಿ ಕಂಬಿ ಎಣಿಸುತ್ತಿದ್ದಾರೆ. ಯಾರು ಹೇಳುತ್ತಾರೆ ಇಲ್ಲಿ ದೇವರು ಇಲ್ಲ ಎಂದು. ಯಾರು ಹೇಳುತ್ತಾರೆ ದೇವರ ಮನೆಯಲ್ಲಿ ನ್ಯಾಯ ಇಲ್ಲ ಎಂದು ? . ಈಗ ಅವರನ್ನು ರಕ್ಷಿಸಲು ಅಲ್ಲಿ ಯಾರೂ ಇಲ್ಲ.ಆದ್ದರಿಂದಲೇ ನಾನಿಂದು ಈ ವಿಷಯವನ್ನು ಎನ್.ಸಿ.ಸಿ.ಕೆಡೆಟ್ ಗಳ ಎದುರು ಹೇಳಬಯಸುತ್ತೇನೆ, ಮತ್ತು ದೇಶಾದ್ಯಂತ ಎನ್.ಸಿ.ಸಿ. ಕೆಡೆಟ್ ಗಳ ಮೂಲಕ ತಿಳಿಸಬಯಸುತ್ತೇನೆ: ಎನ್.ಎಸ್.ಎಸ್. ನ ಯುವಕರಿರಲಿ, ನೆಹರು ಯುವ ಕೇಂದ್ರದ ಯುವಕರಿರಲಿ ಅಥವಾ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿರಲಿ, ಈ ದೇಶಕ್ಕೆ ಸೇರಿದ ಯುವಕರು ಯಾರೇ ಇರಲಿ, ಈ ದೇಶಕ್ಕಾಗಿ ಬದುಕುವ ಮತ್ತು ಪ್ರಾಣ ಕೊಡುವ ಯುವಕರಿಗೆ ನಾನು ನಿಮ್ಮ ಸಹಕಾರ ಕೊಡಿ ಎಂದು ಕೇಳುತ್ತೇನೆ. ದಯವಿಟ್ಟು ಮುಂದೆ ಬಂದು ಈ ಹೋರಾಟದಲ್ಲಿ ಸೈನಿಕರಾಗಿ ನನಗೆ ಸಹಕಾರ ಕೊಡಿ . ದಯವಿಟ್ಟು ಮುಂದೆ ಬನ್ನಿ , ನಾವು ಒಗ್ಗೂಡಿ ಕೆಲಸ ಮಾಡುವ ಮೂಲಕ ನಾವು ಈ ದೇಶವನ್ನು ಕಾಡುವ ಗೆದ್ದಲನ್ನು ನಿರ್ಮೂಲನ ಮಾಡಿದರೆ ಆಗ ನಾವು ದೇಶದ ಬಡವರಿಗೆ ಅವರ ಹಕ್ಕುಗಳನ್ನು ಕೊಡುವ ಹೋರಾಟದಲ್ಲಿ ಗೆದ್ದಂತಾಗುತ್ತದೆ.
ನಾವು ಈ ಅನಿಷ್ಟಗಳನ್ನು ನಿವಾರಿಸಿದ್ದೇ ಆದರೆ ಆಗ ಅದರಿಂದ ಈ ದೇಶದ ಬಹಳಷ್ಟು ಮಂದಿ ಬಡವರಿಗೆ ಲಾಭವಾಗುತ್ತದೆ. ಹಣಕಾಸನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿದರೆ ಆಗ ಬಡವರ ಕುಟೀರದ ಜನರಿಗೆ ಕೈಗೆಟಕುವ ದರದಲ್ಲಿ ಔಷಧಿ ದೊರೆಯುತ್ತದೆ. ಹಣಕಾಸನ್ನು ಸರಿಯಾಗಿ ವಿನಿಯೋಗಿಸಿದರೆ ಅದು ಉತ್ತಮ ಶಾಲೆಗಳನ್ನು ,ಬಡವರ ಮಕ್ಕಳಿಗೆ ಉತ್ತಮ ಶಿಕ್ಷಕರನ್ನು ಒದಗಿಸುವ ಸೌಲಭ್ಯಗಳನ್ನು ರೂಪಿಸುತ್ತದೆ. ಹಣಕಾಸನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸಿದರೆ ಆಗ ಗ್ರಾಮಗಳಿಗೆ ರಸ್ತೆಗಳನ್ನು ನಿರ್ಮಿಸಬಹುದು, ಹಣವನ್ನು ಸೂಕ್ತವಾಗಿ ವಿನಿಯೋಗಿಸಿದಾಗ ಅದರಿಂದ ಈ ದೇಶದ ದುರ್ಬಲರಿಗೆ, ಶೋಷಿತರಿಗೆ ಮತ್ತು ಸಮಾಜದಿಂದ ಹೊರಗುಳಿದವರಿಗೆ ಏನಾದರೊಂದನ್ನು ಮಾಡುವ ಅವಕಾಶ ದೊರೆಯುತ್ತದೆ.
ನನ್ನ ದೇಶದ ನನ್ನ ಪ್ರೀತಿಯ ಯುವಕರೇ , ಇದರಿಂದಾಗಿಯೇ ಇಂದು ಆಧಾರ್ ಬಗ್ಗೆ ಚರ್ಚೆಯಾಗುತ್ತಿರುವುದು ನಿಮ್ಮ ಕಿವಿಗೆ ಬೀಳುತ್ತಿದೆ. ತಂತ್ರಜ್ಞಾನ ಜಗತ್ತಿನ ಬಗ್ಗೆ ಗೊತ್ತಿದ್ದವರು , ಬದಲಾಗುತ್ತಿರುವ ಕಾಲದ ಬಗ್ಗೆ ತಿಳಿದಿದ್ದವರಿಗೆ ಬರಲಿರುವ ದಿನಗಳಲ್ಲಿ ದತ್ತಾಂಶಗಳು ಅತ್ಯಂತ ಶಕ್ತಿಶಾಲಿಯಾದ ಸಲಕರಣೆಯಾಗುತ್ತವೆ ಎಂಬುದು ಗೊತ್ತಿರುತ್ತದೆ. ದತ್ತಾಂಶಗಳನ್ನು ಹೊಂದಿರುವ ದೇಶ ಶಕ್ತಿಶಾಲಿ ಎಂದು ಪರಿಗಣಿಸುವ ದಿನಗಳು ಬಹಳ ದೂರವೇನಿಲ್ಲ. ಡಿಜಿಟಲ್ ವಿಶ್ವದಲ್ಲಿ , ದತ್ತಾಂಶಗಳ ಜಗತ್ತಿನಲ್ಲಿ ,ಭಾರತಕ್ಕೆ ಆಧಾರ್ ಈ ಕ್ಷೇತ್ರದಲ್ಲಿ ಹೆಮ್ಮೆ ಪಡುವುದಕ್ಕೆ ಕಾರಣಗಳನ್ನು ಒದಗಿಸಿದೆ.
ಈಗ ಆಧಾರ್ ನಿಂದಾಗಿ ಬಡ ಜನರಿಗೆ, ಸಾಮಾನ್ಯ ಜನತೆಗೆ ದೊರೆಯಬೇಕಾಗಿದ್ದ ಸವಲತ್ತುಗಳು ಈ ಮೊದಲು ತಪ್ಪು ಕೈಗಳಿಗೆ ಸಿಗುತ್ತಿದ್ದುದು ನಿಂತು ಹೋಗಿದೆ.ಇದೂ ಕೂಡಾ ಒಂದು ರೀತಿಯ ಭ್ರಷ್ಟಾಚಾರದ ವಿಧಾನವಾಗಿತ್ತು. ಹುಟ್ಟದೇ ಇದ್ದ ಹೆಣ್ಣು ಮಗು ಸರಕಾರಿ ದಾಖಲೆಗಳಲ್ಲಿ ಹರೆಯ ತಲುಪಿ ವಿಧವೆಯಾಗುತ್ತಿದ್ದಳು ಮತ್ತು ಆಕೆಗೆ ಸರಕಾರದ ಬೊಕ್ಕಸದಿಂದ ವಿಧವಾ ವೇತನ ಪಾವತಿಯಾಗುತ್ತಿತ್ತು.ಇಂತಹ ವ್ಯವಹಾರಗಳೆಲ್ಲ ನಡೆಯುತ್ತಿದ್ದವು. ಆದರೆ ಈಗ ನಿಜವಾದ ಅರ್ಹರನ್ನು ಆಧಾರ್ ಮೂಲಕ ಗುರುತಿಸಲಾಗುತ್ತಿದೆ. ಮತ್ತು ಅವರಿಗೆ ನೇರ ನಗದು ವರ್ಗಾವಣೆ ಮೂಲಕ ಸವಲತ್ತುಗಳು ಸಿಗುತ್ತಿವೆ. ಮತ್ತು ನನ್ನ ದೇಶದ ಯುವಜನರೇ, ಇದನ್ನು ಕೆಲವು ಯೋಜನೆಗಳಲ್ಲಿ ಜಾರಿಗೆ ತರಲಾಗಿದೆ. ಈಗ ಅದರ ಪ್ರಮಾಣ 100 % ನಷ್ಟು ಇಲ್ಲ. ಇದು ಆರಂಭ ಮಾತ್ರ, ಮತ್ತು ಇದರಿಂದಾಗಿ ಸುಮಾರು 60,000 ಕೋ.ರೂ. ಉಳಿತಾಯವಾಗಿದೆ. ಇದು ಈ ಮೊದಲು ಅನರ್ಹರ ಕೈಸೇರುತ್ತಿತ್ತು. ಇದೆಲ್ಲ ಸಾಧ್ಯವಾಗಿದೆ. ಮತ್ತು ಆದ್ದರಿಂದ ನಮ್ಮ ಯುವಕರು ನಗದು ರಹಿತ ಸಮಾಜದ ದಿಕ್ಕಿನಲ್ಲಿ ಮುನ್ನಡೆಯಬೇಕು. ಕಡಿಮೆ ನಗದು ಎನ್ನುವ ಮಂತ್ರದೊಂದಿಗೆ ಮತ್ತು ಎಲ್ಲಾ ಮಾರಾಟ ಹಾಗು ಖರೀದಿಗೆ ನಾವು ಪಾವತಿ ಮಾಡಬೇಕಾದ ಸಂಧರ್ಭದಲ್ಲಿ ಭೀಮ್ (ಬಿ.ಎಚ್.ಐ.ಎಂ) ಆಪ್ ಮೂಲಕ ಪಾವತಿ ಮಾಡುವಂತಾಗಬೇಕು. ಆಗ ನಿಮಗೆ ದೇಶದಲ್ಲಿ ಬದಲಾವಣೆಗಳು ಹೇಗೆ ಸಂಭವಿಸುತ್ತವೆ ಎಂಬುದು ಕಾಣಸಿಗುತ್ತದೆ.
ನನ್ನ ಕಿರಿಯ ಸ್ನೇಹಿತರೇ, ನಿಮಗೆ ನಿಮ್ಮ ಜೀವನದಲ್ಲಿ ಒಳ್ಳೆಯ ಅನುಭವ ದೊರಕಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ನಿಮಗೆ ದೇಶದ ವಿವಿಧೆಡೆಯಿಂದ ಬಂದ ಜನರ ಜತೆ ಬದುಕುವ ಅವಕಾಶ ದೊರಕಿದೆ. ಅದನ್ನು ನೀವು ಅನುಭವಿಸಿದ್ದೀರಿ. ನಿಮ್ಮಲ್ಲ್ಲಿ ಭಾವನೆಗಳು ಉದಿಸಿವೆ ಮತ್ತು ನಿಮಗೆ ಭಾರತದ ಹೊಸ ಸ್ಪರ್ಶ ದೊರೆತಿದೆ. ಈ ಹೊಸ ಸ್ಪೂರ್ತಿಯೊಂದಿಗೆ , ಹೊಸ ನಿರ್ಧಾರಗಳೊಂದಿಗೆ , ಹೊಸ ಆಶೋತ್ತರಗಳೊಂದಿಗೆ, ನಾವೆಲ್ಲರೂ ಒಗ್ಗೂಡಿ ನವ ಭಾರತ ನಿರ್ಮಾಣದ ಪ್ರತಿಜ್ಞೆಯೊಂದಿಗೆ ಮುನ್ನಡೆಯಬೇಕು. ನಾವು ದೇಶವನ್ನು ಮುನ್ನಡೆಸಬೇಕು, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸುಗಳನ್ನು ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುವ ಸಂಧರ್ಭವಾದ 2022ರ ವೇಳೆಗೆ ನನಸು ಮಾಡುವ ಶಕ್ತಿಯನ್ನು ಗಳಿಸಿಕೊಂಡು ಮುಂದುವರಿಯಬೇಕು.
ನಿಮಗೆಲ್ಲರಿಗೂ ನನ್ನ ಶುಭಾಶಯಗಳು.
ಧನ್ಯವಾದಗಳು.
Every youngster came here with their own personality and identity but I am sure the last month would have led to the formation of new friendships and learning of new things from others: PM @narendramodi https://t.co/2HpoKDlNub
— PMO India (@PMOIndia) January 28, 2018
NCC camps teach every youngster about the different cultures of India. It motivates every youngster to do something good for the nation: PM @narendramodi https://t.co/2HpoKDlNub
— PMO India (@PMOIndia) January 28, 2018
This spirit that has been learnt in NCC camps has to remain with you for life: PM @narendramodi at the NCC parade https://t.co/2HpoKDlNub
— PMO India (@PMOIndia) January 28, 2018
NCC is not about uniform or uniformity, it is about unity. Through NCC we nurture teams that work in mission mode and inspire others: PM @narendramodi
— PMO India (@PMOIndia) January 28, 2018
NCC completes 7 glorious decades. It has given a sense of mission to several people. Today we celebrate what we have achieved and also think about how we can make the NCC experience even more effective in the years to come: PM @narendramodi https://t.co/2HpoKDlNub
— PMO India (@PMOIndia) January 28, 2018
I urge all stakeholders to think about the plan of action of the next 5 years, when NCC turns 75: PM @narendramodi https://t.co/2HpoKDlNub
— PMO India (@PMOIndia) January 28, 2018
The youth of India refuses to accept corruption. The fight against corruption and black money will not stop. This is a fight for the future of India's youth: PM @narendramodi
— PMO India (@PMOIndia) January 28, 2018
My young friends, I am here to ask for something. No, I am not here for seeking votes or politics. My appeal is- please further digital transactions through (the BHIM App). Please also get others on that platform. This is a step towards transparency and accountability: PM
— PMO India (@PMOIndia) January 28, 2018
Once the youth of India decide something, everything is possible: PM @narendramodi
— PMO India (@PMOIndia) January 28, 2018
Earlier people believed that nothing happens to the rich and powerful. But, things are different today. People who served as Chief Ministers are in jail for their corruption: PM @narendramodi https://t.co/2HpoKDlNub
— PMO India (@PMOIndia) January 28, 2018
These days you keep hearing about Aadhaar. I want to say Aadhaar has added great strength to India's development. What would earlier get into wrong hands is now going to the intended beneficiaries: PM @narendramodi
— PMO India (@PMOIndia) January 28, 2018