Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2019ರ ಫೆಬ್ರವರಿ 2ರಂದು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2019ರ ಫೆಬ್ರವರಿ 2ರಂದು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಭೇಟಿ ನೀಡಲಿದ್ದಾರೆ.
 
ಈ ಭೇಟಿಯ ವೇಳೆ ಅವರು, ಆಂಡಾಳ್-ಸೈಂಥಿಯಾ-ಪಾಕುರ್-ಮಾಲ್ಡಾ ಮತ್ತು ಖಾನಾ-ಸೈಂಥಿಯಾ ವಿಭಾಗಗಳ ನಡುವಿನ 294 ಕಿ.ಮೀ. ವಿದ್ಯುದ್ದೀಕರಣ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ವಿಭಾಗದ ವಿದ್ಯುದ್ದೀಕರಣವು ಕಲ್ಲಿದ್ದಲು, ಕಲ್ಲು ಚೂರು ಮತ್ತು  ನೀಲುಭಾರವನ್ನು ಉತ್ತರ ಮತ್ತು ಈಶಾನ್ಯ ಭಾರತಕ್ಕೆ ತಡೆರಹಿತವಾಗಿ ಸಾಗಿಸಲು ಅವಕಾಶ ಕಲ್ಪಿಸುತ್ತದೆ.
 
ಇಪ್ಪತ್ತು ಕಿ.ಮೀ. ಉದ್ದದ ಹಿಜ್ಲಿ – ನಾರಾಯಣ್ ಗರ್ ಮೂರನೇ ಮಾರ್ಗವನ್ನೂ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ.