Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್ ಪುಟ್ F57ರಲ್ಲಿ ಕಂಚಿನ ಪದಕವನ್ನು ಗೆದ್ದ ಶಿಲ್ಪಾ ಕಂಚುಗರಕೊಪ್ಪಲು ಶೈಲಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


2026ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್ ಪುಟ್ F57ರ ಅಂತಿಮ ಪಂದ್ಯದಲ್ಲಿ ಕಂಚಿನ ಪದಕ ಗೆದ್ದ ಶಿಲ್ಪಾ ಕಂಚುಗರಕೊಪ್ಪಲು ಶೈಲಾ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ

ಶಿಲ್ಪಾ ಅವರ ವೈಯಕ್ತಿಕ ಅತ್ಯುತ್ತಮ ಎಸೆತವು ಈ ಸಾಧನೆಯನ್ನು ಇನ್ನಷ್ಟು ಗಮನಾರ್ಹವಾಗಿಸಿದೆ ಎಂದು ಪ್ರಧಾನಿಯವರು ಹೇಳಿದರು.

ಶ್ರೀ ಮೋದಿಯವರು ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು Xನಲ್ಲಿ ಹೀಗೆ ಬರೆದಿದ್ದಾರೆ;

“2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶಿಲ್ಪಾ ಕಂಚುಗರಕೊಪ್ಪಲು ಶೈಲಾ ಅವರದ್ದು ಅದ್ಭುತ ಪ್ರದರ್ಶನ!

ಮಹಿಳಾ ಶಾಟ್‌ಪುಟ್ F57ರ ಫೈನಲ್‌ನಲ್ಲಿ ವೈಯಕ್ತಿಕ ಅತ್ಯುತ್ತಮ ಎಸೆತದೊಂದಿಗೆ ಕಂಚಿನ ಪದಕ ಗೆದ್ದ ಶಿಲ್ಪಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಜಕ್ಕೂ ಗಮನಾರ್ಹ ಸಾಧನೆ.

#CWG2026” 

 

*****