Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2026 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ 100 ಮೀಟರ್ ಟಿ 47 ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರುವ ದಿಲೀಪ್ ಮಹದು ಗವಿತ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಕಾಮನ್ ವೆಲ್ತ್ ಕ್ರೀಡಾಕೂಟ 2026ರಲ್ಲಿ ಪುರುಷರ 100 ಮೀಟರ್ ಟಿ 47 ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿರುವ ದಿಲೀಪ್ ಮಹದು ಗವಿತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ದಿಲೀಪ್ ಮಹದು ಗವಿತ್ ಅವರು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ ಮತ್ತು ಅದ್ಭುತ ಸಮಯ ಸೂಕ್ಷ್ಮತೆಯೊಂದಿಗೆ ಈ ಋತುವಿನ ತಮ್ಮ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಗವಿತ್ ಅವರ ವೇಗ, ದೃಢನಿಶ್ಚಯ ಮತ್ತು ಸಮರ್ಪಣೆಯು ದೇಶಕ್ಕೆ ಹೆಮ್ಮೆ ತಂದಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 

ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

“ದಿಲೀಪ್ ಮಹದು ಗವಿತ್ ಅವರಿಂದ ಅದ್ಭುತ ಪ್ರದರ್ಶನ!

ಪುರುಷರ 100 ಮೀಟರ್ ಟಿ 47 ಸ್ಪರ್ಧೆಯಲ್ಲಿ ಗಮನಾರ್ಹ ಸಮಯ ಸಮರ್ಪಕ ಕ್ರಿಯೆಯೊಂದಿಗೆ ಚಿನ್ನದ ಪದಕ ಜಯಿಸಿ, ಹೊಸ ಕ್ರೀಡಾ ದಾಖಲೆ ನಿರ್ಮಿಸಿರುವ ಮತ್ತು ಋತುವಿನ ಅತ್ಯುತ್ತಮ ಸಾಧನೆ ಮಾಡಿರುವ ದಿಲೀಪ್ ಅವರಿಗೆ ಅಭಿನಂದನೆಗಳು. ಅವರ ವೇಗ, ದೃಢನಿಶ್ಚಯ ಮತ್ತು ಸಮರ್ಪಣೆಯಿಂದಾಗಿ ನಮ್ಮ ರಾಷ್ಟ್ರ ಹೆಮ್ಮೆಪಡುವಂತಾಗಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು! 

#CWG2026”

 

*****