ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಜಿ (ಶ್ರೀ ಕಮಲೇಶ್ ಪಟೇಲ್) ಅವರ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಈ ಲೇಖನವು ಸೇವೆ, ಉದ್ದೇಶ, ದೃಢನಿಶ್ಚಯ ಮತ್ತು ಧೈರ್ಯದಂತಹ ಮೂಲಭೂತ ಮೌಲ್ಯಗಳ ಮೂಲಕ ಪ್ರಧಾನಮಂತ್ರಿಯವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಅವಲೋಕಿಸಿದೆ.
ಶ್ರೀ ಮೋದಿಯವರ ಆರಂಭಿಕ ದಿನಗಳಲ್ಲಿನ ಸಮರ್ಪಣೆಯೊಂದಿಗಿನ ಸೇವೆಯಿಂದ ಹಿಡಿದು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿ ಅವರು ವಹಿಸಿದ ನಾಯಕತ್ವದವರೆಗಿನ ಪಯಣದುದ್ದಕ್ಕೂ, ದೃಢವಾದ ಸೇವಾ ಮನೋಭಾವವು ಹೇಗೆ ನಿರಂತರ ಮಾರ್ಗದರ್ಶಕ ಸೂತ್ರವಾಗಿದೆ ಎಂಬುದನ್ನು ದಾಜಿ ಅವರು ವಿವರಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:
“ದಾಜಿ (ಶ್ರೀ ಕಮಲೇಶ್ ಪಟೇಲ್) ಅವರು ಪ್ರಧಾನಮಂತ್ರಿ @narendramodi ಅವರ ಸಾರ್ವಜನಿಕ ಜೀವನದ 25 ವರ್ಷಗಳಲ್ಲಿನ ಸೇವೆ, ಉದ್ದೇಶ, ದೃಢನಿಶ್ಚಯ ಮತ್ತು ಧೈರ್ಯದ ಮೌಲ್ಯಗಳ ಬಗ್ಗೆ ವಿವರಿಸಿದ್ದಾರೆ. ಶ್ರೀ ಮೋದಿ ಅವರ ಆರಂಭಿಕ ದಿನಗಳಿಂದ ಹಿಡಿದು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯಾಗಿ ಅವರ ಪಯಣದವರೆಗೂ, ಸೇವಾ ಮನೋಭಾವವು ಹೇಗೆ ಒಂದು ನಿರಂತರ ಕೊಂಡಿಯಾಗಿ ಉಳಿದಿದೆ ಎಂಬುದನ್ನು ಅವರು ವಿವರಿಸಿದ್ದಾರೆ.”
*****
Daaji (Shri Kamlesh Patel) reflects on PM @narendramodi's 25 years in public life through the values of seva, purpose, conviction and courage. He describes how a sense of service has remained a constant thread from Shri Modi's early years to his journey as Chief Minister and Prime Minister. https://t.co/6JDCJkKfae
— PMO India (@PMOIndia) October 7, 2026