Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ (ಐಪಿಎಚ್‌ಒ) 2026ರಲ್ಲಿ ಚಿನ್ನದ ಪದಕ ಜಯಿಸಿರುವ ಭಾರತ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ


ಕೊಲಂಬಿಯಾದ ಬುಕಾರಮಂಗಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ (ಐಪಿಎಚ್‌ಒ) 2026 ರಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತ ತಂಡದ ಕನಿಷ್ಕ್ ಜೈನ್, ರಿದ್ಧೇಶ್ ಅನಂತ್ ಬೆಂದೇಲ್, ರಿಶಿತ್ ಗರ್ಗ್, ಶ್ರೇಷ್ಠ್ ಸುರೈಯಾ ಮತ್ತು ಸ್ವರಿತ್ ಜೋಶಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ದೇಶದ ಯುವಶಕ್ತಿಯ ಅಪರಿಮಿತ ಸಾಮರ್ಥ್ಯ ಹಾಗೂ ವಿಜ್ಞಾನ ಮತ್ತು ಸಂಶೋಧನೆಯ ಬಗ್ಗೆ ಅವರಲ್ಲಿರುವ ಒಲವಿಗೆ ಈ ಸಾಧನೆಯು ಮತ್ತೊಂದು ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು 

ಕಳೆದ ದಶಕದಲ್ಲಿ ಈ ವೇದಿಕೆಯ ವಿವಿಧ ಆವೃತ್ತಿಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ ಎಂದು ಶ್ರೀ ಮೋದಿ ಅವರು ಗಮನಿಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ:

“ನಮ್ಮ ಯುವಜನರಿಂದ ಅತ್ಯುತ್ತಮ ಪ್ರದರ್ಶನ!

ಕೊಲಂಬಿಯಾದ ಬುಕಾರಮಂಗಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ (ಐಪಿಎಚ್‌ಒ) 2026 ರಲ್ಲಿ ಚಿನ್ನದ ಪದಕಗಳನ್ನು ಜಯಿಸಿರುವ ಭಾರತೀಯ ತಂಡದ ಕನಿಷ್ಕ್ ಜೈನ್, ರಿದ್ದೇಶ್ ಅನಂತ್ ಬೆಂದೇಲ್, ರಿಶಿತ್ ಗರ್ಗ್, ಶ್ರೇಷ್ಠ್ ಸುರೈಯಾ ಮತ್ತು ಸ್ವರಿತ್ ಜೋಶಿ ಅವರಿಗೆ ಅಭಿನಂದನೆಗಳು.

ನಮ್ಮ ಯುವ ಶಕ್ತಿಯ ಅಪರಿಮಿತ ಸಾಮರ್ಥ್ಯ ಹಾಗೂ ವಿಜ್ಞಾನ ಮತ್ತು ಸಂಶೋಧನೆಯ ಬಗೆಗಿನ ಅವರ ಉತ್ಸಾಹಕ್ಕೆ ಮತ್ತೊಂದು ಉದಾಹರಣೆಯನ್ನು ಅವರ ಈ ಸಾಧನೆಯು ಪ್ರತಿಬಿಂಬಿಸುತ್ತದೆ. ಕಳೆದ ದಶಕದಲ್ಲಿ, ನಮ್ಮ ವಿದ್ಯಾರ್ಥಿಗಳು ಈ ವೇದಿಕೆಯ ವಿವಿಧ ಆವೃತ್ತಿಗಳಲ್ಲಿ ಅನನ್ಯ ಪ್ರದರ್ಶನ ನೀಡಿದ್ದಾರೆ ಎಂಬುದು ಸಮಾನವಾಗಿ ಶ್ಲಾಘನೀಯ.”

 

*****