ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕೆಂಪು ಕೋಟೆಯ ಕೊತ್ತಲಗಳಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರ 103 ನಿಮಿಷಗಳ ಕಾಲ ಕೆಂಪು ಕೋಟೆಯಿಂದ ಮಾಡಿದ ಭಾಷಣವು ಅತ್ಯಂತ ದೀರ್ಘ ಮತ್ತು ನಿರ್ಣಾಯಕ ಭಾಷಣವಾಗಿದ್ದು, 2047ರ ವೇಳೆಗೆ ವಿಕ್ಷಿತ ಭಾರತಕ್ಕಾಗಿ ದಿಟ್ಟ ಮಾರ್ಗಸೂಚಿಯನ್ನು ರೂಪಿಸಿದೆ. ಪ್ರಧಾನಮಂತ್ರಿ ಅವರ ಭಾಷಣವು ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿತ್ತು, ಇತರರನ್ನು ಅವಲಂಬಿಸಿದ ರಾಷ್ಟ್ರದಿಂದ ಜಾಗತಿಕವಾಗಿ ಆತ್ಮವಿಶ್ವಾಸ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸ್ಥಿತಿಸ್ಥಾಪಕತ್ವದ ಶಕ್ತಿಯುಳ್ಳ ದೇಶದವರೆಗೆ ಭಾರತದ ಪ್ರಯಾಣವನ್ನು ಎತ್ತಿ ತೋರಿಸಿತು.
ಶ್ರೀ ಮೋದಿ ಅವರು 2047ರ ವಿಕ್ಷಿತ ಭಾರತ್ಗಾಗಿ ತಮ್ಮ ಚಿಂತನೆಯನ್ನು ವಿವರಿಸಿದರು, ಭಾರತದ ಪ್ರಗತಿಯು ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ನಿರ್ಮಿತವಾಗಿದೆ ಎಂದು ಒತ್ತಿ ಹೇಳಿದರು. ವ್ಯೂಹಾತ್ಮಕ ರಕ್ಷಣೆಯಿಂದ ಹಿಡಿದು ಅರೆವಾಹಕಗಳವರೆಗೆ, ಶುದ್ಧ ಇಂಧನದಿಂದ ಕೃಷಿಯವರೆಗೆ ಮತ್ತು ಡಿಜಿಟಲ್ ಸಾರ್ವಭೌಮತ್ವದಿಂದ ಯುವ ಸಬಲೀಕರಣದವರೆಗೆ, 2047ರ ವೇಳೆಗೆ ಭಾರತವನ್ನು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸಲು ಮಾರ್ಗಸೂಚಿ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ಇದು ಜಾಗತಿಕವಾಗಿ ಸ್ಪರ್ಧಾತ್ಮಕ, ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯ ದೇಶವಾಗಿ ರೂಪುಗೊಳ್ಳಲಿದೆ
ಪ್ರಧಾನಮಂತ್ರಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ.
1. ಸಾಮಾನ್ಯ
2. ರಕ್ಷಣಾ ಸಚಿವಾಲಯ
3. ಹಣಕಾಸು ಸಚಿವಾಲಯ
4. ಗೃಹ ವ್ಯವಹಾರಗಳ ಸಚಿವಾಲಯ
5. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
6. ಪಶುಸಂಗೋಪನಾ ಸಚಿವಾಲಯ
7. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
8. ಬಾಹ್ಯಾಕಾಶ ಇಲಾಖೆ
9. ಪರಮಾಣು ಇಂಧನ ಇಲಾಖೆ
10. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
11. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂ.ಎಸ್.ಎಂ.ಇ.-MSME)
12. ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯ
• ಭಾರತವು “ವಿಶ್ವದ ಔಷಧಾಲಯ” ವಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕು.
• ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡುವ ತುರ್ತು ಅವಶ್ಯಕತೆಯಿದೆ.
• “ಮಾನವೀಯತೆಯ ಕಲ್ಯಾಣಕ್ಕಾಗಿ ನಾವು ಅತ್ಯುತ್ತಮ ಮತ್ತು ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸಬೇಕಲ್ಲವೇ?”
• ದೇಶೀಯ ಔಷಧೀಯ ನಾವೀನ್ಯತೆಯಲ್ಲಿ ಭಾರತದ ಬೆಳೆಯುತ್ತಿರುವ ಶಕ್ತಿ, ಹೊಸ ಔಷಧಿಗಳು, ಲಸಿಕೆಗಳು ಮತ್ತು ಜೀವ ಉಳಿಸುವ ಚಿಕಿತ್ಸೆಗಳನ್ನು ಸಂಪೂರ್ಣವಾಗಿ ಭಾರತದೊಳಗೆ ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿಹೇಳುತ್ತದೆ.
• ಆಹಾರ ಭದ್ರತೆಯನ್ನು ಆಮದುಗಳಿಗೆ ಬಿಡಬಾರದು.
• ಭಾರತೀಯ ರೈತರು ಸಬಲೀಕರಣಗೊಳ್ಳುವುದನ್ನು ಮತ್ತು ಭಾರತದ ಕೃಷಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರಗಳು ಮತ್ತು ಪ್ರಮುಖ ಒಳಹರಿವಿನ ಸಾಮಗ್ರಿಗಳನ್ನು ದೇಶೀಯವಾಗಿ ಉತ್ಪಾದಿಸುವ ತುರ್ತು ಅವಶ್ಯಕತೆಯಿದೆ.
• ಇತರ ದೇಶಗಳನ್ನು ಅವಲಂಬಿಸದೆ, ಭಾರತದ ಅವಶ್ಯಕತೆಗೆ ಅನುಗುಣವಾಗಿ ನಮ್ಮ ಸ್ವಂತ ರಸಗೊಬ್ಬರಗಳನ್ನು ತಯಾರಿಸಲು ನಾವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು.
• ಇದು ರೈತರ ಕಲ್ಯಾಣಕ್ಕೆ ಮಾತ್ರವಲ್ಲದೆ ರಾಷ್ಟ್ರದ ಆರ್ಥಿಕ ಸಾರ್ವಭೌಮತ್ವವನ್ನು ಬಲಪಡಿಸಲು ಸಹ ನಿರ್ಣಾಯಕವಾಗಿದೆ.
13. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
14. ಕಾನೂನು ಮತ್ತು ನ್ಯಾಯ ಸಚಿವಾಲಯ
15. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
16. ಬುಡಕಟ್ಟು ವ್ಯವಹಾರಗಳ ಸಚಿವಾಲಯ
17. ಸಂಸ್ಕೃತಿ ಸಚಿವಾಲಯ
18. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
19. ವಿದ್ಯುತ್ ಸಚಿವಾಲಯ
20. ಗಣಿ ಸಚಿವಾಲಯ
• ಇಂಧನ, ಕೈಗಾರಿಕೆ ಮತ್ತು ರಕ್ಷಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಪಡೆದುಕೊಳ್ಳಲು, ಭಾರತವು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಪ್ರಾರಂಭಿಸಿದೆ, ಇಂಧನ, ಕೈಗಾರಿಕೆ ಮತ್ತು ರಕ್ಷಣೆಗೆ ಅಗತ್ಯವಾದ ಖನಿಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 1,200 ತಾಣಗಳನ್ನು ಅನ್ವೇಷಿಸುತ್ತಿದೆ.
• ಈ ಖನಿಜಗಳನ್ನು ನಿಯಂತ್ರಿಸುವುದು ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಲಪಡಿಸುತ್ತದೆ, ಭಾರತದ ಕೈಗಾರಿಕಾ ಮತ್ತು ರಕ್ಷಣಾ ವಲಯಗಳು ಸ್ವಾವಲಂಬಿಯಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ.
21. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
• ಯುವಜನರು ಭಾರತದ ಸ್ವಂತ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು, ಸಂವಹನ, ದತ್ತಾಂಶ ಮತ್ತು ತಾಂತ್ರಿಕ ಪರಿಸರ ವ್ಯವಸ್ಥೆಗಳು ಸುರಕ್ಷಿತ ಮತ್ತು ಸ್ವತಂತ್ರವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಭಾರತದ ಡಿಜಿಟಲ್ ಸ್ವಾಯತ್ತತೆಯನ್ನು ಬಲಪಡಿಸಬೇಕು.
• ಕ್ರೀಡೆಗಳನ್ನು ಉತ್ತೇಜಿಸಲು, ನಾವು ರಾಷ್ಟ್ರೀಯ ಕ್ರೀಡಾ ನೀತಿಯನ್ನು ತಂದಿದ್ದೇವೆ.
• ನಾವು ದೇಶದಲ್ಲಿ ‘ಖೇಲೋ ಇಂಡಿಯಾ ನೀತಿ’ಯನ್ನು ಪರಿಚಯಿಸಿದ್ದೇವೆ.
ಟಿಪ್ಪಣಿ: ಕೆಲವು ವಿಷಯಗಳು ಒಂದಕ್ಕಿಂತ ಹೆಚ್ಚು ಸಚಿವಾಲಯಗಳ ಒಳಗೊಳ್ಳುವಿಕೆಯನ್ನು ಹೊಂದಿವೆ, ಅದಕ್ಕೆ ಅನುಗುಣವಾಗಿ ಅವುಗಳನ್ನು ಪುನರಾವರ್ತಿಸಬಹುದು.
*****