ಪಿಎಂಇಂಡಿಯಾ
ಘನತೆವೆತ್ತರೆ, ಮಹನೀಯರೆ ಮತ್ತು ಮಹಿಳೆಯರೆ, ಮಾಧ್ಯಮದ ಮಿತ್ರರೇ,
ನಾವು ಈಗಷ್ಟೇ 8ನೇ ಬ್ರಿಕ್ಸ್ ಶೃಂಗಸಭೆಯನ್ನು ಸಮಾರೋಪಗೊಳಿಸಿದ್ದೇವೆ.
ಅಧ್ಯಕ್ಷ ಕ್ಸಿ, ಅಧ್ಯಕ್ಷ ಜುಮಾ, ಅಧ್ಯಕ್ಷ ಟೆಮೆರ್ ಮತ್ತು ಅಧ್ಯಕ್ಷ ಪುಟಿನ್ ಅವರನ್ನು ಸುಂದರ ರಾಜ್ಯ ಗೋವಾಕ್ಕೆ ಸ್ವಾಗತಿಸಲು ನಾನು ಗೌರವ ಹಾಗೂ ಹೆಮ್ಮೆ ಹೊಂದಿದ್ದೇನೆ.
ಇಂದು ನಮ್ಮ ಚರ್ಚೆಗಳು ಮೂರು ಅಧಿವೇಶನಗಳಿಂದ ಕೂಡಿತ್ತು, ಅವು ಸವಿವರ, ಸತ್ವಪೂರ್ಣ ಮತ್ತು ಫಲಪ್ರದವಾಗಿತ್ತು.
ಬೆಳಗ್ಗೆ, ನಾವು ಭಯೋತ್ಪಾದನೆ, ಜಾಗತಿಕ ಆರ್ಥಿಕ ಸನ್ನಿವೇಶ ಮತ್ತು ಜಾಗತಿಕ ಆಡಳಿತ ಸ್ವರೂಪ ಸುಧಾರಣೆಯ ಅಗತ್ಯ ಸೇರಿದಂತೆ ಮಹತ್ವದ ಜಾಗತಿಕ ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡೆವು.
ನಾವು ಪ್ರಗತಿಯಲ್ಲಿರುವ ಬ್ರಿಕ್ಸ್ ಸಹಕಾರವನ್ನು ಪರಾಮರ್ಶಿಸಲೂ ಈ ಅವಕಾಶವನ್ನು ಬಳಸಿಕೊಂಡೆವು.
ಸರ್ವ ಸದಸ್ಯರ ಸಭೆಯ ವೇಳೆ, ನಾವು ಮುಂಬರುವ ವರ್ಷಗಳಲ್ಲಿ ಬ್ರಿಕ್ಸ್ ಭವಿಷ್ಯದ ವಿಸ್ತರಣೆಯ ಸಾಧ್ಯತೆ ಮತ್ತು ಕಲ್ಪನೆಗಳ ಬಗ್ಗೆಯೂ ಗಮನ ಹರಿಸಿದೆವು.
ಈ ಮಾತುಕತೆಗಳು ಉಪಯುಕ್ತ ಮತ್ತು ದೂರದೃಷ್ಟಿಯನ್ನು ಹೊಂದಿದ್ದವು. ಮತ್ತು ಬ್ರಿಕ್ಸ್ ನ ದಶಕದ ಹೆಜ್ಜೆಗುರುತಿಗೂ ಇದು ಸಕಾಲವಾಗಿತ್ತು. ನಾವು ಈಗಷ್ಟೇ ಬ್ರಿಕ್ಸ್ ವಾಣಿಜ್ಯ ಮಂಡಳಿಯ ಸಭೆಯನ್ನು ಮುಗಿಸಿದೆವು.
ಅಲ್ಲದೆ ನಾವು ಎನ್.ಡಿ.ಬಿ. ತನ್ನ ಮೊದಲ ವರ್ಷದಲ್ಲಿ ಕೈಗೊಂಡಿರುವ ಅರ್ಥಪೂರ್ಣ ಕಾರ್ಯದ ಬಗ್ಗೆ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಅಧ್ಯಕ್ಷರ ಮಾತುಗಳನ್ನು ಕೇಳಿದೆವು.
ಬ್ರಿಕ್ಸ್ ನೊಳಗೆ ಮತ್ತು ಅಂತಾರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಹಕಾರ ಮತ್ತು ಸಹಯೋಗಕ್ಕೆ ಸಮಗ್ರ ಮುನ್ನೋಟವನ್ನು ನೀಡುವ ಗೋವಾ ಘೋಷಣೆಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂಬ ಅಂಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಸಂತೋಷ ಪಡುತ್ತೇನೆ.
ಮಾನ್ಯರೆ ಮತ್ತು ಮಹಿಳೆಯರೇ,
ನಾವು ಈಗ, ಶೃಂಗಸಭೆಯ ವೇಳೆ ಬ್ರಿಕ್ಸ್ ನಾಯಕರ ಹೆಚ್ಚು ಗಮನ ಸೆಳೆದ ವಿಚಾರಗಳತ್ತ ತೆರಳುತ್ತೇನೆ.
ಭಯೋತ್ಪಾದನೆ, ವಿದ್ವಂಸಕತೆ ಮತ್ತು ಮೂಲಭೂತವಾದದಿಂದ ಕೇವಲ ಪ್ರದೇಶಕ್ಕಷ್ಟೇ ಅಲ್ಲ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಆರ್ಥಿಕ ಪ್ರಗತಿಗೆ ಎದುರಾಗಿರುವ ಭೀತಿಯನ್ನು ಒಮ್ಮತದಿಂದ ಗುರುತಿಸಿದ್ದೇವೆ.
ಇದು ನಮ್ಮ ಸಮಾಜ, ನಮ್ಮ ಬದುಕಿನ ಹಾದಿ ಮತ್ತು ಮಾನವತೆಗೂ ಭೀತಿ ಒಡ್ಡಿದೆ.
ಈ ಭೀತಿಯನ್ನು ಹತ್ತಿಕ್ಕಲು ಬ್ರಿಕ್ಸ್ ನಿರ್ಣಾಯಕವಾಗಿ ಮತ್ತು ಒಗ್ಗೂಡಿ ಶ್ರಮಿಸುವ ಅಗತ್ಯಕ್ಕೂ ನಾವು ಒಂದಾಗಿ ಒಪ್ಪಿಗೆ ಸೂಚಿಸಿದ್ದೇವೆ.
ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡುತ್ತಿರುವ ಮೂಲಗಳ ಪತ್ತೆ; ಮತ್ತು ಶಸ್ತ್ರಾಸ್ತ್ರ, ಮದ್ದುಗುಂಡು, ಸಾಧನಗಳ ಪೂರೈಕೆ ಮತ್ತು ತರಬೇತಿ ಸೇರಿದಂತೆ, ಭಯೋತ್ಪಾದನೆಯ ಯಂತ್ರಾಂಶಗಳ ಗುರಿ ಆಪ್ತ ಸಹಯೋಗ ನೀಡುವ ಅಗತ್ಯವನ್ನೂ ನಾವು ಒತ್ತಿ ಹೇಳಿದ್ದೇವೆ
ಯಾರು ಹಿಂಸಾಚಾರದ ಶಕ್ತಿಗಳಿಗೆ ಪ್ರಾಯೋಜನೆ, ಬೆಂಬಲ, ಆಶ್ರಯ ನೀಡಿ ಮತ್ತು ಪೋಷಿಸುತ್ತಾರೋ ಮತ್ತು ಅಂಥ ಭಯೋತ್ಪಾದಕ ಭೀತಿ ಒಡ್ಡುತ್ತಾರೋ ಅವರೇ ಸ್ವತಃ ಭಯೋತ್ಪಾದಕರು ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ.
ಈ ಗಂಭೀರ ಜಾಗತಿಕ ಸವಾಲಿನಲ್ಲಿ ಭಾರತ ಏಕತೆಯ ಚಿಂತನೆ ಮತ್ತು ಉದ್ದೇಶ ಹೊಂದಿಗೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಜಾಗತಿಕ ಆರ್ಥಿಕತೆಯನ್ನು ಮತ್ತೆ ಸರಿಯಾದ ದಾರಿಗೆ ತರುವುದು ನಮ್ಮ ನಿರ್ಣಯದ ಮತ್ತೊಂದು ಗಮನಾರ್ಹ ಅಂಶವಾಗಿದೆ.
2008ರ ಆರ್ಥಿಕ ಸಂಕಷ್ಟದ ಬಳಿಕ ಜಾಗತಿಕ ಆರ್ಥಿಕ ವೃದ್ಧಿಗೆ ಬ್ರಿಕ್ಸ್ ರಾಷ್ಟ್ರಗಳು ನೀಡಿರುವ ಧನಾತ್ಮಕ ಕೊಡುಗೆಯನ್ನು ನಾವು ಗುರುತಿಸಿದ್ದೇವೆ.
ದೀರ್ಘಕಾಲೀನ ಮೂಲಸೌಕರ್ಯ ಯೋಜನೆಗಳಲ್ಲಿ ಸಾರ್ವಜನಿಕ ಹೂಡಿಕೆ, ಬೃಹತ್-ಆರ್ಥಿಕ ನೀತಿಯ ಸಹಯೋಗ, ವೃದ್ಧಿಯ ಚಾಲನೆ ಮತ್ತು ನವೀಕೃತ ಚಟುವಟಿಕೆಯಿಂದ ವಿಶ್ವ ವ್ಯಾಪಾರ ಮತ್ತು ಉತ್ಪಾದನಾ ಉತ್ತೇಜನ ರಾಷ್ಟ್ರಗಳಿಗೆ ಅಗತ್ಯ ಎಂಬುದನ್ನು ನಾವು ಅರಿತಿದ್ದೇವೆ.
ಬಹುಪಕ್ಷೀಯ ವಾಣಿಜ್ಯ ಸ್ವರೂಪದ ಮೂಲೆಗಲ್ಲಾದ ಡಬ್ಲ್ಯುಟಿಓಗೆ ಕೇಂದ್ರೀಯ ಪಾತ್ರವನ್ನು ನಾವು ಪ್ರತಿಪಾದಿಸಿದ್ದೇವೆ. ನಾವು ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನದ ಅಗತ್ಯವನ್ನು ಒಪ್ಪಿಕೊಂಡಿದ್ದೇವೆ.
ನಾವು ಪ್ಯಾರಿಸ್ ಹವಾಮಾನ ಒಪ್ಪಂದದ ಶೀಘ್ರ ಜಾರಿಯನ್ನು ಸ್ವಾಗತಿಸಿದ್ದೇವೆ.
ಈ ವರ್ಷ ಅಕ್ಟೋಬರ್ 2ರಂದು ಇತಿಹಾಸದ ಅಗ್ರಗಣ್ಯ ಪರಿಸರವಾದಿ ಮಹಾತ್ಮಾ ಗಾಂಧೀ ಅವರ ಜಯಂತಿಯಂದು ಈ ಒಪ್ಪಂದ ಸ್ಥಿರೀಕರಿಸಿದ್ದಕ್ಕಾಗಿ ಭಾರತ ಹೆಮ್ಮೆ ಪಡುತ್ತದೆ.
ಬ್ರಿಕ್ಸ್ ನಾಯಕರಾಗಿ, ನಾವು, ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಥ ಮಾರ್ಗದಲ್ಲಿ ಅನುಸರಿಸಲು ಬ್ರಿಕ್ಸ್ ನೊಳಗೆ ಸಾಂಸ್ಥಿಕ ನಿರ್ಮಾಣಕ್ಕೆ ಗಮನ ಹರಿಸಲು ಒಪ್ಪಿಗೆ ನೀಡಿದ್ದೇವೆ.
ನಾವು ನ್ಯೂ ಡೆವಲಪ್ಮೆಂಟ್ ಬ್ಯಾಂಕ್ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅದನ್ನು ಪ್ರಶಂಸಿಸಿದ್ದೇವೆ.
ಎನ್.ಡಿ.ಬಿ. ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಪುನರ್ನವೀಕರಿಸುವ ಇಂಧನ ವಲಯದತ್ತ ಗಮನ ಮುಂದುವರಿಸಬೇಕು ಎಂದೂ ನಾವು ಒಪ್ಪಿಗೆ ಸೂಚಿಸಿದ್ದೇವೆ.
ನಾವು ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆ, ಬ್ರಿಕ್ಸ್ ರೈಲು ಸಂಶೋಧನಾ ಜಾಲ, ಬ್ರಿಕ್ಸ್ ಕ್ರೀಡಾ ಮಂಡಳಿ ಮತ್ತು ವಿವಿಧ ಯುವ ಕೇಂದ್ರಿತ ವೇದಿಕೆಗಳ ಸ್ಥಾಪನೆಯ ನಮ್ಮ ಅಭಿಪ್ರಾಯದಲ್ಲೂ ಒಟ್ಟಾಗಿದ್ದೇವೆ.
ನಾವು ಜಾಗತಿಕ ಹಣಕಾಸು ಮತ್ತು ಆರ್ಥಿಕ ಸ್ವರೂಪದ ಸುಧಾರಣೆಯನ್ನು ಉತ್ತೇಜಿಸುವ ಮತ್ತು ಅಂತಾರಾಷ್ಟ್ರೀಯ ವಿತ್ತ ನಿಧಿಯಲ್ಲಿ ಅಭಿವೃದ್ಧಿಶೀಲ ಮತ್ತು ಹೊರಹೊಮ್ಮುತ್ತಿರುವ ರಾಷ್ಟ್ರಗಳು ತಮ್ಮ ಪಾತ್ರದ ವಿಸ್ತರಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಕ್ಕೊರಲಿನಿಂದ ಮಾತನಾಡಿದ್ದೇವೆ.
ಜಾಗತಿಕ ಹಣಕಾಸು ಸ್ವರೂಪದಲ್ಲಿ ಇರುವ ಕಂದಕ ನಿವಾರಣೆಗೆ ನಾವು ಬ್ರಿಕ್ಸ್ ಶ್ರೇಣೀಕರಣ ಸಂಸ್ಥೆಯ ಸ್ಥಾಪನೆಯನ್ನು ತ್ವರಿತಗೊಳಿಸಲೂ ನಿರ್ಧರಿಸಿದ್ದೇವೆ.
ಜಿ20ರೊಂದಿಗೆ ನಮ್ಮ ಸಹಯೋಗವನ್ನು ಹೆಚ್ಚಿಸಲೂ ನಾವು ನಿರ್ಧರಿಸಿದ್ದೇವೆ.
ಬ್ರಿಕ್ಸ್ ರಾಷ್ಟ್ರಗಳ ನಡುವೆ ಜನರೊಂದಿಗಿನ ಸಂಪರ್ಕ ಮಹತ್ವದ್ದಾಗಿದ್ದು, ಇದು ನಮ್ಮ ಕಾರ್ಯಕ್ರಮದ ಅಂಶವಾಗಿದೆ.
ಈ ನಿಟ್ಟಿನಲ್ಲಿ, ನಾವು ವರ್ಷವಿಡೀ 100ಕ್ಕೂ ಹೆಚ್ಚು ಚಟುವಟಿಕೆ ಆಯೋಜಿಸುತ್ತಿದ್ದೇವೆ ಮತ್ತು ಬ್ರಿಕ್ಸ್ ಅನ್ನು ವೈವಿಧ್ಯಮಯ ಭೌಗೋಳಿಕ ಮತ್ತು ನಮ್ಮ ದೇಶಗಳ ಜನಸಂಖ್ಯೆಯತ್ತ ತೆಗೆದುಕೊಂಡು ಹೋಗುತ್ತಿದ್ದೇವೆ.
ನಮ್ಮ ಮುಂದುವರಿದ ಪ್ರಯತ್ನದಿಂದ ನಮ್ಮ ಜನರೊಂದಿಗಿನ ಆಧಾರ ಸ್ತಂಭದಂಥ ನಮ್ಮ ಸಹಕಾರವನ್ನು ಪಡೆಯಲು ಒಪ್ಪಿದ್ದೇವೆ.
ಶಾಂತಿ ಮತ್ತು ಸುರಕ್ಷತೆಯ ವಿಚಾರಗಳಲ್ಲಿ ನಮ್ಮ ಸಮಾಲೋಚನೆ ಮತ್ತು ಸಹಕಾರವನ್ನು ಬಲಪಡಿಸಲೂ ಬ್ರಿಕ್ಸ್ ಬದ್ಧವಾಗಿದೆ.
ಮಾನ್ಯರೇ ಮತ್ತು ಮಹಿಳೆಯರೇ,
ಗೋವಾ ಶೃಂಗಸಭೆಯ ಮುಖ್ಯಾಂಶಗಳು ಬಿಮ್ ಸ್ಟೆಕ್ ರಾಷ್ಟ್ರಗಳಿಗೆ ಚಾಚುತ್ತದೆ.
ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರಗಳ ಮುಖ್ಯಸ್ಥರು ಮತ್ತು ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್ ಲ್ಯಾಂಡ್ ನಾಯಕರು ಬಿಮ್ ಸ್ಟೆಕ್ ಸ್ಥಾಪನೆಗೆ ಭಾರತದೊಂದಿಗೆ ಸಮಗ್ರವಾಗಿ, 8ನೇ ಬ್ರಿಕ್ಸ್ ಶೃಂಗದಲ್ಲಿ ಗೋವಾದಲ್ಲಿ ವಿಶೇಷ ಅತಿಥಿಗಳಾಗಿದ್ದಾರೆ.
ಪ್ರಥಮ ಬ್ರಿಕ್ಸ್ – ಬಿಮ್ ಸ್ಟೆಕ್ ನಾಯಕರ ಶೃಂಗಸಭೆ ಇಂದು ನಡೆಯಲಿದೆ.
ಇದು ಬ್ರಿಕ್ಸ್ ಮತ್ತು ಬಿಮ್ ಸ್ಟೆಕ್ ನಾಯಕರಿಗೆ ಆಪ್ತ ಪಾಲುದಾರಿಕೆ ಮತ್ತು ಸಹಯೋಗದ ರೂಪುರೇಶೆಗಳ ಬಗ್ಗೆ ಚರ್ಚಿಸಲು ಒಂದು ಅನನ್ಯ ಅವಕಾಶವನ್ನು ಒದಗಿಸಿದೆ.
ಮಾನವಕುಲದ ಸುಮಾರು ಮೂರನೇ ಎರಡರಷ್ಟು ಹೊಂದಿರುವ ಬ್ರಿಕ್ಸ್ ಮತ್ತು ಬಿಮ್ ಸ್ಟೆಕ್ ನಮ್ಮ ಎಲ್ಲ ಜನರ ಅಪಾರ ಸಾಮರ್ಥ್ಯವನ್ನು ಹೊರಹಾಕಿ ದೊಡ್ಡ ಲಾಭ ಪಡೆಯಬಹುದಾಗಿದೆ.
ಕೊನೆಯದಾಗಿ, ಗನೇ ಬ್ರಿಕ್ಸ್ ಶೃಂಗದ ಯಶಸ್ಸಿಗೆ ಬ್ರಿಕ್ಸ್ ರಾಷ್ಟ್ರಗಳಿಂದ ಬಂದಿರುವ ನನ್ನ ಸಹ ನಾಯಕರ ಬೆಂಬಲಕ್ಕಾಗಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ.
ಧನ್ಯವಾದಗಳು.
AKT/HS
Through common vision and collective action, we will create and sustain deeper bonds among BRICS nations: PM @narendramodi at @BRICS2016
— PMO India (@PMOIndia) October 16, 2016
I congratulate China and offer our full support as they take over the Presidency next year: PM @narendramodi at @BRICS2016
— PMO India (@PMOIndia) October 16, 2016
We have just concluded the eighth BRICS Summit. Honour to welcome the BRICS leaders to the beautiful state of Goa: PM @narendramodi
— PMO India (@PMOIndia) October 16, 2016
Our discussions that spread over three sessions today were detailed substantive and productive: PM @narendramodi at @BRICS2016
— PMO India (@PMOIndia) October 16, 2016
Happy to share that we have adopted the Goa Declaration that lays down a comprehensive vision for our cooperation: PM @narendramodi
— PMO India (@PMOIndia) October 16, 2016
Unanimous in recognizing threat that terror, extremism & radicalization present to regional & global peace, stability & econ prosperity: PM
— PMO India (@PMOIndia) October 16, 2016
We recognized the positive contribution of BRICS countries to global economic growth after the 2008 financial crisis: PM @narendramodi
— PMO India (@PMOIndia) October 16, 2016
We agreed to focus on institution building within the BRICS as an effective way to pursue our development agenda: PM @narendramodi
— PMO India (@PMOIndia) October 16, 2016
The vitality of people-to-people contacts among the BRICS countries has been a point of emphasis for us: PM @narendramodi at @BRICS2016
— PMO India (@PMOIndia) October 16, 2016
A highlight of the Goa Summit will be the outreach to the BIMSTEC countries: PM @narendramodi at @BRICS2016
— PMO India (@PMOIndia) October 16, 2016