ಪಿಎಂಇಂಡಿಯಾ
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನ ಶ್ರೀ ಓಮರ್ ಅಬ್ದುಲ್ಲಾ, ಐ.ಎನ್.ಸಿ.ಯ ಗುಲಾಮ್ ಅಹ್ಮದ್ ಮಿರ್, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ನ ಶ್ರೀ ಹಕೀಂ ಮೊಹಮದ್, ಸಿಪಿಎಂ ನ ಶ್ರೀ ಎಂ.ವೈ. ತರ್ಗಮಿ, ಡೆಮೋಕ್ರಾಟಿಕ್ ಪಾರ್ಟಿ ನ್ಯಾಷನಲಿಸ್ಟ್ ನ ಶ್ರೀ ಗುಲಾಂ ಹಸನ್ ಮಿರ್ ಮತ್ತು ಇತರರನ್ನು ಒಳಗೊಂಡ ಜಮ್ಮು ಮತ್ತು ಕಾಶ್ಮೀರದ ಪ್ರತಿಪಕ್ಷಗಳ ನಾಯಕರುಗಳ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಜಮ್ಮು ಕಾಶ್ಮೀರದಲ್ಲಿ ತಲೆದೋರಿರುವ ಪರಿಸ್ಥಿಯ ಬಗ್ಗೆ ಚರ್ಚಿಸಿತು. ಈ ಚರ್ಚೆಯು ಮುಕ್ತ ವಾತಾವರಣದಲ್ಲಿ ನಡೆಯಿತು.
ರಾಜ್ಯದಲ್ಲಿ ತಲೆದೋರಿರುವ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಯವರು ತೀವ್ರ ಕಳವಳ ಮತ್ತು ವೇದನೆ ವ್ಯಕ್ತಪಡಿಸಿದರು. ಇತ್ತೀಚಿನ ಗಲಭೆಯಲ್ಲಿ ಪ್ರಾಣ ಕಳೆದುಕೊಂಡವರು ಕೂಡ ನಮ್ಮ ಮತ್ತು ನಮ್ಮ ರಾಷ್ಟ್ರದ ಭಾಗವಾಗಿದ್ದಾರೆ. ಪ್ರಾಣ ಕಳೆದುಕೊಂಡವರು ನಮ್ಮ ಯುವಕರು, ಭದ್ರತಾ ಸಿಬ್ಬಂದ ಅಥವಾ ಪೊಲೀಸ್ ಯಾರೇ ಆಗಿರಲಿ, ಅದು ನಮ್ಮನ್ನು ಬಾಧಿಸುತ್ತದೆ ಎಂದರು. ಜಮ್ಮು ಮತ್ತು ಕಾಶ್ಮೀರದೊಂದಿಗೆ ತಮ್ಮ ಸರ್ಕಾರ ನಿಲ್ಲುತ್ತದೆ ಎಂಬುದನ್ನು ಅವರು ತಿಳಿಸಿದರು ಮತ್ತು ಎಲ್ಲ ರಾಜಕೀಯ ಪಕ್ಷಗಳೂ ಜನರಿಗೆ ಸ್ಪಂದಿಸಿ ಇದನ್ನು ತಿಳಿಸಬೇಕು ಎಂದರು. ರಾಜ್ಯದ ಮತ್ತು ಅದರ ಜನರ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು ಮತ್ತು ಸಹಜ ಸ್ಥಿತಿಗೆ ತರುವಂತೆ ಮನವಿ ಮಾಡಿದರು.
ಸಭೆಯಲ್ಲಿ ವ್ಯಕ್ತವಾದ ರಚನಾತ್ಮಕ ಸಲಹೆಗಳಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು, ತಮ್ಮ ಸರ್ಕಾರ ರಾಜ್ಯದ ಜನತೆಯ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ತಿಳಿಸಿದರು.
ಮಾತುಕತೆಗೆ ಒತ್ತು ನೀಡಿದ ಅವರು, ನಾವು ಸಮಸ್ಯೆಗಳಿಗೆ ಸಂವಿಧಾನದ ಚೌಕಟ್ಟಿನೊಳಗೆ ಶಾಶ್ವತವಾದ ಮತ್ತು ಸ್ಥಿರವಾದ ಪರಿಹಾರ ಹುಡುಕಲು ಬಯಸುತ್ತೇವೆ ಎಂದರು. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಶ್ರಮಿಸಿ, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಪರಿಹಾರ ಹುಡಕಬೇಕು ಎಂದರು.
Had detailed discussions on the situation in J&K with a delegation of Opposition parties from the state. https://t.co/uVKC6YelTI
— Narendra Modi (@narendramodi) August 22, 2016
I appreciate the constructive suggestions given during today’s meting. All parties must work together to find a solution to J&K’s problems.
— Narendra Modi (@narendramodi) August 22, 2016