Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಿಇಆರ್ಟಿ –ಇನ್ ಇಂಡಿಯಾ ಮತ್ತು ಸಿಇಆರ್ಟಿ –ಯುಕೆ ನಡುವಿನ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿ.ಇ.ಆರ್.ಟಿ.-ಇನ್) ಮತ್ತು ಯು.ಕೆ.ಯ ಸಂಪುಟ ಕಚೇರಿ ಸಚಿವಾಲಯ (ಪ್ರತಿನಿಧಿಸಿದವರು ಸಿಇಆರ್ಟಿ –ಯುಕೆ, ಸೈಬರ್ ಭದ್ರತೆ ಕುರಿತ ಸಂಪುಟ ಕಚೇರಿಯ ಘಟಕ)ದ ನಡುವೆ 2016ರ ಮೇ 20ರಂದು ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು.

ಈ ಒಪ್ಪಂದವು ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವೆ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜ್ಞಾನ ವಿನಿಮಯ ಮತ್ತು ಪತ್ತೆಯಲ್ಲಿನ ಅನುಭವ, ಪರಿಹಾರ ಮತ್ತು ತಡೆ ಕುರಿತಂತೆ ಹೆಚ್ಚಿನ ಸಹಕಾರವನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ.

2015ರ ನವೆಂಬರ್ ನಲ್ಲಿ ಮಾನ್ಯ ಪ್ರಧಾನಮಂತ್ರಿಯವರು ಯು.ಕೆ.ಗೆ ಹೋಗಿದ್ದಾಗ ಸೈಬರ್ ಭದ್ರತೆ ಕಾರ್ಯಕ್ರಮ ಪಟ್ಟಿಯಲ್ಲಿ ಪ್ರಮುಖ ವಿಚಾರವಾಗಿತ್ತು. ಈ ಎಂ.ಓ.ಯು.ನಿಂದ ಪಾಲ್ಗೊಳ್ಳುವ ರಾಷ್ಟ್ರಗಳು ಸೈಬರ್ ದಾಳಿ, ಸೈಬರ್ ಭದ್ರತೆ ಸ್ಪಂದನ ಪ್ರಕರಣಗಳು ಮತ್ತು ಸೈಬರ್ ದಾಳಿಯನ್ನು ತಡೆಯುವುದಕ್ಕೆ ಪರಿಹಾರ ಕುರಿತಂತೆ ತಾಂತ್ರಿಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಜಾರಿಯಲ್ಲಿರುವ ಸೈಬರ್ ಭದ್ರತೆ ನೀತಿಗಳು ಮತ್ತು ಉತ್ತಮ ಪದ್ಧತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನೂ ಅವರು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಈ ತಿಳಿವಳಿಕೆ ಒಪ್ಪಂದವು ಎರಡೂ ರಾಷ್ಟ್ರಗಳಿಗೆ ಸೈಬರ್ ಪ್ರದೇಶ, ಸಾಮರ್ಥ್ಯ ವರ್ಧನೆ ಮತ್ತು ಅವುಗಳ ನಡುವಿನ ಸಂಬಂಧ ಸುಧಾರಣೆ ಬಲಪಡಿಸಲು ನೆರವಾಗಲಿದೆ.

ಈ ಮುನ್ನ ಸಿಇಆರ್ಟಿ –ಇನ್ ಏಳು ರಾಷ್ಟ್ರಗಳಾದ –ಕೊರಿಯಾ, ಕೆನಡಾ, ಆಸ್ಟ್ರೇಲಿಯಾ, ಮಲೇಷಿಯಾ, ಸಿಂಗಾಪೂರ್, ಜಪಾನ್ ಮತ್ತು ಉಜ್ಬೇಕಿಸ್ತಾನ್ ನ ತನ್ನ ಸಹವರ್ತಿ / ಇದೇ ರೀತಿಯ ಸಂಸ್ಥೆಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹ ಶಾಂಘೈ ಸಹಕಾರ ಸಂಸ್ಥೆಯೊಂದಿಗೆ ಸೈಬರ್ ಭದ್ರತೆ ಕುರಿತ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸರಿ ಹಾಕಿದೆ.