Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರಿಂದ ವಾರಾಣಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ

ಪ್ರಧಾನಮಂತ್ರಿಯವರಿಂದ ವಾರಾಣಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಾಣಸಿಯಲ್ಲಿಂದು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನಾವರಣ ಮಾಡಿದರು.
ಇದರಲ್ಲಿ 765/400ಕೆವಿ ಜಿಐಎಸ್ ವಾರಾಣಸಿ ವಿದ್ಯುತ್ ಉಪ ಕೇಂದ್ರ; ವಾರಾಣಸಿ ನಗರ ಅನಿಲ ವಿತರಣೆ ಯೋಜನೆಯ ಶಂಕುಸ್ಥಾಪನೆ; ವಾರಾಣಸಿ ಅಂಚೆ ವಲಯ ಉದ್ಘಾಟನೆ; ಡೀಸೆಲ್ ಲೋಕೋಮೋಟಿವ್ ಕಾಮಗಾರಿ (ಹಂತ 1)ರ ವಿಸ್ತರಣೆ; ಅಲಹಾಬಾದ್-ವಾರಾಣಸಿ ರೈಲ್ವೆ ಮಾರ್ಗದಲ್ಲಿ ಎರಡನೇ ಹಳಿ ಜೋಡಣೆ ಮತ್ತು ವಿದ್ಯುದ್ದೀಕರಣಕ್ಕೆ ಶಿಲಾನ್ಯಾಸ; ಮತ್ತು ರಾಜತಲಾಬ್ ರೈಲು ನಿಲ್ದಾಣದಲ್ಲಿ ನಾಶವಾಗುವ ಸರಕುಗಳ ಕೇಂದ್ರ ಸ್ಥಾಪನೆಯೂ ಸೇರಿದೆ.

ಪ್ರಧಾನಮಂತ್ರಿ ಅವರು ಸುಕನ್ಯಾ ಸಮೃದ್ಧಿ ಯೋಜನೆಯ ಆಯ್ದ ಫಲಾನುಭವಿಗಳನ್ನು ಸನ್ಮಾನಿಸಿದರು, ಮತ್ತು ಉಜ್ವಲ ಯೋಜನೆಯ ಆಯ್ದ ಫಲಾನುಭವಿಗಳಿಗೆ ಎಲ್.ಪಿ.ಜಿ. ಸಂಪರ್ಕ ವಿತರಿಸಿದರು. ವಾರಾಣಸಿ ನಗರದ ನೆನಪಿನ ಅಂಚೆ ಚೀಟಿಯನ್ನೂ ಅವರೂ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ದೀಪಾವಳಿಯ ಸಂದರ್ಭದಲ್ಲಿ ತಮ್ಮ ಶುಭ ಸಂದೇಶಗಳನ್ನು ಯೋಧರಿಗೆ ಕಳುಹಿಸುವಂತೆ ಮನವಿ ಮಾಡಿದರು.

ಕೇಂದ್ರ ಸರ್ಕಾರ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಗಮನ ಹರಿಸಿದೆ ಎಂದ ಅವರು, ತಾವು ಕೇವಲ ಯೋಜನೆಯ ಶಂಕುಸ್ಥಾಪನೆ ಮಾಡುವುದಷ್ಟೇ ಅಲ್ಲ, ಯೋಜನೆಗಳು ಕಾಲಮಿತಿಯೊಳಗೆ ಉದ್ಘಾಟನೆ ಆಗುವುದನ್ನೂ ಖಾತ್ರಿ ಪಡಿಸುವುದಾಗಿ ಹೇಳಿದರು. ಯೋಜನೆಗಳ ಸೂಕ್ತ ಅನುಷ್ಠಾನ ಮತ್ತು ಅದು ಜನ ಜೀವನಕ್ಕೆ ಆಪ್ತವಾಗಬೇಕು ಎಂಬುದು ಸರ್ಕಾರದ ಗುರಿಯಾಗಿದೆ ಎಂದು ಪ್ರಧಾನಿ ಹೇಳಿದರು.
ಪರಿಸರ ಸ್ನೇಹಿ ಉಪಕ್ರಮಗಳ ಬಗ್ಗೆ ಮಾತನಾಡಿದ ಪ್ರಧಾನಿ, ಸರ್ಕಾರ ಭಾರತೀಯ ರೈಲ್ವೆಯ ಬಗ್ಗೆ ನೂತನ ದೃಷ್ಟಿಕೋನ ಹೊಂದಿದೆ, ಅದು ಆರ್ಥಿಕ ಪ್ರಗತಿಯ ಚಾಲಕಶಕ್ತಿಯಾಗಿ ಹೊರಹೊಮ್ಮಬಹುದು ಎಂದರು.


***

AKT/HS