Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿತ್ವವನ್ನು ಸುಧಾರಿಸುವ ಮತ್ತು ಜ್ಞಾನ ವಿನಿಮಯಕ್ಕೆ ಅವಕಾಶ ನೀಡಲು ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ.ಓ.ಆರ್.ಡಿ.) ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಓ.) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿತ್ವವನ್ನು ಸುಧಾರಿಸುವ ಮತ್ತು ಜ್ಞಾನ ವಿನಿಮಯಕ್ಕೆ ಅವಕಾಶ ನೀಡಲು ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ.ಓ.ಆರ್.ಡಿ.) ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಓ.) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಸಹಯೋಗಕ್ಕೆ ಚೌಕಟ್ಟು ಒದಗಿಸುವ ಜಂಟಿ ತಾಂತ್ರಿಕ ಮತ್ತು ದಕ್ಷಿಣ-ದಕ್ಷಿಣ ಸಹಕಾರ ಅಂತರ ಸರ್ಕಾರೀಯ ತಿಳಿವಳಿಕೆ ಒಪ್ಪಂದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವಾಲಯ (ಎಂ.ಓ.ಆರ್.ಡಿ.) ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಓ.) ಅಂಕಿತ ಹಾಕಲಿದ್ದು, ಇದು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿತ್ವವನ್ನು ಸುಧಾರಿಸುವ ಮತ್ತು ಜ್ಞಾನ ವಿನಿಮಯಕ್ಕೆ ಅವಕಾಶ ನೀಡಲಿದೆ.

ಈ ತಿಳಿವಳಿಕೆ ಒಪ್ಪಂದವು ಭೇಟಿ ಮತ್ತು ಮಾತುಕತೆಯ ವಿನಿಮಯ ಮತ್ತು ಉತ್ತಮ ಪದ್ಧತಿಗಳ ಕಲಿಕಾ ಕೇಂದ್ರ ಸ್ಥಾಪನೆಯ ಮೂಲಕ ದಕ್ಷಿಣ –ದಕ್ಷಿಣ ಸಹಕಾರ ವ್ಯವಸ್ಥೆಯನ್ನು ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡಿಎವೈ –ಎನ್.ಆರ್.ಎಲ್.ಎಂ.)ದ ಅನುಭವ ಒದಗಿಸುತ್ತದೆ.

ಇದು ಗ್ರಾಮೀಣ ಜನಸಂಖ್ಯೆಯ ಜೀವನೋಪಾಯವನ್ನು ಶೃಂಗೀಯವಾಗಿ ಮೇಲ್ಮುಖವಾಗಿ ಬಲಪಡಿಸುತ್ತದೆ ಅದಕ್ಕೆ ಡಿಎವೈ –ಎನ್.ಆರ್.ಎಲ್.ಎಂ.ಬೆಂಬಲವಿರುತ್ತದೆ, ಇದು ಪ್ರಮುಖ ಬೆಳೆಗಳು ಮತ್ತು ಕೃಷಿ ಕೈಗಾರಿಕಾ ಉತ್ಪನ್ನಗಳು, ಉದ್ಯೋಗ ವೈವಿಧ್ಯತೆ, ಕೌಶಲ ವರ್ಧನೆ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಯುವಕರ ಕೌಶಲ ವರ್ಧನೆ, ಸಾಮಾಜಿಕ ಸುರಕ್ಷತೆಯ ಬಲಪಡಿಸುವಿಕೆ, ಅಪಾಯದ ನಿರ್ವಹಣಾ ವ್ಯವಸ್ಥೆ ಮತ್ತು ಹೆಚ್ಚಿನ ಸ್ಥಿತಿಸ್ಥಾಪಕತ್ವ ಕಟ್ಟಡ, ಅದರಲ್ಲೂ ವಿಶೇಷವಾಗಿ ಶುಷ್ಕ ಮತ್ತು ವಿಪತ್ತು ಅಪಾಯ ಪೀಡಿತ ಜಿಲ್ಲೆಗಳಲ್ಲಿ ನಿರ್ಮಾಣಕ್ಕೆ ಸಮಗ್ರ ಮತ್ತು ಸುಸ್ಥಿರ ಮೌಲ್ಯ ಸರಪಣಿ ಅಭಿವೃದ್ಧಿಗೆ ನೆರವಾಗುತ್ತದೆ.

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಗ್ರಾಮೀಣ ಬಡಜನರಿಗೆ ನೈಸರ್ಗಿಕ ಸಂಪನ್ಮೂಲದ ಲಭ್ಯತೆ ಮತ್ತು ಸಾಮಾಜಿಕ ಸುರಕ್ಷತೆಯ ಸುಸ್ಥಿರ ಬಳಕೆಯಂಥ ಚಟುವಟಿಕೆಗಳ ಮೂಲಕ ಗ್ರಾಮೀಣ ಬಡತನವನ್ನು ತಗ್ಗಿಸುವ ನಿಲುವಿಗೆ ಬೆಂಬಲ ನೀಡಲು ಸಮಾನ ಹಿತದ ಚಟುವಟಿಕೆಗಳ ಸಹಯೋಗವನ್ನು ಈ ತಿಳಿವಳಿಕೆ ಒಪ್ಪಂದ ಒದಗಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಮಾತುಕತೆ ಮತ್ತು ಅನುಭವದ ಹಂಚಿಕೆಗೆ ಭೇಟಿ ವಿನಿಮಯಕ್ಕೂ ಅವಕಾಶ ಕಲ್ಪಿಸುತ್ತದೆ.

ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಡಿಎವೈ –ಎನ್.ಆರ್.ಎಲ್.ಎಂ.) ಗ್ರಾಮೀಣ ಬಡತನವನ್ನು ತಗ್ಗಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸಾಮಾಜಿಕ ಕ್ರೋಢೀಕರಣ, ಆರ್ಥಿಕ ಪೂರಣ ಮತ್ತು ಸುಸ್ಥಿರ ಜೀವನೋಪಾಯ ಉತ್ತೇಜನದ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯ ದೇಶದಾದ್ಯಂತ ಜಾರಿಗೊಳಿಸಿದೆ. ಡಿಎವೈ –ಎನ್.ಆರ್.ಎಲ್.ಎಂ. ಗ್ರಾಮೀಣ ಬಡಜನರಿಗೆ ಸುಸ್ಥಿರ ಜೀವನೋಪಾಯ ವರ್ಧನೆಗಳು ಮತ್ತು ಹಣಕಾಸು ಸೇವೆಗಳಿಗೆ ಸುಧಾರಿತ ಸಂಪರ್ಕ ಕಲ್ಪಿಸಿ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡಿ ಸಮರ್ಥ ಮತ್ತು ಸಮರ್ಥ ಸಾಂಸ್ಥಿಕ ವೇದಿಕೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಡಿಎವೈ –ಎನ್.ಆರ್.ಎಲ್.ಎಂ. ಗಮನ ಹರಿಸಿರುವ ಮತ್ತೊಂದು ಕ್ಷೇತ್ರ, ಪ್ರಸ್ತುತ ಕೃಷಿ ಮತ್ತು ಕೃಷಿಯೇತರ ವಲಯಗಳಲ್ಲಿ ಗ್ರಾಮೀಣ ಬಡಜನರಿಗೆ ಇರುವ ಜೀವನೋಪಾಯ ಆಧಾರಗಳನ್ನು ಉತ್ತೇಜಿಸುವುದು ಮತ್ತು ಸುಸ್ಥಿರವಾದ ಆದಾಯವು ಬಡತನ ನಿರ್ಮೂಲನೆಗೆ ಮತ್ತು ಹೆಚ್ಚಿನ ಆದಾಯ ಸೃಷ್ಟಿಗೆ ಮೌಲ್ಯಯುತ ಸಾಧನವಾಗಿದ್ದು, ಕೃಷಿ ಪದ್ಧತಿಗಳ ಜ್ಞಾನವನ್ನು ಮೇಲ್ದರ್ಜೆಗೇರಿಸುವುದು ಮತ್ತು ವಿನಿಮಯ ಮಾಡಿಕೊಳ್ಳುವುದು.

ಡಿಎವೈ –ಎನ್.ಆರ್.ಎಲ್.ಎಂ. 2015ರ ನಂತರದ ಕಾರ್ಯಕ್ರಮಗಳ ಗುರಿ ಸಾಧನೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ಡಿಜಿಗಳು) ಹಾಗೂ ಗ್ರಾಮೀಣ ಬಡತನ ತಗ್ಗಿಸುವುದಕ್ಕೆ ಸಂಬಂಧಿಸಿದ ಇತರ ಜಾಗತಿಕ ಆದ್ಯತೆಗಳು, ಸುಸ್ಥಿರ ಗ್ರಾಮೀಣ ಜೀವನೋಪಾಯ, ಗ್ರಾಮೀಣ ಉದ್ಯೋಗ, ಸಾಮಾಜಿಕ ಸುರಕ್ಷತೆ, ಉತ್ತಮ ಆಡಳಿತ ಮತ್ತು ಲಿಂಗ ಸಮಾನತೆಯ ಮಹತ್ವವನ್ನೂ ಗುರುತಿಸಿದೆ. ಎಫ್.ಎ.ಓ.ನ ಗ್ರಾಮೀಣ ಬಡತನ ತಗ್ಗಿಸುವ ಕಾರ್ಯಕ್ರಮಗಳು ಗ್ರಾಮೀಣ ಬಡಜನರು ಎದುರಿಸುತ್ತಿರುವ ತೊಡಕಿನಿಂದ ಹೊರಬರಲು ಕೃಷಿ ವಲಯವನ್ನು ಸರಿಯಾದ ರೀತಿಗೆ ತರುವ ಮೂಲಕ ಹಾಗೂ ವಿಸ್ತೃತ ಗ್ರಾಮೀಣ ಅಭಿವೃದ್ದಿ ಉದ್ದೇಶದೊಂದಿಗೆ ಆಹಾರ ಭದ್ರತೆ ನೀತಿಯ ಮೂಲಕ ಸರ್ಕಾರ ಮತ್ತು ರಾಷ್ಟ್ರೀಯ ಬಾಧ್ಯಸ್ಥರಿಗೆ ಬೆಂಬಲ ನೀಡುತ್ತದೆ.

ಈ ತಿಳಿವಳಿಕೆ ಒಪ್ಪಂದವು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಗ್ರಾಮೀಣರಿಗೆ ನೈಸರ್ಗಿಕ ಸಂಪನ್ಮೂಲದ ಲಭ್ಯತೆ, ಸಾಮಾಜಿಕ ಸುರಕ್ಷತೆಯ ಸುಸ್ಥಿರ ಬಳಕೆಯನ್ನು ಗುರಿಯಾಗಿಸಿಕೊಂಡ ಚಟುವಟಿಕೆಗಳ ಮೂಲಕ ಗ್ರಾಮೀಣ ಬಡತನ ತಗ್ಗಿಸುವ ಸಮಗ್ರ ದೃಷ್ಟಿಕೋನದ ಸಮಾನ ಹಿತದ ಕಾರ್ಯಚಟುವಟಿಕೆಗಳಿಗೆ ಬೆಂಬಲ ನೀಡಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಎಫ್.ಎ.ಓ. ನಡುವೆ ನಿರಂತರವಾದ ಸಹಯೋಗಕ್ಕೆ ಚೌಕಟ್ಟು ಒದಗಿಸುತ್ತದೆ. ಈ ತಿಳಿವಳಿಕೆ ಒಪ್ಪಂದವು ಅರಿವು ಮತ್ತು ಅನುಭವದ ಹಂಚಿಕೆಗೆ ಭೇಟಿಯ ವಿನಿಮಯಕ್ಕೂ ಅವಕಾಶ ಕಲ್ಪಿಸುತ್ತದೆ.

AKT/VBA/SH