Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗಿರ್ ಮತ್ತು ಏಷ್ಯಾಟಿಕ್ ಸಿಂಹಗಳ ಕುರಿತಾದ ಪರಿಮಲ್ ನಾಥ್ವಾನಿ ಅವರ ಪುಸ್ತಕವನ್ನು ಪ್ರಧಾನಮಂತ್ರಿ ಸ್ವೀಕರಿಸಿದರು


ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿರುವ ಏಷ್ಯಾಟಿಕ್ ಸಿಂಹಗಳ ಕುರಿತು ರಾಜ್ಯಸಭಾ ಸದಸ್ಯರಾದ ಪರಿಮಲ್ ನಾಥ್ವಾನಿ ಅವರು ಬರೆದಿರುವ ಕಾಫಿ ಟೇಬಲ್ ಪುಸ್ತಕ “ಕಾಲ್ ಆಫ್ ದಿ ಗಿರ್” ನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದರು. 

ದೆಹಲಿಯಲ್ಲಿ ಶ್ರೀ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಈ ಪುಸ್ತಕವನ್ನು ನೀಡಿದ್ದಾರೆ.

ಇದನ್ನು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿ ಮೋದಿಯವರು ಹಂಚಿಕೊಂಡಿದ್ದಾರೆ.

“ಸೋದರ ಪರಿಮಲ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಯಿತು.  ಗಿರ್ ಉದ್ಯಾನವನದಲ್ಲಿರುವ ಏಷ್ಯಾಟಿಕ್ ಸಿಂಹಗಳ ಕುರಿತು ನೀವು ಬರೆದಿರುವ ಪುಸ್ತಕ ಪಡೆದಿದ್ದು ಖುಷಿಯಾಯಿತು. ವನ್ಯಜೀವಿಗಳ ಬಗ್ಗೆ ನೀವು ಹೊಂದಿರುವ ಪ್ರೀತಿ ಮತ್ತು ಕಾಳಜಿ ಬಗ್ಗೆ ನಾನು ತಿಳಿದಿದ್ದೇನೆ. ಗಿರ್ ನಲ್ಲಿರುವ ಏಷ್ಯಾಟಿಕ್ ಸಿಂಹಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಖಂಡಿತವಾಗಿಯೂ ಈ ಪುಸ್ತಕ ಸಹಾಯವಾಗುತ್ತದೆ.” @mpparimal” ಎಂದು ಬರೆದುಕೊಂಡಿದ್ದಾರೆ.

 

 

*****