Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ನಿಧಿ ಮುಂದುವರಿಕೆಗೆ ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸಣ್ಣ ಉದ್ಯಮ ಘಟಕಗಳಿಗೆ ಸಾಲ ಖಾತ್ರಿ ನಿಧಿ (ಸಿಜಿಎಫ್ಎಂಯು) ಅನ್ನು 31.03.2031ರವರೆಗೆ ಐದು ವರ್ಷಗಳ ಅವಧಿಗೆ ಮುಂದುವರಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಸಾಲ ನೀಡುವ ಸಂಸ್ಥೆಗಳಿಗೆ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ ಲಿಮಿಟೆಡ್ (ಎನ್‌ಸಿಜಿಟಿಸಿ) ಮೂಲಕ ಸಾಲ ಖಾತರಿ ರಕ್ಷಣೆಯನ್ನು ಒದಗಿಸುತ್ತದೆ.

ಸೆಪ್ಟೆಂಬರ್ 2026ರ ಹೊತ್ತಿಗೆ, ‘ಪಿಎಂ ಮುದ್ರಾ’ ಯೋಜನೆ ಪ್ರಾರಂಭವಾದಾಗಿನಿಂದ ಸಾಲ ನೀಡುವ ಸಂಸ್ಥೆಗಳಿಂದ 43.34 ಲಕ್ಷ ಕೋಟಿ ರೂ.ಗಳ ಮೊತ್ತದ 60.36 ಕೋಟಿಗೂ ಹೆಚ್ಚು ಸಾಲಗಳನ್ನು ಮಂಜೂರು ಮಾಡಲಾಗಿದೆ. ಜನವರಿ 2016ರಲ್ಲಿ ಪ್ರಾರಂಭಿಸಲಾದ ‘ಸಿಜಿಎಫ್ಎಂಯು’ ದೇಶದಲ್ಲಿ ‘ಪಿಎಂಎಂವೈ’ ಸಾಲಗಳ ಬೆಳವಣಿಗೆಯನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ವೇಗವರ್ಧಕವಾಗಿ ಕಾರ್ಯನಿರ್ವಹಿಸಿದೆ.

ಯೋಜನೆಯ ಪ್ರಮುಖ ವೈಶಿಷ್ಟ್ಯಗಳು:

  • ಈ ಕೆಳಗಿನ ಸಾಲ ಸೌಲಭ್ಯಗಳಿಗಾಗಿ ಸಾಲ ನೀಡುವ ಸಂಸ್ಥೆಗಳಿಗೆ (ಎಲ್ಐ) ಖಾತರಿ ನೀಡುವುದು ನಿಧಿಯ ಉದ್ದೇಶವಾಗಿದೆ:
  • ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಅರ್ಹ ಸಣ್ಣ ಉದ್ಯಮಗಳಿಗೆ 20 ಲಕ್ಷ ರೂ.ವರೆಗೆ ಸಾಲ ನೀಡಲಾಗಿದೆ.
  • ‘ಪ್ರಧಾನ ಮಂತ್ರಿ ಜನ್ ಧನ್’ಯೋಜನೆ (ಪಿಎಂಜೆಡಿವೈ) ಖಾತೆಗಳ ಅಡಿಯಲ್ಲಿ ಬ್ಯಾಂಕುಗಳಿಂದ 10,000 ರೂ.ವರೆಗೆ ಓವರ್ಡ್ರಾಫ್ಟ್; ಮತ್ತು
  • 10 ಲಕ್ಷ ರೂ.ನಿಂದ 20 ಲಕ್ಷ ರೂ. ವರೆಗೆ ಪೋರ್ಟ್‌ಫೊಲಿಯೊ ಹೊಂದಿರುವ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ನೀಡಲಾಗುವ ಸಾಲಗಳು.
  • ಖಾತರಿ ವ್ಯಾಪ್ತಿ: ದುಡಿಯುವ ಬಂಡವಾಳದ ಮಿತಿಗಳು ಮತ್ತು ಅವಧಿ ಸಾಲ ಖಾತೆಗಳಿಗೆ ಬಾಕಿ ಇರುವ ಮೊತ್ತದ ಸಂದರ್ಭದಲ್ಲಿ ವಿತರಣೆಯ ಮೊತ್ತಕ್ಕೆ ಲಿಂಕ್ ಮಾಡಲಾಗಿದೆ.
  • ಖಾತರಿ ಶುಲ್ಕ: ಖಾತರಿ ಶುಲ್ಕವನ್ನು ವಾರ್ಷಿಕ ಶೇ. 1 ರಿಂದ ವಾರ್ಷಿಕ ಶೇ. 0.75ಕ್ಕೆ ಇಳಿಕೆ ಮಾಡಲಾಗಿದೆ. ಸ್ವಸಹಾಯ ಸಂಘಗಳಿಗೆ (ಎಸ್‌ಎಚ್‌ಜಿ) ಯಾವುದೇ ಬದಲಾವಣೆ ಇಲ್ಲ; ಮೊದಲ ವರ್ಷಕ್ಕೆ ಶೇ. 0.25 ಮತ್ತು ನಂತರದ ವರ್ಷಗಳಲ್ಲಿ ಶೇ.0.50 ಖಾತರಿ ಶುಲ್ಕವನ್ನು ಪಾವತಿಸುವುದು ಮುಂದುವರಿಯುತ್ತದೆ.
  • ಯೋಜನೆಯ ಅವಧಿ: 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಅಂದರೆ ಆರ್ಥಿಕ ವರ್ಷ 2026-27 ರಿಂದ ಆರ್ಥಿಕ ವರ್ಷ 2030-31 ರವರೆಗೆ ‘ಪಿಎಂಎಂವೈ’ ಅಡಿಯಲ್ಲಿ ನೀಡಲಾಗುವ ಎಲ್ಲಾ ಸಾಲಗಳಿಗೆ ಈ ಯೋಜನೆ ಅನ್ವಯಿಸುತ್ತದೆ.

ಪರಿಣಾಮ:

  • ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ನೀಡುವ ಅಡಮಾನ ರಹಿತ ಸಾಲಗಳು, ಈ ಹಿಂದೆ ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯಿಂದ ಸಾಲ ಪಡೆಯಲು ಸಾಧ್ಯವಾಗದ ಸಂಪೂರ್ಣ ಹೊಸ ಪೀಳಿಗೆಯ ಉದ್ಯಮಿಗಳನ್ನು ಸೃಷ್ಟಿಸಿದೆ.
  • ‘ಸಿಜಿಎಫ್ಎಂಯು’ ಯೋಜನೆಯ ವಿಸ್ತರಣೆಯು ಮುಂದಿನ 5 ವರ್ಷಗಳಲ್ಲಿ 12.6 ಲಕ್ಷ ಕೋಟಿ ರೂ.ಗಳ ಸಾಲವನ್ನು ಸಕ್ರಿಯಗೊಳಿಸುತ್ತದೆ
  • ಈ ಯೋಜನೆಯು ಯುವ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಸ್ಥಾಪಿಸಲು ಮತ್ತು ಬೆಳೆಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

 

*****