ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು, ನೋಯ್ಡಾ ಮೆಟ್ರೋ ರೈಲು ಯೋಜನೆಯ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗವನ್ನು, ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗೆ 5 ಎಲಿವೇಟೆಡ್ ನಿಲ್ದಾಣಗಳನ್ನು ಹೊಂದಿರುವ 8.449 ಕಿ.ಮೀ. ಉದ್ದಕ್ಕೆ ವಿಸ್ತರಿಸಲು ಅನುಮೋದನೆ ನೀಡಿದೆ. ಈ ಮಾರ್ಗವು ಕಾರ್ಯಾಚರಣೆಗೆ ಬಂದ ನಂತರ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರಗಳು ಒಟ್ಟು 71.878 ಕಿಮೀ ಸಕ್ರಿಯ ಮೆಟ್ರೋ ರೈಲು ಜಾಲವನ್ನು ಹೊಂದಲಿವೆ.
ಪ್ರಯೋಜನಗಳು ಮತ್ತು ಅಭಿವೃದ್ಧಿಗೆ ಉತ್ತೇಜನ:
ನೋಯ್ಡಾ ಮೆಟ್ರೋ ಯೋಜನೆಯ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗವನ್ನು ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗೆ ವಿಸ್ತರಿಸುವುದು, ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಈ ಯೋಜನೆಯು ನಗರದಲ್ಲಿನ ಮೆಟ್ರೋ ರೈಲು ಜಾಲದ ಬೃಹತ್ ವಿಸ್ತರಣೆಯಾಗಿ ಕಾರ್ಯನಿರ್ವಹಿಸಲಿದೆ.
ಹೆಚ್ಚುವ ಸಂಪರ್ಕ ಸೌಲಭ್ಯ:
ನೋಯ್ಡಾ ಮೆಟ್ರೋ ಯೋಜನೆಯ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗವನ್ನು, ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗೆ ವಿಸ್ತರಿಸುವುದರಿಂದ, ಸುಮಾರು 8.449 ಕಿ.ಮೀ. ಉದ್ದದ ಹೊಸ ಮೆಟ್ರೋ ಮಾರ್ಗಗಳು ಸೇರ್ಪಡೆಯಾಗಲಿವೆ. ಇದು ಪ್ರಸ್ತುತ ಸಮರ್ಥ ಸಂಪರ್ಕದ ಕೊರತೆಯನ್ನು ಎದುರಿಸುತ್ತಿರುವ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರಗಳಲ್ಲಿ ಸಾರಿಗೆ ವ್ಯವಸ್ಥೆಯನ್ನು ಗಮನಾರ್ಹವಾಗಿ ಸುಧಾರಿಸಲಿದೆ. ಜೊತೆಗೆ, ಇದು ನೋಯ್ಡಾ ಸೆಕ್ಟರ್-61 ಬ್ಲೂ ಲೈನ್ ಇಂಟರ್‌ಚೇಂಜ್ (ಸಂಪರ್ಕ ನಿಲ್ದಾಣ) ಸೇರಿದಂತೆ ಹೆಚ್ಚಿನ ಬೇಡಿಕೆಯಿರುವ ಮಾರ್ಗಗಳೊಂದಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.
ಈ ಹಂತವು ನೋಯ್ಡಾದ ಪ್ರಮುಖ ವಲಯಗಳನ್ನು ಸುಗಮವಾಗಿ ಜೋಡಿಸುವ ಗುರಿಯನ್ನು ಹೊಂದಿದೆ, ಇವುಗಳಲ್ಲಿ ಈ ಕೆಳಗಿನವು ಸೇರಿವೆ:
ಈ ಪ್ರಮುಖ ಪ್ರದೇಶಗಳನ್ನು ಮೆಟ್ರೋ ಜಾಲದೊಂದಿಗೆ ಜೋಡಿಸುವ ಮೂಲಕ, ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗಿನ ಅಕ್ವಾ ಲೈನ್ ಮೆಟ್ರೋ ರೈಲು ಮಾರ್ಗದ ವಿಸ್ತರಣೆಯು, ಸಂಪರ್ಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆರ್ಥಿಕ ಚಟುವಟಿಕೆಯನ್ನೂ ಉತ್ತೇಜಿಸಲಿದೆ ಹಾಗೂ ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ಸಾಮಾನ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ, ನಿವಾಸಿಗಳು ಮತ್ತು ಪ್ರಯಾಣಿಕರ ನಗರ ಸಂಚಾರವನ್ನು ಸುಗಮಗೊಳಿಸಲಿದೆ.

*****