Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಪ್ರದರ್ಶನ 2026ಕ್ಕೆ ಪ್ರಧಾನಮಂತ್ರಿ ಚಾಲನೆ

ನವದೆಹಲಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಪ್ರದರ್ಶನ 2026ಕ್ಕೆ ಪ್ರಧಾನಮಂತ್ರಿ ಚಾಲನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ ಪೋ 2026 ಅನ್ನು ಉದ್ಘಾಟಿಸಿದರು.

ನವೋದ್ಯಮಿಗಳು, ಸಂಶೋಧಕರು ಮತ್ತು ತಂತ್ರಜ್ಞಾನ ಉತ್ಸಾಹಿಗಳ ಪೈಕಿ ಇರುವುದು ಕೃತಕ ಬುದ್ಧಿಮತ್ತೆ, ಭಾರತೀಯ ಪ್ರತಿಭೆ ಮತ್ತು ನಾವಿನ್ಯತೆಗಳ ಅನನ್ಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಎಐ ಯಲ್ಲಿ ಭಾರತದ ಪ್ರಗತಿಯು ರಾಷ್ಟ್ರಕ್ಕೆ ಪರಿವರ್ತನಾತ್ಮಕ ಪರಿಹಾರಗಳನ್ನು ರೂಪಿಸುವುದಲ್ಲದೆ ಜಾಗತಿಕವಾಗಿ ಮುನ್ನಡೆಯಲು ಕೊಡುಗೆ ನೀಡಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಶ್ರೀ ಮೋದಿ ಅವರ ಎಕ್ಸ್‌ ಪೋಸ್ಟ್‌ ಹೀಗಿದೆ:

“ಭಾರತ ಮಂಟಪದಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್ ಪೋ 2026 ಅನ್ನು ಉದ್ಘಾಟಿಸಿದೆ.

ಇಲ್ಲಿ ನಾವಿನ್ಯಕಾರರು, ಸಂಶೋಧಕರು ಮತ್ತು ತಂತ್ರಜ್ಞಾನ ಉತ್ಸಾಹಿಗಳ ನಡುವೆ ಸೇರಿರುವುದು ಕೃತಕಬುದ್ಧಿಮತ್ತೆ (AI), ಭಾರತೀಯ ಪ್ರತಿಭೆ ಮತ್ತು ನಾವಿನ್ಯತೆಯ ಅನನ್ಯ ಸಾಮರ್ಥ್ಯದ ನೋಟ ನೀಡುತ್ತದೆ. ಒಟ್ಟಾಗಿ, ನಾವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಪರಿಹಾರಗಳನ್ನು ರೂಪಿಸಲಿದ್ದೇವೆ!”

 

*****