Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಗತಿಯ ಮೂಲಭೂತ ಕಾರಣಗಳನ್ನು ಬಿಂಬಿಸುವ ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತಂ ಪುಸ್ತಕವನ್ನು ಹಂಚಿಕೊಂಡಿದ್ದು, ಪ್ರಯತ್ನ, ಸ್ವಯಂ ನಿಯಂತ್ರಣ, ಕೌಶಲ್ಯ, ಜಾಗರೂಕತೆ, ತಾಳ್ಮೆ, ಜ್ಞಾಪಕ ಶಕ್ತಿ ಮತ್ತು ಚಿಂತನಶೀಲ ಪರಿಗಣನೆಯೊಂದಿಗೆ ಯಾವುದೇ ಕಾರ್ಯವನ್ನು ಪ್ರಾರಂಭಿಸುವುದು ಪ್ರಗತಿಯ ಮೂಲಭೂತ ಕಾರಣಗಳಾಗಿವೆ ಎಂದು ಒತ್ತಿ ಹೇಳಿದ್ದಾರೆ.

ತಾಳ್ಮೆ ಮತ್ತು ಸಮರ್ಪಣೆಯಿಂದ ಮಾಡಿದ ಕಠಿಣ ಪರಿಶ್ರಮವು ಗಮನಾರ್ಹ ಯಶಸ್ಸನ್ನು ನೀಡುತ್ತದೆ ಎಂದು ಹೇಳಿದ ಪ್ರಧಾನಿ, ಇದು ರಾಷ್ಟ್ರದ ಸಮೃದ್ಧಿ ಮತ್ತು ಶಕ್ತಿಯನ್ನು ಹೊಸ ಹುರುಪಿನಿಂದ ತುಂಬುತ್ತದೆ ಎಂದು ಗಮನಸೆಳೆದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ:

“संयम और समर्पण के साथ किया गया परिश्रम अद्भुत सफलता दे सकता है। इससे राष्ट्र की समृद्धि और सामर्थ्य को भी एक नई ऊर्जा मिलती है।

उत्थानं संयमो दाक्ष्यमप्रमादो धृतिः स्मृतिः।

समीक्ष्य च समारम्भो विद्धिमूलं भवस्य तु॥”

ಪ್ರಯತ್ನ, ಆತ್ಮ ಸಂಯಮ, ಕೌಶಲ್ಯ, ಜಾಗರೂಕತೆ, ತಾಳ್ಮೆ, ಜ್ಞಾಪಕ ಶಕ್ತಿ ಮತ್ತು ಚಿಂತನಶೀಲ ಪರಿಗಣನೆಯೊಂದಿಗೆ ಯಾವುದೇ ಕೆಲಸವನ್ನು ಪ್ರಾರಂಭಿಸುವುದು ಇವೆಲ್ಲವೂ ಪ್ರಗತಿಯ ಮೂಲಭೂತ ಕಾರಣಗಳಾಗಿವೆ.

 

*****