Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿನಯ, ಕ್ಷಮೆ ಮತ್ತು ಸಜ್ಜನಿಕೆಯ ಗುಣಗಳನ್ನು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಮನುಷ್ಯನಲ್ಲಿ ವಿನಯ, ಕ್ಷಮೆ ಮತ್ತು ಸಜ್ಜನಿಕೆಯ ನಡೆ-ನುಡಿಗಳೇ ವ್ಯಕ್ತಿತ್ವದ ನಿಜವಾದ ಆಭರಣಗಳಾಗಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಗುಣಗಳನ್ನು ಹೊಂದುವ ಮೂಲಕ ಜನರು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ದಿಸೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ-

“तेजः क्षमा धृतिः शौचमद्रोहो नातिमानिता।

भवन्ति सम्पदं दैवीमभिजातस्य भारत।। ”

”ತೇಜಸ್ಸು, ಕ್ಷಮೆ, ಅಚಲ ಧೈರ್ಯ, ಶುದ್ಧ ನಡೆ-ನುಡಿ, ರಾಷ್ಟ್ರದತ್ತ ನಿಷ್ಠಾವಂತ ಸಮರ್ಪಣೆ ಹಾಗೂ ಅಹಂಕಾರರಹಿತ ವಿನಮ್ರ ವ್ಯಕ್ತಿತ್ವ — ಇಂತಹ ದೈವಿಕ ಗುಣಗಳು ವ್ಯಕ್ತಿಯ ಲಕ್ಷಣಗಳೆಂದು ಸಾರುತ್ತದೆ.”

ಪ್ರಧಾನಮಂತ್ರಿಗಳು X ನಲ್ಲಿ;

“विनम्रता, क्षमाशीलता और उत्तम आचरण ही व्यक्तित्व के सच्चे आभूषण हैं। इन गुणों के साथ ही आज देशवासी विकसित भारत के संकल्प की सिद्धि में निरंतर जुटे हैं।

तेजः क्षमा धृतिः शौचमद्रोहो नातिमानिता।

भवन्ति सम्पदं दैवीमभिजातस्य भारत।।”

 

*****