ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್ ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿದರು.
ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರು ಅಧ್ಯಕ್ಷರಾದ ನಂತರ ತಮ್ಮ ಮೊದಲ ವಿದೇಶ ಭೇಟಿಗಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಭಾರತಕ್ಕೆ ಸಂದ ಗೌರವ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅಧ್ಯಕ್ಷರು ಭಾರತದಲ್ಲಿನ ತಮ್ಮ ಕಾರ್ಯಕ್ರಮವನ್ನು ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ ಬೋಧಗಯಾದಿಂದ ಪ್ರಾರಂಭಿಸಿದ್ದಕ್ಕಾಗಿ ಅವರು ಸಂತೋಷ ವ್ಯಕ್ತಪಡಿಸಿದರು.
ಮಾತುಕತೆಯ ಸಂದರ್ಭದಲ್ಲಿ, ಇಬ್ಬರೂ ನಾಯಕರು ಭಾರತ-ಮ್ಯಾನ್ಮಾರ್ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.
ಈ ಚರ್ಚೆಗಳು ವ್ಯಾಪಾರ, ಅಪರೂಪದ ಖನಿಜಗಳು, ಆರೋಗ್ಯ ರಕ್ಷಣೆ, ಸಂಪರ್ಕ ವ್ಯವಸ್ಥೆ, ಪರಂಪರೆಯ ಮರುಸ್ಥಾಪನೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಒಳಗೊಂಡಿದ್ದವು. ಕಡಲ ಭದ್ರತೆ, ಸೈಬರ್ ಭದ್ರತೆ ಮತ್ತು ಪರಸ್ಪರ ಹಿತಾಸಕ್ತಿಯ ಇತರ ಕ್ಷೇತ್ರಗಳಲ್ಲಿ ನಿಕಟವಾಗಿ ಶ್ರಮಿಸಲು ಉಭಯ ದೇಶದವರು ಒಪ್ಪಿಕೊಂಡರು.
ಭಾರತದ ‘ನೇಬರ್ ಹುಡ್ ಫಸ್ಟ್’ (ನೆರೆಹೊರೆಯವರು ಮೊದಲು), ‘ಆಕ್ಟ್ ಈಸ್ಟ್’ ಮತ್ತು ಇಂಡೋ-ಪೆಸಿಫಿಕ್ ನೀತಿಗಳಲ್ಲಿ ಮ್ಯಾನ್ಮಾರ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಇದು ಮ್ಯಾನ್ಮಾರ್ ಜೊತೆಗಿನ ಸಂಬಂಧಗಳಿಗೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತದೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಬರೆದಿದ್ದಾರೆ;
“ಮ್ಯಾನ್ಮಾರ್ ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರೊಂದಿಗೆ ಫಲಪ್ರದ ಸಭೆ ನಡೆಯಿತು. ಅವರು ಅಧ್ಯಕ್ಷರಾದ ನಂತರ ತಮ್ಮ ಮೊದಲ ವಿದೇಶ ಭೇಟಿಗಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ನಮಗೆ ಭಾರತದಲ್ಲಿ ಗೌರವದ ವಿಷಯವಾಗಿದೆ. ಅವರು ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ ಬೋಧಗಯಾದಿಂದ ಈ ಭೇಟಿಯನ್ನು ಪ್ರಾರಂಭಿಸಿದ್ದು ಅಷ್ಟೇ ಸಂತೋಷದ ಸಂಗತಿಯಾಗಿದೆ. ನಾವು ಭಾರತ-ಮ್ಯಾನ್ಮಾರ್ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದೆವು. ಭಾರತದ ‘ನೇಬರ್ಹುಡ್ ಫಸ್ಟ್’, ‘ಆಕ್ಟ್ ಈಸ್ಟ್’ ಮತ್ತು ಇಂಡೋ-ಪೆಸಿಫಿಕ್ ನೀತಿಗಳಲ್ಲಿ ಮ್ಯಾನ್ಮಾರ್ ಅತ್ಯಂತ ಪ್ರಮುಖವಾಗಿದೆ.”
“ನಮ್ಮ ಮಾತುಕತೆಗಳು ವ್ಯಾಪಾರ, ಅಪರೂಪದ ಖನಿಜಗಳು, ಆರೋಗ್ಯ ರಕ್ಷಣೆ, ಸಂಪರ್ಕ ವ್ಯವಸ್ಥೆ, ಪರಂಪರೆ ಮರುಸ್ಥಾಪನೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಒಳಗೊಂಡಿದ್ದವು. ಕಡಲ ಭದ್ರತೆ, ಸೈಬರ್ ಭದ್ರತೆ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ನಿಕಟವಾಗಿ ಶ್ರಮಿಸಲು ನಾವು ಒಪ್ಪಿಕೊಂಡಿದ್ದೇವೆ.”
*****
Had a productive meeting with President U Min Aung Hlaing of Myanmar. We in India are honoured that he has chosen India for his first foreign visit as President. Equally gladdening is the fact that he began the visit from Bodh Gaya, with the blessings of Lord Buddha. We reviewed… pic.twitter.com/eL1sXgsrE6
— Narendra Modi (@narendramodi) June 1, 2026
Our talks covered ways to deepen cooperation in trade, rare earths, healthcare, connectivity, heritage restoration and capacity building. We also agreed to work closely in areas such as maritime security, cyber security and more. pic.twitter.com/1xTyJ2RiI0
— Narendra Modi (@narendramodi) June 1, 2026