ಅನುಜ್ ಶ್ರೀವತ್ರಿ ಅವರು ಪ್ರತಿಷ್ಠಿತ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಜಯಿಸಿದ್ದು, ಭಾರತವು ಚೆಸ್ ಗ್ರ್ಯಾಂಡ್ ಮಾಸ್ಟರ್ ಗಳ ಶತಕ ತಲುಪಿರುವ ಐತಿಹಾಸಿಕ ಮೈಲಿಗಲ್ಲನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ. ಇದು ಅನನ್ಯ ಸಾಧನೆ ಎಂದು ಬಣ್ಣಿಸಿರುವ ಪ್ರಧಾನಮಂತ್ರಿಯವರು, ಅನುಜ್ ಶ್ರೀವತ್ರಿ ಅವರು ಭಾರತದ 100ನೇ ಚೆಸ್ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತವು 100 ಗ್ರ್ಯಾಂಡ್ ಮಾಸ್ಟರ್ ಗಳನ್ನು ಹೊಂದುವ ಹಂತವನ್ನು ತಲುಪಿರುವುದು ಗಮನಾರ್ಹ ಮೈಲಿಗಲ್ಲಾಗಿದೆ ಎಂದು ಅವರು ಉದ್ಗರಿಸಿದ್ದಾರೆ. ಇದು ದೇಶದ ಆಟಗಾರರ ಅಪಾರ ಪ್ರತಿಭೆ, ಸಮರ್ಪಣಾ ಭಾವ ಮತ್ತು ಕಠಿಣ ಪರಿಶ್ರಮವನ್ನು, ಹಾಗೆಯೇ ಯುವಜನರಲ್ಲಿ ಚೆಸ್ ಆಟದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸಿದೆ.
ದೇಶದ ವಿವಿಧ ಭಾಗಗಳಿಂದ ಯುವ ಚೆಸ್ ಪ್ರತಿಭೆಗಳು ಹೊರಹೊಮ್ಮುತ್ತಾ ಜಾಗತಿಕ ವೇದಿಕೆಯಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದನ್ನು ನೋಡಿ ಪ್ರಧಾನಮಂತ್ರಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಾಧನೆಯು ಇನ್ನೂ ಅನೇಕ ಯುವಜನರು ಚೆಸ್ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಮತ್ತು ಅದರಲ್ಲಿ ಶ್ರೇಷ್ಠತೆ ಸಾಧಿಸಲು ಸ್ಫೂರ್ತಿಯಾಗಲಿ ಎಂದು ಅವರು ಆಶಿಸಿದ್ದಾರೆ.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
“ಚದುರಂಗದಲ್ಲಿ ಭಾರತಕ್ಕೆ ಶತಕ!
ಇದು ಅನನ್ಯ ಸಾಧನೆಯಲ್ಲವೇ?
ಭಾರತದಲ್ಲಿ ಈಗ ನೂರು ಚೆಸ್ ಗ್ರ್ಯಾಂಡ್ ಮಾಸ್ಟರ್ ಗಳಿದ್ದಾರೆ!
ಭಾರತದ 100ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿರುವ ಅನುಜ್ ಶ್ರೀವತ್ರಿ ಅವರಿಗೆ ಅಭಿನಂದನೆಗಳು! ಎಂತಹ ಅದ್ಭುತ ಸಾಧನೆ ಇದು.
ಭಾರತವು 100 ಗ್ರ್ಯಾಂಡ್ ಮಾಸ್ಟರ್ ಗಳನ್ನು ಹೊಂದುವ ಮೈಲಿಗಲ್ಲನ್ನು ತಲುಪಿರುವುದು ಒಂದು ಗಮನಾರ್ಹ ಸಾಧನೆಯಾಗಿದೆ. ಇದು ನಮ್ಮ ಆಟಗಾರರ ಅಪಾರ ಪ್ರತಿಭೆ, ಸಮರ್ಪಣಾ ಭಾವ ಮತ್ತು ಕಠಿಣ ಪರಿಶ್ರಮವನ್ನು, ಹಾಗೆಯೇ ನಮ್ಮ ಯುವಜನರಲ್ಲಿ ಹೆಚ್ಚುತ್ತಿರುವ ಚೆಸ್ ಕ್ರೀಡೆಯ ಜನಪ್ರಿಯತೆಯನ್ನು ಪ್ರತಿಬಿಂಬಿಸಿದೆ.
ದೇಶದ ವಿವಿಧ ಭಾಗಗಳಿಂದ ಯುವ ಚೆಸ್ ಪ್ರತಿಭೆಗಳು ಹೊರಹೊಮ್ಮಿ, ಜಾಗತಿಕ ವೇದಿಕೆಯಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದನ್ನು ನೋಡುವುದು ವಿಶೇಷವಾಗಿ ಸಂತೋಷದಾಯಕವಾಗಿದೆ.
ಈ ಸಾಧನೆಯು ಇನ್ನೂ ಅನೇಕ ಯುವಜನರು ಚದುರಂಗದಾಟದಲ್ಲಿ ತೊಡಗಿಕೊಳ್ಳಲು ಮತ್ತು ಶ್ರೇಷ್ಠತೆ ಸಾಧಿಸಲು ಪ್ರೇರಣೆ ನೀಡಲಿ.”
*****
India has hit a century in chess! Exceptional isn’t it? India is now home to a hundred chess Grandmasters! Congratulations to Anuj Shrivatri on becoming India’s 100th Chess Grandmaster! What a wonderful achievement it is. India reaching 100 Grandmasters is a remarkable milestone that reflects the immense talent, dedication and hard work of our players as well as the growing popularity of chess among our youth. It is particularly heartening to see young chess talents emerging from different parts of the country and making their mark on the global stage. May this achievement inspire many more youngsters to take up chess and pursue excellence.
— Narendra Modi (@narendramodi) November 10, 2026