Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವರ್ಷದ ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಪ್ರಶಸ್ತಿಗೆ ಭಾಜನರಾಗಿರುವ ಅಭಿಲಾಷಾ ಬರಾಕ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದ ಇಯರ್’ ಪ್ರಶಸ್ತಿಗೆ ಭಾಜನರಾಗಿರುವ ಮೇಜರ್ ಅಭಿಲಾಷಾ ಬರಾಕ್ ಅವರನ್ನು ಇಂದು ಅಭಿನಂದಿಸಿದ್ದಾರೆ. ಮೇಜರ್ ಬರಾಕ್ ಅವರು ಲೆಬನಾನ್‌ ನ ವಿಶ್ವಸಂಸ್ಥೆ ಮಧ್ಯಂತರ ಪಡೆ (ಯು ಎನ್ ಐ ಎಫ್ ಐ ಎಲ್) ನಲ್ಲಿ ಎಂಗೇಜ್‌ ಮೆಂಟ್ ಟೀಮ್ ಕಮಾಂಡರ್ ಮತ್ತು ಜೆಂಡರ್ ಫೋಕಲ್ ಪಾಯಿಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಗಮನಿಸಿದರು.

ಈ ಗೌರವವು ಅವರ ಅನುಕರಣೀಯ ಸೇವೆಗೆ ಮನ್ನಣೆಯಾಗಿದೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪ್ರಯತ್ನಗಳಿಗೆ ಭಾರತದ ದೀರ್ಘಕಾಲದ ಕೊಡುಗೆಯಾಗಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.

ಅವರ ಸಾಧನೆಯು ದೇಶ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸಲು ಆಶಿಸುವ ಅಸಂಖ್ಯಾತ ಯುವ ಭಾರತೀಯರಿಗೆ, ವಿಶೇಷವಾಗಿ ದೇಶದ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ : 

“ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿರುವ ಮೇಜರ್ ಅಭಿಲಾಷಾ ಬರಾಕ್ ಅವರಿಗೆ ಅಭಿನಂದನೆಗಳು. ಮೇಜರ್ ಬರಾಕ್ ಅವರು ಲೆಬನಾನ್‌ ನ ವಿಶ್ವಸಂಸ್ಥೆ ಮಧ್ಯಂತರ ಪಡೆ (ಯುನಿಫಿಲ್) ನಲ್ಲಿ ಎಂಗೇಜ್‌ಮೆಂಟ್ ಟೀಮ್ ಕಮಾಂಡರ್ ಮತ್ತು ಜೆಂಡರ್ ಫೋಕಲ್ ಪಾಯಿಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗೌರವವು ಅವರ ಅನನ್ಯ ಸೇವೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನಾ ಪ್ರಯತ್ನಗಳಿಗೆ ಭಾರತದ ದೀರ್ಘಕಾಲೀನ ಕೊಡುಗೆಯನ್ನು ಗುರುತಿಸುತ್ತದೆ. ರಾಷ್ಟ್ರ ಮತ್ತು ಮಾನವೀಯತೆಗೆ ಸೇವೆ ಸಲ್ಲಿಸಲು ಬಯಸುವ ಅಸಂಖ್ಯಾತ ಯುವ ಭಾರತೀಯರಿಗೆ, ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳಿಗೆ ಅವರ ಸಾಧನೆಯು ಸ್ಫೂರ್ತಿಯಾಗಿದೆ.”

 

*****