ಪಿಎಂಇಂಡಿಯಾ
ಮುಂಗಾರು ಋತುವಿನ ಪ್ರಗತಿ ಮತ್ತು ಎಲ್ ನಿನೊದಿಂದ ಆರ್ಥಿಕತೆಯ ಇತರ ವಲಯಗಳ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮದ ಹಿನ್ನೆಲೆಯಲ್ಲಿ 2026ರ ಜುಲೈ 7 ರಂದು ಸೇವಾ ತೀರ್ಥದಲ್ಲಿ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಆ ನಿಟ್ಟಿನಲ್ಲಿ ಕೈಗೊಂಡ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಲಾಯಿತು.
ಕೃಷಿ, ಇಂಧನ, ಸಹಕಾರ, ಕುಡಿಯುವ ನೀರು ಮತ್ತು ನೈರ್ಮಲ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆರ್ಥಿಕ ವ್ಯವಹಾರಗಳು, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ಭೂ ವಿಜ್ಞಾನ, ಕೃಷಿ ಸಂಶೋಧನೆ ಮತ್ತು ಶಿಕ್ಷಣ, ಭಾರತೀಯ ಹವಾಮಾನ ಇಲಾಖೆ (ಐಎಂಡಿ), ವಾರ್ತಾ ಮತ್ತು ಪ್ರಸಾರ, ಗ್ರಾಹಕ ವ್ಯವಹಾರಗಳು, ಹಣಕಾಸು ಸೇವೆಗಳು, ರಸಗೊಬ್ಬರಗಳು ಮತ್ತು ಕೇಂದ್ರ ಜಲ ಆಯೋಗ ಸೇರಿದಂತೆ ಹದಿನೈದಕ್ಕೂ ಅಧಿಕ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಮೊದಲಿಗೆ, ಐಎಂಡಿಯ ಅಧಿಕಾರಿಗಳು ಜೂನ್ ಮತ್ತು ಜುಲೈ 7 ರವರೆಗಿನ ಒಟ್ಟಾರೆ ಮಳೆಯ ಪರಿಸ್ಥಿತಿಯನ್ನು ಪ್ರಸ್ತುತಪಡಿಸಿದರು. ದೇಶದಲ್ಲಿಮುಂಗಾರು ಮಳೆ ಸ್ಥಿತಿಗತಿ ಮತ್ತು ಎಲ್ ನಿನೊದ ಸಂಭವನೀಯ ಪರಿಣಾಮದ ಕುರಿತು ಹವಾಮಾನ ಇಲಾಖೆ ಮಹಾನಿರ್ದೇಶಕರು ತಾಜಾ ಮಾಹಿತಿಯನ್ನು ಹಂಚಿಕೊಂಡರು. ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು 10 ದಿನಗಳ ತಡವಾಗಿ ಮುಂಗಾರು ಆರಂವಾಗಿದೆ. ಆದರೂ 2026ರ ಜುಲೈ 7ರವರೆಗೆ ಮಳೆಯಾಗಿರುವುದರಿಂದ, ಭಾರತದಾದ್ಯಂತ ಮಳೆ ಕೊರತೆ -12% ಕ್ಕೆ ಇಳಿದಿದೆ. ಜುಲೈ ಮೊದಲ ವಾರವು ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಿದೆ. ಜುಲೈ ಮತ್ತು ಆಗಸ್ಟ್ನಲ್ಲಿ ದುರ್ಬಲ ಅಥವಾ ಮಧ್ಯಮ ಎಲ್ ನಿನೊ ನಿರೀಕ್ಷಿಸಲಾಗಿದೆ. ಜುಲೈನಲ್ಲಿ ಮುಂಗಾರು ಋತುವಿನ ಶೇ.30 ಕ್ಕಿಂತ ಅಧಿಕ ಮಳೆಯಾಗುವುದರಿಂದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಎಲ್ ನಿನೊ ವರ್ಷವು ಆ ವರ್ಷದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಗೆ ಕಾರಣವಾಗದಿರಬಹುದು ಎಂದು ಸಹ ಉಲ್ಲೇಖಿಸಲಾಗಿದೆ.
ಮುಂಗಾರು ಋತುವಿನಲ್ಲಿ ಎಲ್ ನಿನೊದ ಸಂಭವನೀಯ ಪರಿಣಾಮಕ್ಕೆ ಸಿದ್ಧತೆಯ ಕುರಿತು ಕೃಷಿ ಕಾರ್ಯದರ್ಶಿ ವಿವರವಾದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಸಕಾಲಿಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಆಕಸ್ಮಿಕ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಲು ಮಳೆ, ಜಲಾಶಯ ಸಂಗ್ರಹಣೆ, ಬೆಳೆ ಬಿತ್ತನೆ, ಪರಿಕರಗಳ ಲಭ್ಯತೆ, ಮಾರುಕಟ್ಟೆ ಪ್ರವೃತ್ತಿಗಳು, ಉದಯೋನ್ಮುಖ ಕೀಟ ಮತ್ತು ರೋಗ ಪರಿಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯಗಳೊಂದಿಗೆ ಬೆಳೆ ಹವಾಮಾನ ವೀಕ್ಷಣಾ ಗುಂಪಿನ ಸಭೆಗಳನ್ನು ಪ್ರತಿ ವಾರ ನಡೆಸಲಾಗುತ್ತಿದೆ. 262 ದುರ್ಬಲ ಜಿಲ್ಲೆಗಳಿಗೆ ಜಿಲ್ಲಾ ಕೃಷಿ ಆಕಸ್ಮಿಕ ಯೋಜನೆಗಳನ್ನು ಅಪ್ ಡೇಟ್ ಮಾಡಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯು” ಭಾರತೀಯ ಕೃಷಿಯಲ್ಲಿ ಎಲ್ ನಿನೊ ಅಪಾಯಗಳನ್ನು ನಿರ್ವಹಿಸುವ” ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಜಿಲ್ಲೆಗಳಲ್ಲಿನ ಕೃಷಿ ವಿಜ್ಞಾನ ಕೇಂದ್ರಗಳಿಗಾಗಿ ಹೊರಡಿಸಿದೆ. ಹವಾಮಾನ ಸ್ಥಿತಿಸ್ಥಾಪಕ ಪ್ರಭೇದಗಳು ಮತ್ತು ತಂತ್ರಜ್ಞಾನಗಳಿಂದಾಗಿ ಮಳೆಯ ಕೊರತೆಯ ಹೊರತಾಗಿಯೂ ಆಹಾರ ಧಾನ್ಯಗಳ ಉತ್ಪಾದನೆಯನ್ನು ವರ್ಷಗಳಲ್ಲಿ ಕಾಯ್ದುಕೊಳ್ಳಲಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.
ಸೂಕ್ಷ್ಮ ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯಾಪ್ತಿಗಾಗಿ ಅಭಿಯಾನಗಳನ್ನು ಆರಂಭಿಸಲಾಗಿದೆ ಮತ್ತು ಕೃಷಿ, ಹಣಕಾಸು ಸೇವೆಗಳು ಮತ್ತು ಸಹಕಾರ ಇಲಾಖೆಗಳು ಸಮಯಕ್ಕೆ ಅನುಗುಣವಾಗಿ ಗರಿಷ್ಠ ವ್ಯಾಪ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಗೆ ಅತಿ ಸಣ್ಣ ಹಾಗೂ ಸಣ್ಣ ಮಟ್ಟದಲ್ಲಿ ಒಣ ಮೇವು, ಹಸಿರು ಮೇವು ಮತ್ತು ಜಾನುವಾರು ಮೇವಿನ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಸೂಚಿಸಲಾಯಿತು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಜಿಲ್ಲೆಗಳಲ್ಲಿನ ಪರಿಸ್ಥಿತಿ ಮತ್ತು ಇಂದಿನ ಸ್ಥಿರ ಪರಿಸ್ಥಿತಿಯ ಮೇಲ್ವಿಚಾರಣೆಯ ಬಗ್ಗೆ ತಿಳಿಸಲಾಗಿದೆ. ಇಲಾಖೆಯು ಸೂಕ್ಷ್ಮ ಜಿಲ್ಲೆಗಳಲ್ಲಿ ಸೂಕ್ಷ್ಮ ಮಟ್ಟದ ಯೋಜನೆ ಮತ್ತು ಮೇಲ್ವಿಚಾರಣೆಯನ್ನು ಖಚಿತಪಡಿಸುತ್ತದೆ ಎಂದು ನಿರ್ದೇಶಿಸಲಾಯಿತು. ಜಲಸಂಪನ್ಮೂಲ ಇಲಾಖೆಯು ದೇಶದಲ್ಲಿ ಅಂತರ್ಜಲ ಮತ್ತು ಜಲಾಶಯಗಳ ಸ್ಥಿತಿಗತಿಯ ವಿವರಗಳನ್ನು ಹಂಚಿಕೊಂಡು, ಪ್ರಸ್ತುತ ಪರಿಸ್ಥಿತಿ ಸ್ಥಿರವಾಗಿದ್ದರೂ, ಋತುವಿನ ಉದ್ದಕ್ಕೂ ನಿರಂತರ ಕಣ್ಗಾವಲು ಇಡಬೇಕು ಎಂದು ಹೇಳಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಸಿಗಾಳಿ ಮತ್ತು ಶಾಖದ ಅಲೆಗಳು, ಹೆಚ್ಚಿನ ಆರ್ದ್ರತೆ ಮತ್ತು ಡೆಂಗ್ಯೂ ಏಕಾಏಕಿ ಎರಡರ ಮೇಲ್ವಿಚಾರಣೆಗಾಗಿ ಸಲಹೆಗಳನ್ನು ಜಾರಿಗೆ ತಂದಿದೆ. ತಳಮಟ್ಟದವರೆಗೆ ಸೂಚನೆಗಳು ಮತ್ತು ಸಲಹೆಗಳ ಪರಿಣಾಮಕಾರಿ ಖಾತ್ರಿಪಡಿಸಿಕೊಳ್ಳಬೇಕು.
ಗ್ರಾಹಕ ವ್ಯವಹಾರಗಳ ಇಲಾಖೆಯು ಚಿಲ್ಲರೆ ಬೆಲೆಗಳ ಹಂಚಿಕೆಯ ಸ್ಥಿತಿ ಮತ್ತು ಅಕ್ಕಿ, ಗೋಧಿ ಮತ್ತು ದ್ವಿದಳ ಧಾನ್ಯಗಳ ದಾಸ್ತಾನುಗಳ ಲಭ್ಯತೆಯನ್ನು ಹಂಚಿಕೊಂಡಿದೆ. ರಸಗೊಬ್ಬರ ಇಲಾಖೆಯು ಹಿಂಗಾರಿಗೆ ಸಾಕಷ್ಟು ಲಭ್ಯತೆ ಮತ್ತು ಆರಂಭಿಕ ಸಮತೋಲನವನ್ನು ವರದಿ ಮಾಡಿದೆ. ಅಗತ್ಯ ಸರಕುಗಳು ಮತ್ತು ರಸಗೊಬ್ಬರಗಳ ಲಭ್ಯತೆಯನ್ನು ತಳಮಟ್ಟದಲ್ಲಿ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಎರಡೂ ಇಲಾಖೆಗಳಿಗೆ ಸೂಚಿಸಲಾಗಿದೆ.
ಜುಲೈ 1 ರಿಂದ ವಿಕಸಿತ ಭಾರತ- ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ವಿಬಿ-ಜಿ ರಾಮ್ ಜಿ )ಗಾಗಿ ಖಾತರಿ ಅಡಿಯಲ್ಲಿ ಆರಂಭವಾದ ಕಾರ್ಯಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವಿವರಿಸಲಾಯಿತು ಮತ್ತು ಈವರೆಗೆ 1 ಕೋಟಿ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯು ಹವಾಮಾನ ಸ್ಥಿತಿಸ್ಥಾಪಕ ಬೀಜ ಪ್ರಭೇದಗಳ ಹರಡುವಿಕೆಯನ್ನು ಹಂಚಿಕೊಂಡಿದೆ. ವಿದ್ಯುತ್ ಇಲಾಖೆಯು ಉತ್ಪಾದನೆ ಮತ್ತು ಲಭ್ಯತೆಯ ಸ್ಥಿತಿಯನ್ನು ಹಂಚಿಕೊಂಡಿದೆ.
ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು ಒಟ್ಟಾರೆ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಸೂಕ್ಷ್ಮ ಜಿಲ್ಲೆಗಳ ಮೇಲೆ ಮುಂಗಾರು/ತಡವಾಗಿ ಬರುವ ಮುಂಗಾರು ಮಳೆಯ ಪರಿಣಾಮಗಳನ್ನು ರಾಜ್ಯಗಳೊಂದಿಗೆ ಸಮನ್ವಯದಿಂದ ನಿರ್ಣಯಿಸಬೇಕು ಎಂದು ನಿರ್ದೇಶಿಸಿದರು. ಇದರಿಂದಾಗಿ ಅಗತ್ಯವಿದ್ದಾಗ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದರು.
ಮೇವಿನ ಅಭಿವೃದ್ಧಿ ಯೋಜನೆಗಳ ಜೊತೆಗೆ ಸಾಕಷ್ಟು ಮೇವಿನ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ರಾಜ್ಯಗಳೊಂದಿಗೆ ನಿಗದಿತ ಮೇಲ್ವಿಚಾರಣೆಯನ್ನು ಕೈಗೊಳ್ಳಬೇಕು ಎಂದು ಸಹ ಸೂಚಿಸಲಾಯಿತು. ಸೂಕ್ಷ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವುದು ಮೊದಲ ಆದ್ಯತೆಯಾಗಿರಬೇಕು. ದುರ್ಬಲ ಜಿಲ್ಲೆಗಳಲ್ಲಿನ ಜಲಾಶಯದ ಮಟ್ಟವನ್ನು ನಿಗದಿತವಾಗಿ ಗಮನಿಸಲಾಗುತ್ತಿದೆ ಮತ್ತು ಜಲಾಶಯಗಳ ನೀರಿನ ಅತ್ಯುತ್ತಮ ಬಳಕೆ ಇದೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಲಭ್ಯವಿರುವ ನೀರಿನ ನ್ಯಾಯಯುತ ಬಳಕೆಯನ್ನು ಉತ್ತೇಜಿಸಲು ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು.
ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಗಿದೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಚಿವಾಲಯಗಳು ನಿಕಟ ಸಮನ್ವಯದಿಂದ ಮತ್ತು ರಾಜ್ಯಗಳೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಒತ್ತಿ ಹೇಳಲಾಯಿತು.
*****