ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಕಾರ್ತದಲ್ಲಿಂದು ನಡೆದ ಅನಿವಾಸಿ ಭಾರತೀಯ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅವರಿಗೆ, ಅನಿವಾಸಿ ಭಾರತೀಯರು ಮತ್ತು ಭಾರತದ ಇಂಡೋನೇಷ್ಯಾದ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ನೀಡಿದರು. ವಿಶೇಷ ಗೌರವದ ಸಂಕೇತವಾಗಿ ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಪಾಲ್ಗೊಂಡರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಉತ್ಸಾಹಭರಿತ ಸ್ವಾಗತಕ್ಕಾಗಿ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದರು. ಅಧ್ಯಕ್ಷ ಪ್ರಬೋವೊ ಅವರ ಉಪಸ್ಥಿತಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನ ಮಂತ್ರಿ, ಅವರನ್ನು ಒಬ್ಬ ಮಹಾನ್ ನಾಯಕ ಮತ್ತು ಭಾರತದ ನಿಜವಾದ ಮಿತ್ರ ಎಂದು ಬಣ್ಣಿಸಿದರು. ಇಂಡೋನೇಷ್ಯಾದ ಪ್ರಗತಿ ಮತ್ತು ಸಮೃದ್ಧಿಗೆ ಅನಿವಾಸಿ ಭಾರತೀಯರು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ ಅವರು, ಎರಡೂ ದೇಶಗಳ ನಡುವಿನ ಸ್ನೇಹದ ‘ಜೀವಂತ ಸೇತುವೆ’ಯಾಗಿ ಸಮುದಾಯ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪರಸ್ಪರ ನಂಬಿಕೆ, ಹಂಚಿಕೆಯ ಪರಂಪರೆ ಮತ್ತು ಸಾಗರ ಸಂಪರ್ಕಗಳ ಆಧಾರದ ಮೇಲೆ ಇಂಡೋನೇಷ್ಯಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಬಾಲಿ ಯಾತ್ರೆ, ವೇಸಕ್ ತೀರ್ಥಯಾತ್ರೆ ಮತ್ತು ನಳಂದ ವಿಶ್ವವಿದ್ಯಾಲಯದಂತಹ ಆಧುನಿಕ ಕಾಲದ ಸಂಪರ್ಕಗಳು ಎರಡೂ ದೇಶಗಳ ನಡುವಿನ ಪ್ರಾಚೀನ ನಾಗರಿಕ ಸಂಬಂಧಗಳನ್ನು ಹೇಗೆ ಪೋಷಿಸುತ್ತಿವೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು
ಇತ್ತೀಚಿನ ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಪ್ರಮುಖವಾಗಿ ಉಲ್ಲೇಖಿಸಿದ ಪ್ರಧಾನ ಮಂತ್ರಿ, ಮುಂದಿನ ಪೀಳಿಗೆಯ ಮೂಲಸೌಕರ್ಯ ಅಭಿವೃದ್ಧಿ, ಸ್ಟಾರ್ಟ್ ಅಪ್ ಕ್ರಾಂತಿ ಮತ್ತು 250 ದಶಲಕ್ಷಕ್ಕೂ ಅಧಿಕ ಜನರನ್ನು ಬಡತನ ರೇಖೆಯಿಂದ ಹೊರತಂದಿರುವ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಭಾರತವು ಕಳೆದ ಹಲವು ವರ್ಷಗಳಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು ಜಾಗತಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದರು. ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು 1.4 ಶತಕೋಟಿ ಜನರ ಆಕಾಂಕ್ಷೆಗಳ ಪ್ರತಿಬಿಂಬವಾಗಿ ನೋಡಬೇಕೆಂದು ಅವರು ಕರೆ ನೀಡಿದರು.
”ವಿಕಸಿತ ಭಾರತ 2047’’ ಮತ್ತು ‘ಇಂಡೋನೇಷ್ಯಾ ಎಮಾಸ್ 2045’ ರ ಹಂಚಿಕೆಯ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಸಮುದಾಯವು ಕೊಡುಗೆ ನೀಡಬೇಕೆಂದು ಅವರು ಮನವಿ ಮಾಡಿದರು. ಇಂಡೋನೇಷ್ಯಾ ಮತ್ತು ಆಸಿಯಾನ್ ಪ್ರದೇಶದಲ್ಲಿ ಪ್ರಗತಿ ಮತ್ತು ಸಮೃದ್ಧಿಯನ್ನು ತರುವಲ್ಲಿ ಭಾರತವು ಬಲವರ್ಧಕವಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಭಾರತ ಮತ್ತು ಇಂಡೋನೇಷ್ಯಾ ಎರಡು ಸಹಸ್ರಮಾನಗಳಿಗೂ ಅಧಿಕ ಕಾಲದಿಂದಲೂ ನಿಕಟ ನಾಗರಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧವನ್ನು ಹಂಚಿಕೊಂಡಿವೆ. ಇಂದು ಇಂಡೋನೇಷ್ಯಾದಲ್ಲಿ ಸುಮಾರು 1,50,000 ಭಾರತೀಯ ಮೂಲದ ವ್ಯಕ್ತಿಗಳು (ಪಿಐಒಗಳು) ಮತ್ತು ಸುಮಾರು 15,000 ಅನಿವಾಸಿ ಭಾರತೀಯರು (ಎನ್ ಆರ್ ಐಗಳು) ವಾಸಿಸುತ್ತಿದ್ದಾರೆ. ಭಾರತೀಯ ಸಮುದಾಯವು ಇಂಡೋನೇಷ್ಯಾದ ಆರ್ಥಿಕ ಬೆಳವಣಿಗೆ ಮತ್ತು ಬಹುಸಂಸ್ಕೃತಿ ಸಮಾಜಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಾ, ಉಭಯ ದೇಶಗಳ ನಡುವಿನ ಬಾಂಧವ್ಯದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
*****
The warmth and affection of the Indian diaspora in Indonesia are truly heartwarming. Speaking at a community programme in Jakarta.
— Narendra Modi (@narendramodi) July 7, 2026
https://t.co/HKnd0RPuEb
Indonesia's highest honour... This is an honour for the 140 crore people of India... This award is yet another symbol of the close friendship between India and Indonesia: PM @narendramodi during community programme in Jakarta pic.twitter.com/bxXYyaZcqs
— PMO India (@PMOIndia) July 7, 2026
The relationship between India and Indonesia is rooted in our shared civilisational heritage and the seas that connect us. pic.twitter.com/PRUxSCNQnJ
— PMO India (@PMOIndia) July 7, 2026
Today, India's economy is playing a major role in driving global growth. pic.twitter.com/mZQL2tY9bp
— PMO India (@PMOIndia) July 7, 2026
If I had to sum up the speed and scale of India's growth in just one line, I would say... 1.4 billion aspirations in motion: PM @narendramodi pic.twitter.com/I05hkk2jmZ
— PMO India (@PMOIndia) July 7, 2026
India is not just the world's fastest growing economy... India is a nation with a billion plus dreams in motion. pic.twitter.com/Se2pdkPgoF
— PMO India (@PMOIndia) July 7, 2026
From energy to connectivity and chip manufacturing... India is unstoppable! pic.twitter.com/aUSySgVWVb
— PMO India (@PMOIndia) July 7, 2026
India's self-reliance is a multiplying force not only for Indonesia but for the entire ASEAN region. pic.twitter.com/0gc2roKzzf
— PMO India (@PMOIndia) July 7, 2026
The atmosphere at the community programme in Jakarta was truly euphoric! Deeply touched by the warmth and affection of the Indian diaspora. pic.twitter.com/CeKhUvUnv7
— Narendra Modi (@narendramodi) July 7, 2026
Delighted that my friend, President Prabowo Subianto, joined the community programme in Jakarta and made the occasion even more memorable. His address clearly reflected his affection for the people of India.@prabowo pic.twitter.com/czNiyvM0nj
— Narendra Modi (@narendramodi) July 7, 2026
I am happy that India and Indonesia are writing a new future together, built on mutual trust. The Indian community living in Indonesia will be among the greatest beneficiaries of this partnership. pic.twitter.com/en4SDy3whc
— Narendra Modi (@narendramodi) July 7, 2026
The growth India has achieved today is due to the efforts of 1.4 billion Indians. And, the success of India is contributing to a better planet. pic.twitter.com/e5nejSdrjz
— Narendra Modi (@narendramodi) July 7, 2026
I have a special appeal to the younger generation of the Indian community living in Indonesia… pic.twitter.com/U3gPN08yYk
— Narendra Modi (@narendramodi) July 7, 2026
Thank you President Prabowo Subianto for your address at the community programme earlier today, which was filled with unparalleled warmth and appreciation for India… @prabowohttps://t.co/R1FdkD3FmC
— Narendra Modi (@narendramodi) July 7, 2026